Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು
ದೇಶಪ್ರಮುಖ

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

Share
1 Min Read
SHARE

newsics.com | ನ್ಯೂಸಿಕ್ಸ್

ಕಾರಿನೊಳಗೆ ಇಡಲಾಗಿದ್ದ ಎಳನೀರು ಚಾಲಕನ ಸೀಟಿನ ಕೆಳಗೆ ಜಾರಿ ಬ್ರೇಕ್ ಹಾಗೂ ಕ್ಲಚ್ ಪೆಡಲ್‌ಗಳ ನಡುವೆ ಸಿಲುಕಿಕೊಂಡ ಪರಿಣಾಮ ಕಾರು ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದ್ದು, ಖ್ಯಾತ ಅರ್ಚಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಜಕ್ಕಂಪುಡಿ ಸಮೀಪದ ವಿಜಯವಾಡ ಬೈಪಾಸ್‌ನಲ್ಲಿ ನಡೆದಿದೆ.

ಮೃತರನ್ನ ರಾಜಮಹೇಂದ್ರವರಂ ಮೂಲದ ಖ್ಯಾತ ಅರ್ಚಕ ದುವ್ವುರಿ ಹರಿಪ್ರಸಾದ್ (52) ಹಾಗೂ ದ್ವಿಚಕ್ರ ವಾಹನ ಸವಾರ ಎಂದು ಗುರುತಿಸಲಾಗಿದೆ. ಹರಿಪ್ರಸಾದ್ ಅವರ ಕಿರಿಯ ಮಗನ ಮದುವೆ ಗುರುವಾರ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆ ಸಮಾರಂಭದ ಬಳಿಕ ಶುಕ್ರವಾರ ಮಧ್ಯಾಹ್ನ ಕುಟುಂಬ ಸದಸ್ಯರೆಲ್ಲರೂ ರಾಜಮಹೇಂದ್ರವರಂಗೆ ಮರಳುತ್ತಿದ್ದರು.

ಕುಟುಂಬದವರು ಒಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ಹರಿಪ್ರಸಾದ್ ಅವರು ಪೂಜಾ ಸಾಮಗ್ರಿಗಳೊಂದಿಗೆ ಮತ್ತೊಂದು ಕಾರಿನಲ್ಲಿ ಸಂಬಂಧಿಕರೊಬ್ಬರ ಜೊತೆ ಹೊರಟಿದ್ದರು. ವಿಜಯವಾಡ ಸಮೀಪದ ನಲ್ಲಗುಂಟದಲ್ಲಿ ಸಂಬಂಧಿಕರು ಕಾರಿನಿಂದ ಇಳಿದ ನಂತರ ಹರಿಪ್ರಸಾದ್ ಅವರು ಒಬ್ಬರೇ ವಾಹನ ಚಲಾಯಿಸುತ್ತಿದ್ದರು.

ಗೊಲ್ಲಪುಡಿ ಬೈಪಾಸ್ ರಸ್ತೆಗೆ ತಲುಪುತ್ತಿದ್ದಂತೆ ಕಾರು ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ಮೊದಲು ರಸ್ತೆ ಮೇಲೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು, ನಂತರ ವೇಗವಾಗಿ ಮುನ್ನುಗ್ಗಿ ಕಂಟೇನರ್‌ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರಿಪ್ರಸಾದ್ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಪ್ರಾಥಮಿಕ ಹಂತದಲ್ಲೇ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ಕಾರಿನ ಹಿಂದಿನ ಸೀಟಿನಲ್ಲಿ ಇಡಲಾಗಿದ್ದ ಎಳನೀರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಾಗ ಮುಂಭಾಗಕ್ಕೆ ಜಾರಿ ಚಾಲಕನ ಕಾಲಿನ ಬಳಿ ಬಂದು ಬ್ರೇಕ್ ಹಾಗೂ ಕ್ಲಚ್ ಪೆಡಲ್‌ಗಳ ನಡುವೆ ಸಿಲುಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರಿಂದ ಬ್ರೇಕ್ ಹಾಕಲು ಸಾಧ್ಯವಾಗದೇ ಕಾರು ನಿಯಂತ್ರಣ ತಪ್ಪಿ ಕಂಟೇನರ್‌ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Kalaburgi ‘ನಾನು ಸಚಿವನಾಗಿ ಇರುವ ತನಕ ರಾಜ್ಯದಲ್ಲಿ RSS ಪಥಸಂಚಲನಕ್ಕೆ ನನ್ನ ಅನುಮತಿ ಕಡ್ಡಾಯ’ – ಪ್ರಿಯಾಂಕ್ ಖರ್ಗೆ ವಾರ್ನಿಂಗ್

 

Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ

 

TAGGED:Two people including a famous priest die after car goes out of control due to tender coconut
Share This Article
Facebook Twitter Copy Link Print
Previous Article Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ
Next Article Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

Popular Posts

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

1 Min Read

You Might Also Like

ಕರ್ನಾಟಕದೇಶಪ್ರಮುಖ

Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ

2 Min Read
ಕರ್ನಾಟಕದೇಶಪ್ರಮುಖ

Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು

3 Min Read
ಕರ್ನಾಟಕದೇಶಪ್ರಮುಖ

Ayodhye ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್‌ ರಾಯ್‌ ರಾಜೀನಾಮೆ ಅಂಗೀಕರಿಸಿದ ಟ್ರಸ್ಟ್

1 Min Read
ದೇಶಪ್ರಮುಖ

Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?