Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Crime Case ತ್ರಿವಳಿ ಕೊ*ಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಶವ ಸುಡಲು ಡ್ರಮ್‌ ರೆಡಿ ಮಾಡಿದ್ದ ಹಂತಕರು! ಮರ್ಡರ್ ಕೇಸ್‌ನಲ್ಲಿ ಬಯಲಾಯ್ತು ಅಸಲಿ ಸ್ಕೆಚ್
ಪ್ರಮುಖCrimeಕರ್ನಾಟಕ

Crime Case ತ್ರಿವಳಿ ಕೊ*ಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಶವ ಸುಡಲು ಡ್ರಮ್‌ ರೆಡಿ ಮಾಡಿದ್ದ ಹಂತಕರು! ಮರ್ಡರ್ ಕೇಸ್‌ನಲ್ಲಿ ಬಯಲಾಯ್ತು ಅಸಲಿ ಸ್ಕೆಚ್

Share
2 Min Read
SHARE

newsics.com | ನ್ಯೂಸಿಕ್ಸ್

Contents
ಹೆಚ್‌ಎಎಲ್ ಫ್ಲಾಟ್‌ನಲ್ಲಿ ಸುಟ್ಟು ಹಾಕಲು ತಂದಿಟ್ಟಿದ್ದ ದೊಡ್ಡ ಡ್ರಮ್!ಅಪಾರ್ಟ್ಮೆಂಟ್ ಬಳಿಯೇ ಸಿದ್ಧವಾಗಿ ನಿಂತಿತ್ತು ಕಾರುಪ್ಲಾನ್ ಉಲ್ಟಾ ಆಗಿ ಭಯದಿಂದ ಓಡಿಹೋದ ಪಾಪಿಗಳುಕಾರು, ಬೈಕ್ ಹಾಗೂ ಡೆಡ್ಲಿ ವಶಕ್ಕೆ

ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಅಪಾರ್ಟ್​​ಮೆಂಟ್​​ನಲ್ಲಿ ನಡೆದಿದ್ದ ಮೂವರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಮಾಂಚನಕಾರಿ ಸಂಗತಿಗಳು ಹೊರಬಿದ್ದಿವೆ. ಆರಂಭದಲ್ಲಿ ಶ್ವೇತಾ ತಾನೇ ಈ ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಳಾದರೂ, ಪೊಲೀಸರ ತೀವ್ರ ವಿಚಾರಣೆಯ ಬೆನ್ನಲ್ಲೇ ಅಸಲಿ ಹಂತಕ ಆಕೆಯ ಪ್ರಿಯಕರ ಕೆನತ್ ಎಂಬ ಸತ್ಯ ಬಯಲಾಗಿದೆ.

ಹೆಚ್‌ಎಎಲ್ ಫ್ಲಾಟ್‌ನಲ್ಲಿ ಸುಟ್ಟು ಹಾಕಲು ತಂದಿಟ್ಟಿದ್ದ ದೊಡ್ಡ ಡ್ರಮ್!

ಪೊಲೀಸ್ ತನಿಖೆಯ ಪ್ರಕಾರ, ಆರೋಪಿಗಳು ಮೂವರನ್ನು ಕೊಲೆ ಮಾಡಿದ ನಂತರ ಸಾಕ್ಷ್ಯ ನಾಶಪಡಿಸಲು ಮೃತದೇಹಗಳನ್ನು ಸುಟ್ಟು ಹಾಕಲು ಭಯಾನಕ ಸ್ಕೆಚ್ ಹಾಕಿದ್ದರು. ಕೆ.ಆರ್. ಪುರಂ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆ ನಡೆಸಿ, ಬಳಿಕ ಹೆಚ್‌ಎಎಲ್ ಬಳಿ ಇರುವ ಮತ್ತೊಂದು ಪ್ಲಾಟ್‌ಗೆ ಶವಗಳನ್ನು ಸಾಗಿಸಲು ತೀರ್ಮಾನಿಸಿದ್ದರು. ಇದಕ್ಕಾಗಿಯೇ ಕೆನತ್ ಮೊದಲೇ ದೊಡ್ಡದಾದ ಕಬ್ಬಿಣದ ಡ್ರಮ್ ಒಂದನ್ನು ತಂದು ಅಲ್ಲಿ ಇರಿಸಿದ್ದನು. ಶವಗಳನ್ನು ಆ ಡ್ರಮ್‌ನೊಳಗೆ ಹಾಕಿ, ಬಾತ್‌ರೂಮ್‌ನ ಒಳಗೆ ಯಾರಿಗೂ ತಿಳಿಯದಂತೆ ಸುಟ್ಟು ಭಸ್ಮ ಮಾಡಲು ಈ ಭೀಕರ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ಅಪಾರ್ಟ್ಮೆಂಟ್ ಬಳಿಯೇ ಸಿದ್ಧವಾಗಿ ನಿಂತಿತ್ತು ಕಾರು

ಕೊಲೆಯಾದ ತಕ್ಷಣ ಮೃತದೇಹಗಳನ್ನು ಪ್ಯಾಕ್ ಮಾಡಿ ಸಾಗಿಸಲು ಆರೋಪಿ ಕೆನತ್ ಅಪಾರ್ಟ್ಮೆಂಟ್ ಮುಂಭಾಗದಲ್ಲೇ ಕಾರೊಂದನ್ನು ತಂದು ಸಿದ್ಧವಾಗಿ ನಿಲ್ಲಿಸಿಕೊಂಡಿದ್ದನು. ತಂದೆ ಸೋಮಸುಂದರ್, ತಾಯಿ ಹಾಗೂ ತಂಗಿಯನ್ನು ಕೆನತ್ ಚಾಕುವಿನಿಂದ ಇರಿದು ಸಾಯಿಸುತ್ತಿದ್ದಾಗ, ತಾನು ತಡೆಯಲು ಪ್ರಯತ್ನಿಸಿದೆ ಆದರೆ ಭಯದಿಂದ ಕಿರುಚಾಡುತ್ತಾ ಕೋಣೆಯೊಳಗೆ ಬಚ್ಚಿಟ್ಟುಕೊಂಡಿದ್ದೆ ಎಂದು ಶ್ವೇತಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾಳೆ. ಕಟುಕ ಕೆನತ್ ಕೂಡ ತಾನೇ ಈ ಮೂರು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪ್ಲಾನ್ ಉಲ್ಟಾ ಆಗಿ ಭಯದಿಂದ ಓಡಿಹೋದ ಪಾಪಿಗಳು

ಆದರೆ, ಆರೋಪಿಗಳು ಅಂದುಕೊಂಡಿದ್ದ ಪ್ಲಾನ್ ಕೊನೆ ಕ್ಷಣದಲ್ಲಿ ಉಲ್ಟಾ ಆಗಿತ್ತು. ಕೆನತ್ ಇರಿಯುತ್ತಿದ್ದಂತೆಯೇ ತೀವ್ರ ರಕ್ತಸಿಕ್ತ ಸ್ಥಿತಿಯಲ್ಲೇ ತಂದೆ ಸೋಮಸುಂದರ್ ಅವರು ಸಹಾಯಕ್ಕಾಗಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದನ್ನು ಕಂಡು ತೀವ್ರವಾಗಿ ಹೆದರಿದ ಶ್ವೇತಾ ಮತ್ತು ಕೆನತ್, ಶವಗಳನ್ನು ಕಾರಿಗೆ ಸಾಗಿಸಲು ಸಾಧ್ಯವಾಗದೆ ಅಲ್ಲಿಂದ ತಕ್ಷಣವೇ ಕಾಲ್ಕಿತ್ತಿದ್ದರು.

ಕಾರು, ಬೈಕ್ ಹಾಗೂ ಡೆಡ್ಲಿ ವಶಕ್ಕೆ

ಕೊಲೆಗೆ ಬಳಸಿದ ಚಾಕು, ರಕ್ತಸಿಕ್ತ ಬಟ್ಟೆಗಳು, ಆರೋಪಿಗಳು ಬಳಸಿದ್ದ ಕಾರು, ಬೈಕ್ ಮತ್ತು ಹೆಚ್‌ಎಎಲ್ ಪ್ಲಾಟ್‌ನಲ್ಲಿ ಶವ ಸುಡಲು ಇಟ್ಟಿದ್ದ ಆ ಭಯಾನಕ ಡ್ರಮ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಒಮ್ಮೆ ನಾವು ಪ್ರೇಮಿಗಳು ಎಂದರೆ, ಮತ್ತೊಮ್ಮೆ ಕೇವಲ ಸ್ನೇಹಿತರು ಎಂದು ಗೊಂದಲದ ಹೇಳಿಕೆ ನೀಡುತ್ತಿರುವುದರಿಂದ, ಪೊಲೀಸರು ಇಬ್ಬರನ್ನೂ ಕಸ್ಟಡಿಗೆ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

Bus Tragedy ಚಲಿಸುವ ಬಸ್‌ನಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ ವಿದ್ಯಾರ್ಥಿ: ಟಿಪ್ಪರ್ ಡಿಕ್ಕಿಯಾಗಿ ರುಂಡವೇ ಕಟ್!

TAGGED:#Shwetha #kenath #murder case #arrested #investigation #bangalore
Share This Article
Facebook Twitter Copy Link Print
Previous Article Bus Tragedy ಚಲಿಸುವ ಬಸ್‌ನಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ ವಿದ್ಯಾರ್ಥಿ: ಟಿಪ್ಪರ್ ಡಿಕ್ಕಿಯಾಗಿ ರುಂಡವೇ ಕಟ್!
Next Article US Navy ಅರಬ್ಬಿ ಸಮುದ್ರದಲ್ಲಿ ಅಮೆರಿಕ ಯುದ್ಧ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್: ಮೂವರ ರಕ್ಷಣೆ, ಮತ್ತೊಬ್ಬನಿಗಾಗಿ ತೀವ್ರ ಶೋಧ!

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?