Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?
filmಕರ್ನಾಟಕದೇಶಪ್ರಮುಖ

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

Share
2 Min Read
SHARE

newsics.com| ನ್ಯೂಸಿಕ್ಸ್

ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ ಲೆವಲ್‌ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’. ‘ಕೆಜಿಎಫ್’ ಸರಣಿಯ ನಂತರ ಯಶ್ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ‘Toxic’ನಲ್ಲಿ ಬಲಿಷ್ಠ ತಾರಾಬಳಗವಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇತ್ತೀಚೆಗಷ್ಟೇ ಚಿತ್ರತಂಡ ‘ಲೇಡೀಸ್ ಅಂಡ್ ಲೇಡೀಸ್’ ಹೆಸರಿನ ವಿಶೇಷ ಟೀಸರ್ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಟೀಸರ್‌ನಲ್ಲಿ ಕಂಡ ಮಹಿಳಾ ಶಕ್ತಿ:

ಸುಮಾರು 1 ನಿಮಿಷ 42 ಸೆಕೆಂಡ್‌ಗಳ ಈ ಟೀಸರ್ ಅತ್ಯಂತ ಸ್ಟೈಲಿಶ್ ಆಗಿ ಮೂಡಿಬಂದಿದೆ. ಟೀಸರ್‌ನ ಆರಂಭದಲ್ಲಿ ಸಮುದ್ರ ತೀರದಲ್ಲಿ ಯಶ್ ಮತ್ತು ಕಿಯಾರಾ ಅದ್ವಾನಿ ನಡುವಿನ ಪ್ರಣಯದ ದೃಶ್ಯಗಳನ್ನು ‘ತಬಾಹಿ’ ಹಾಡಿನ ಹಿನ್ನೆಲೆಯಲ್ಲಿ ತೋರಿಸಲಾಗಿದೆ. ಆದರೆ, ಈ ಪ್ರೀತಿಯ ಹಿಂದಿರುವ ಮತ್ತೊಂದು ಭಯಾನಕ ಮುಖವನ್ನು ಹಿನ್ನೆಲೆ ಧ್ವನಿಯ ಮೂಲಕ ವಿವರಿಸಲಾಗಿದೆ. “ಪ್ರೀತಿಯು ಮಹಿಳೆಯರನ್ನು ರಾಕ್ಷಸರನ್ನಾಗಿ ಮಾಡುತ್ತದೆ. ಅದರ ವಂಚನೆಯ ಆಳವನ್ನು ಅರ್ಥಮಾಡಿಕೊಂಡರೆ ಮಾತ್ರ ಅದೊಂದು ಸುಂದರ ಭ್ರಮೆ ಎಂದು ತಿಳಿಯುತ್ತದೆ” ಎನ್ನುವ ಡೈಲಾಗ್ ಚಿತ್ರದ ಗಾಂಭೀರ್ಯವನ್ನು ಹಾಗೂ ಹೊಸತೇನೋ ಹೇಳುವ ಸೀಕ್ರೆಟ್ ತಿಳಿಸುತ್ತದೆ.

ಟೀಸರ್‌ನ ಕೊನೆಯಲ್ಲಿ ಯಶ್ ಮತ್ತು ಮಹಿಳಾ ಫೈಟರ್‌ಗಳ ನಡುವಿನ ಸಂಘರ್ಷದ ದೃಶ್ಯವಿದೆ. ಅಲ್ಲಿ ಯಶ್ ಹೊಡೆಯುವ ಆ ಒಂದು ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗಿದೆ. “ಲೇಡೀಸ್ ಅಂಡ್ ಲೇಡೀಸ್.. ಒಬ್ಬೊಬ್ಬರಾಗಿ ಬರ್ತೀರಾ ಅಥವಾ ಎಲ್ಲರೂ ಒಟ್ಗೇ ಬರ್ತೀರಾ?” ಎಂದು ಯಶ್ ಕೇಳುವ ಸ್ಟೈಲ್ ಫ್ಯಾನ್ಸ್‌ಗೆ ಹಬ್ಬದಂತಿದೆ.

ಯಾರು ಯಾವ ಪಾತ್ರದಲ್ಲಿ?

ಚಿತ್ರದಲ್ಲಿ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ‘ಗಂಗಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೈಕ್ ಸವಾರಿ ಮಾಡುತ್ತಾ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಬಾಲಿವುಡ್ ಬ್ಯೂಟಿ ಕಿಯಾರಾ ಅದ್ವಾನಿ ‘ನಾದಿಯಾ’ ಎಂಬ ಸರ್ಕಸ್ ಪರ್ಫಾರ್ಮರ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಕನ್ನಡದ ನಟಿ ರುಕ್ಮಿಣಿ ವಸಂತ್ ಕೈಯಲ್ಲಿ ಗನ್ ಹಿಡಿದು ‘ಮೆಲಿಸ್ಸಾ’ ಎಂಬ ರಗಡ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಹುಮಾ ಖುರೇಷಿ ‘ಎಲಿಜಬೆತ್’ ಪಾತ್ರದಲ್ಲಿ ಪವರ್‌ಫುಲ್ ಆಗಿ ಕಾಣಿಸಿಕೊಂಡಿದ್ದರೆ, ಬಾರ್‌ನಲ್ಲಿ ಬಾಸ್‌ಲೇಡಿಯಂತೆ ನಿಂತಿರುವ ತಾರಾ ಸುತಾರಿಯಾ ‘ರೆಬೆಕಾ’ ಪಾತ್ರಕ್ಕೆ ಜೀವ ತುಂಬಿದ್ದಾರೆ.

ತಾಂತ್ರಿಕ ಶ್ರೀಮಂತಿಕೆ:

‘ಟಾಕ್ಸಿಕ್’ ಕೇವಲ ಭಾರತೀಯ ಸಿನಿಮಾ ಮಟ್ಟಕ್ಕೆ ಸೀಮಿತವಾಗಿಲ್ಲ. ಅಂತರಾಷ್ಟ್ರೀಯ ಆಕ್ಷನ್ ಕೋರಿಯೋಗ್ರಾಫರ್ ಜೆಜೆ ಪೆರಿ ಸಾಹಸ ದೃಶ್ಯಗಳನ್ನು ಡಿಸೂನ್ ಮಾಡಿದ್ದಾರೆ. ರವಿ ಬಸ್ರೂರ್ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ. ಇಡೀ ಸಿನಿಮಾವನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗುತ್ತಿದೆ ಎಂಬುದು ವಿಶೇಷ.

ಬಿಡುಗಡೆ ದಿನಾಂಕ:

ಚಿತ್ರತಂಡ ಹೇಳಿರುವಂತೆ, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗಿತ್ತು. ಈಗ ಚಿತ್ರತಂಡ ಅಧಿಕೃತವಾಗಿ ಘೋಷಿಸಿರುವಂತೆ, ‘ಟಾಕ್ಸಿಕ್’ ಸಿನಿಮಾ 26 ಆಗಸ್ಟ್, 2026 ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳು ಈ ಆಕ್ಷನ್ ಅಡ್ವೆಂಚರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Share This Article
Facebook Twitter Copy Link Print
Previous Article Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!
Next Article Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

Popular Posts

Golden MP ಸಂಸದೆ ಮನೆಯಲ್ಲಿ ಬೆಟ್ಟದಷ್ಟು ಬಂಗಾರ, ರಾಶಿ ರಾಶಿ ಹಣ! ಚಿನ್ನದ ಒಳ ಉಡುಪೂ ಸಿಕ್ತಾ?

2 Min Read

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

2 Min Read

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

1 Min Read

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

2 Min Read

You Might Also Like

ದೇಶಪ್ರಮುಖವೈರಲ್

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

1 Min Read
filmದೇಶ

Shocking story ಅಯ್ಯೋ, ಜೀವನಪೂರ್ತಿ ರುಚಿ ಇಲ್ಲದ ಆಹಾರ ಸೇವನೆ ಮಾಡಬೇಕಾ ನಟಿ ಸಮಂತಾ? ಆಘಾತಕಾರಿ ವಿಚಾರ ಬಾಯ್ಬಿಟ್ಟ ‌ʻಮಾ ಇಂಟಿ ಬಂಗಾರಂʼ ಡೈರೆಕ್ಟರ್!

2 Min Read
ಕರ್ನಾಟಕದೇಶಪ್ರಮುಖ

Cabinet Expansion: ಯಂಗ್ ಶಾಸಕರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ – ಜುಲೈ 8ಕ್ಕೆ ಆಗಲಿದೆಯಾ ಸಚಿವ ಸಂಪುಟ ವಿಸ್ತರಣೆ?

3 Min Read
Crimeದೇಶಪ್ರಮುಖ

Mumbai ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?