newsics.com | ನ್ಯೂಸಿಕ್ಸ್
ಬೆಂಗಳೂರು: ಮಳೆಗಾಲದ ಆರಂಭವಾಗುತ್ತಿದ್ದಂತೆ ಚಿಟಪಟ ಹನಿಗಳು ಹಾಗೂ ತಂಪಾದ ಗಾಳಿ ಮನಸ್ಸಿಗೆ ಮುದ ನೀಡುತ್ತದೆ. ಈ ಸಮಯದಲ್ಲಿ ಮಳೆಯಲ್ಲಿ ನೆನೆಯುತ್ತಾ ಕುಣಿಯಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜ. ಆದರೆ ಅನಾರೋಗ್ಯದ ಭೀತಿಯಿಂದಾಗಿ ನಾವು ಮಳೆಯಲ್ಲಿ ನೆನೆಯಲು ಹಿಂಜರಿಯುತ್ತೇವೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಸ್ವಲ್ಪ ಹೊತ್ತು ಮಳೆ ನೀರಿನಲ್ಲಿ ನೆನೆಯುವುದರಿಂದ ದೇಹ ಮತ್ತು ಮನಸ್ಸಿಗೆ ಹಲವಾರು ನೈಸರ್ಗಿಕ ಪ್ರಯೋಜನಗಳು ಲಭ್ಯವಾಗಲಿವೆ.
ಮಳೆನೀರಿನಲ್ಲಿ ವಿಟಮಿನ್ ಬಿ-12 ಸಮೃದ್ಧ!
ಮಳೆನೀರು ಹಗುರವಾಗಿದ್ದು, ಕ್ಷಾರೀಯ ಪಿಹೆಚ್ (Alkaline pH) ಗುಣವನ್ನು ಹೊಂದಿದೆ. ಇದು ತಕ್ಷಣವೇ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿಯನ್ನು ಹೊಂದಿದೆ. ಮಳೆನೀರಿನಲ್ಲಿ ವಿಟಮಿನ್ ಬಿ-12 (Vitamin B12) ಅನ್ನು ಉತ್ಪಾದಿಸುವ ಸೂಕ್ಷ್ಮಜೀವಿಗಳು ಮತ್ತು ಹಲವು ಪ್ರಮುಖ ಖನಿಜಗಳು ಇರುತ್ತವೆ. ನಮ್ಮ ದೇಹಕ್ಕೆ ಈ ವಿಟಮಿನ್ ದೊರೆಯಬೇಕಾದರೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಮಳೆಯಲ್ಲಿ ನೆನೆಯುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಕೂದಲನ್ನು ಬಲಪಡಿಸುತ್ತದೆ
ಮಳೆನೀರು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಆಮ್ಲೀಯ ಸ್ವಭಾವವನ್ನು ಹೊಂದಿರುವ ಇದು ತಲೆಯ ನೆತ್ತಿಯಿಂದ (Scalp) ಕೊಳಕು ಮತ್ತು ಕಲ್ಮಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸಿ, ಕೂದಲು ಮಂದವಾಗುವುದನ್ನು ತಡೆಯುತ್ತದೆ. ಜೊತೆಗೆ ಇದರಲ್ಲಿರುವ ವಿಟಮಿನ್ ಅಂಶವು ಕೂದಲನ್ನು ರೇಷ್ಮೆಯಂತೆ ಮೃದುಗೊಳಿಸಲು ಸಹಕಾರಿಯಾಗಿದೆ.
ಮಾನಸಿಕ ಒತ್ತಡಕ್ಕೆ ಮಳೆನೀರಿನ ಚಿಕಿತ್ಸೆ
ಮಳೆಯಲ್ಲಿ ನೆನೆಯುವುದರಿಂದ ಮೆದುಳಿನಲ್ಲಿ ಎಂಡಾರ್ಫಿನ್ ಮತ್ತು ಸಿರೊಟೋನಿನ್ ನಂತಹ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ದೈನಂದಿನ ಜೀವನದ ಉದ್ವೇಗ, ಆತಂಕ, ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ಚಿಂತೆಗಳಿಂದ ಮುಕ್ತರಾಗಿ ನೆಮ್ಮದಿಯ ನಿದ್ದೆ ಪಡೆಯಲು ಋತುಮಾನದ ಮಳೆಯಲ್ಲಿ ನೆನೆಯುವುದು ಒಂದು ಅತ್ಯುತ್ತಮ ಥೆರಪಿಯಾಗಿದೆ.
ಚರ್ಮದ ಸಮಸ್ಯೆಗಳಿಗೆ ಮುಕ್ತಿ
ಬೇಸಿಗೆಯ ದಿನಗಳಲ್ಲಿ ಉಂಟಾಗುವ ಬೆವರಿನಿಂದಾಗಿ ಚರ್ಮದ ಮೇಲೆ ದದ್ದುಗಳು ಹಾಗೂ ಉರಿ ಕಾಣಿಸಿಕೊಳ್ಳುತ್ತದೆ. ತಂಪಾದ ಮಳೆನೀರಿನ ಸ್ನಾನವು ದೇಹದ ಉಷ್ಣತೆಯನ್ನು ಸಮತೋಲನಗೊಳಿಸಿ ಈ ದದ್ದುಗಳನ್ನು ನಿವಾರಿಸುತ್ತದೆ. ಮಳೆನೀರಿನ ಕ್ಷಾರೀಯ ಗುಣಗಳು ಮುಖದ ಮೇಲಿನ ತೀವ್ರವಾದ ಮೊಡವೆಗಳು, ಊತ ಮತ್ತು ನೋವನ್ನು ಶಮನಗೊಳಿಸಿ ಚರ್ಮದ ತೇವಾಂಶವನ್ನು ಕಾಪಾಡುತ್ತವೆ.
ಮಳೆಯಲ್ಲಿ ನೆನೆಯುವಾಗ ಇರಲಿ ಈ ಮುನ್ನೆಚ್ಚರಿಕೆ
- ಸಮಯದ ಮಿತಿ ಇರಲಿ: ಹೆಚ್ಚು ಹೊತ್ತು ಮಳೆಯಲ್ಲಿ ನೆನೆಯುವುದರಿಂದ ಜ್ವರ, ನೆಗಡಿಯಂತಹ ಅನಾರೋಗ್ಯದ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಮಾತ್ರ ಮಳೆಯಲ್ಲಿ ಒದ್ದೆಯಾಗುವುದು ಸೂಕ್ತ.
- ತಕ್ಷಣ ಸ್ನಾನ ಮಾಡಿ: ಮಳೆಯಲ್ಲಿ ನೆನೆದು ಬಂದ ತಕ್ಷಣವೇ ಉಗುರು ಬೆಚ್ಚಗಿನ ನೀರಿನಿಂದ ಮತ್ತೊಮ್ಮೆ ಸ್ವಚ್ಛವಾಗಿ ಸ್ನಾನ ಮಾಡುವುದನ್ನು ಮರೆಯಬೇಡಿ.
- ಬಿಸಿ ಪಾನೀಯ ಸೇವಿಸಿ: ದೇಹವನ್ನು ಒಳಗಿನಿಂದ ಬೆಚ್ಚಗಾಗಿಸಲು ಮಳೆಯಲ್ಲಿ ನೆನೆದ ನಂತರ ಬಿಸಿ ಬಿಸಿ ಸೂಪ್ ಅಥವಾ ಚಹಾವನ್ನು ಕುಡಿಯಿರಿ.
- ಮೊದಲ ಮಳೆಗೆ ನೆನೆಯಬೇಡಿ: ಮುಂಗಾರಿನ ಮೊದಲ ಮಳೆಯಲ್ಲಿ ಒದ್ದೆಯಾಗುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಏಕೆಂದರೆ ವಾತಾವರಣದಲ್ಲಿನ ಮಾಲಿನ್ಯದಿಂದಾಗಿ ಈ ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತವೆ.
Rain Alert ವರುಣನ ರೌದ್ರಾವತಾರ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ!