Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > 8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ – ಶೀಘ್ರದಲ್ಲೇ ಭತ್ಯೆ ಹೆಚ್ಚಳದ ಬಂಪರ್ ಕೊಡುಗೆ
ಕರ್ನಾಟಕದೇಶಪ್ರಮುಖ

8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ – ಶೀಘ್ರದಲ್ಲೇ ಭತ್ಯೆ ಹೆಚ್ಚಳದ ಬಂಪರ್ ಕೊಡುಗೆ

Share
2 Min Read
SHARE

newsics.com| ನ್ಯೂಸಿಕ್ಸ್

ದೇಶದ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪೆನ್ಷನ್‌ದಾರರಿಗೆ ಜುಲೈ ತಿಂಗಳು ಭರ್ಜರಿ ಸಿಹಿ ಸುದ್ದಿ ತರುವ ಎಲ್ಲಾ ಸಾಧ್ಯತೆ ಇದ್ದು, ಪ್ರಸ್ತುತ ಎಲ್ಲರ ಕಣ್ಣುಗಳು ಎಂಟನೇ ವೇತನ ಆಯೋಗದ ಮೇಲಿದೆ., ಮತ್ತೊಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಭತ್ಯೆ ಹೆಚ್ಚಳದ ಬಂಪರ್ ಕೊಡುಗೆಯನ್ನು ಘೋಷಿಸಲಿದೆ.

ಇತ್ತೀಚಿನ ಹೊಸ ಹಣದುಬ್ಬರ ಅಂಕಿಅಂಶಗಳು ಹೊರಬಿದ್ದಿದ್ದು, ಅದರ ಪ್ರಕಾರ ಈ ವರ್ಷ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಅಥವಾ ಡಿಎ ಕನಿಷ್ಠ ಶೇಕಡಾ 3 ಕ್ಕಿಂತ ಹೆಚ್ಚು ಹೆಚ್ಚಾಗುವ ಸಾಧ್ಯತೆ ಇದೆ. ಈ ನಿರ್ಧಾರವು ಸರ್ಕಾರಿ ನೌಕರರ ಕೈಗೆ ಹೆಚ್ಚಿನ ಹಣ ಸಿಗುವಂತೆ ಮಾಡಲಿದ್ದು, ಮಧ್ಯಮ ವರ್ಗದ ಸಂಸಾರಕ್ಕೆ ದೊಡ್ಡ ಆರ್ಥಿಕ ನೆಮ್ಮದಿ ತರಲಿದೆ.

ಹಣದುಬ್ಬರದ ಲೈವ್ ಅಂಕಿಅಂಶಗಳು ಏನು ಹೇಳುತ್ತವೆ?:

ಕಾರ್ಮಿಕ ಬ್ಯೂರೋ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮೇ 2026 ರ ಗ್ರಾಹಕ ಬೆಲೆ ಸೂಚ್ಯಂಕ ಅಂದರೆ ಎಐಸಿಪಿಐ ಅಂಕಿಅಂಶಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಏಪ್ರಿಲ್ ತಿಂಗಳಿನಲ್ಲಿ 149.9 ರಷ್ಟಿದ್ದ ಈ ಸೂಚ್ಯಂಕವು ಮೇ ತಿಂಗಳ ಹೊತ್ತಿಗೆ ಒಮ್ಮೆಗೆ 150.8 ರ ಮಟ್ಟಕ್ಕೆ ತಲುಪಿದೆ. ಕಳೆದ ಒಂದು ವರ್ಷದಿಂದ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳು, ಬಟ್ಟೆ ಮತ್ತು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಭಾರಿ ಹೆಚ್ಚಳವಾಗಿರುವುದರಿಂದಲೇ ಈ ಹಣದುಬ್ಬರ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ನೌಕರರ ಡಿಎ ನಿಖರವಾಗಿ ಎಷ್ಟು ಪರ್ಸೆಂಟ್ ಹೆಚ್ಚಾಗುತ್ತೆ?:

ಪ್ರಸ್ತುತ ಜಾರಿಯಲ್ಲಿರುವ 7 ನೇ ವೇತನ ಆಯೋಗದ ಅಧಿಕೃತ ಸೂತ್ರದ ಪ್ರಕಾರ, ಕಳೆದ 12 ತಿಂಗಳುಗಳ ಮಾರುಕಟ್ಟೆ ಹಣದುಬ್ಬರದ ಸರಾಸರಿಯನ್ನು ಲೆಕ್ಕಹಾಕಲಾಗುತ್ತದೆ. ಈ ಪಕ್ಕಾ ಲೆಕ್ಕಾಚಾರದ ಆಧಾರದ ಮೇಲೆ ನೋಡುವುದಾದರೆ ಪ್ರಸ್ತುತ ಡಿಎ ಮೊತ್ತವು ಸುಮಾರು 63.7% ತಲುಪಬೇಕಿದೆ. ಆದರೆ ಸದ್ಯಕ್ಕೆ ನೌಕರರಿಗೆ ಸಿಗುತ್ತಿರುವ ಡಿಎ ಕೇವಲ 60% ಮಾತ್ರ ಆಗಿದೆ. ಅಂದರೆ ಈ ಬಾರಿ ಡಿಎ ಒಟ್ಟಾರೆಯಾಗಿ ಶೇಕಡಾ 3.7 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಡಿಎ ನಿರ್ಧರಿಸುವಾಗ ಸರ್ಕಾರವು ದಶಮಾಂಶ ಬಿಂದುವನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ನೌಕರರಿಗೆ ನಿಖರವಾಗಿ ಶೇಕಡಾ 3 ರಷ್ಟು ಡಿಎ ಹೆಚ್ಚಳವಾಗುವುದು ಈಗ 100% ಖಚಿತವಾಗಿದೆ.

ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಯಾವಾಗ?:

ಸದ್ಯಕ್ಕೆ ಮಾರುಕಟ್ಟೆಯ ತಜ್ಞರು ಜೂನ್ 2026 ರ ಅಂತಿಮ ಅಂಕಿಅಂಶಗಳಿಗಾಗಿ ಕಾಯುತ್ತಿದ್ದಾರೆ. ಈ ಅಂತಿಮ ಡೇಟಾ ಲಭ್ಯವಾದ ತಕ್ಷಣವೇ ಹಣಕಾಸು ಸಚಿವಾಲಯವು ಈ ಭತ್ಯೆ ಹೆಚ್ಚಳದ ಕಡತವನ್ನು ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ರವಾನಿಸಲಿದೆ. ಅದಾದ ನಂತರ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅಂತಿಮ ಅನುಮೋದನೆ ಮುದ್ರೆ ಬೀಳಲಿದೆ. ಪ್ರತಿ ವರ್ಷದ ಟ್ರೆಂಡ್‌ನಂತೆ ಈ ಬಾರಿಯೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಹಬ್ಬದ ಸೀಸನ್ ವೇಳೆಗೆ ಇದರ ಅಧಿಕೃತ ಘೋಷಣೆ ಹೊರಬೀಳಲಿದೆ.

ಜುಲೈ 2026 ರಿಂದಲೇ ಜಾರಿಯಾಗಲಿದೆ ಹೊಸ ಸಂಬಳದ ಬಂಪರ್:

ಇಲ್ಲಿ ನೌಕರರು ಸಖತ್ ಖುಷಿಪಡುವ ಒಂದು ಪ್ರಮುಖ ವಿಷಯವಿದೆ. ಈ ತುಟ್ಟಿಭತ್ಯೆಯ ಹೆಚ್ಚಳವನ್ನು ಸೆಪ್ಟೆಂಬರ್‌ನಲ್ಲಿ ಘೋಷಣೆ ಮಾಡಿದರೂ ಸಹ, ಇದು ಜುಲೈ 2026 ರ ಹಿನ್ನೋಟದ ದಿನಾಂಕದಿಂದಲೇ ಜಾರಿಗೆ ಬರಲಿದೆ. ಅಂದರೆ ನೌಕರರು ಮತ್ತು ನಿವೃತ್ತಿ ವೇತನದಾರರು ತಮಗೆ ಸಿಗಬೇಕಾದ ಹಿಂದಿನ ತಿಂಗಳುಗಳ ಬಾಕಿ ವೇತನವನ್ನು ಅಂದರೆ ಭರ್ಜರಿ ಅರಿಯರ್ಸ್ ಮೊತ್ತವನ್ನು ಒಟ್ಟಿಗೆ ತಮ್ಮ ಬ್ಯಾಂಕ್ ಖಾತೆಗೆ ಪಡೆಯಲಿದ್ದಾರೆ.

 

Share This Article
Facebook Twitter Copy Link Print
Previous Article Viral news ನಾನೇ ಮದುಮಗ ಎಂದರೂ ಕಂಪನಿಯಲ್ಲಿ ಸಿಗದ ರಜೆ : ಸಿಇಒಗೆ ಶಾಕ್‌ ಕೊಟ್ಟ ಉದ್ಯೋಗಿ ಮಾಡಿದ್ದೇನು?
Next Article Ayodhye scam ರಾಮಮಂದಿರದ ಹುಂಡಿ ಮೇಲೆ ಕ್ಯುಆರ್ ಕೋಡ್! ದಾನಿಗಳ ದುಡ್ಡಿಂದ ಪತ್ನಿ ಹೆಸರಲ್ಲಿ ಮನೆ ಕಟ್ಟಿದ್ನಾ ಆರೋಪಿ?

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?