newsics.com| ನ್ಯೂಸಿಕ್ಸ್
ವಾಟ್ಸಾಪ್ (WhatsApp) ಇಂಡಿಯಾದ ಸಿಇಒ ಕುನಾಲ್ ಶಾ, ತಮ್ಮ ಬಳಕೆದಾರರಿಗೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ.
ಶೀಘ್ರದಲ್ಲೇ ವಾಟ್ಸಾಪ್, ಯೂಸರ್ ನೇಮ್ ಸಿಸ್ಟಂ ಪರಿಚಯಿಸಲಿದೆ. ಮೆಸೇಜಿಂಗ್ ಪ್ಲ್ಯಾಟಫಾರ್ಮ್’ಗೆ ಈ ಪದ್ದತಿ ಬರಲಿದೆ. ವರ್ಷದ ಕೊನೆಯಲ್ಲಿ ಇದು ಬಿಡುಗಡೆಯಾಗಲಿದೆ.
ಹಾಗಾಗಿ, ಬಳಕೆದಾರರು ತಮಗಿಷ್ಟವಾದ ಯೂಸರ್ ನೇಮ್ ಅನ್ನು ಈಗಲೇ ಕಾಯ್ದಿರಿಸುವ ಸಲಹೆಯನ್ನು ಕುನಾಲ್ ಶಾ ನೀಡಿದ್ದಾರೆ.
ಈ ಸಿಸ್ಟಂನಲ್ಲಿ ಬಳಕೆದಾರರು, ತಮ್ಮ ಫೋನ್ ನಂಬರ್ ಅನ್ನು ಬಹಿರಂಗಪಡಿಸದೆಯೇ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶವನ್ನು ನೀಡಲಾಗಿದೆ.
ವಾಟ್ಸಾಪ್ ಈಗ ದೈನಂದಿನ ಜೀವನದ ಭಾಗದಂತಾಗಿದೆ. ಯಾರೊಂದಿಗಾದರೂ ಚಾಟ್ ಮಾಡಲು, ಫೋನ್ ನಂಬರ್ ಹಂಚಿಕೊಳ್ಳುವುದು ಕಡ್ಡಾಯವಾಗಿತ್ತು. ಈಗ ಈ ವ್ಯವಸ್ಥೆ ಬದಲಾಗುತ್ತಿದೆ. ಇದು, ಬಳಕೆದಾರರ ಪ್ರೈವೇಸಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಬದಲಾವಣೆಯಾಗಲಿದೆ ಎಂದು ಕುನಾಲ್ ಶಾ ಹೇಳಿದ್ದಾರೆ.
ಮೆಸೇಜಿಂಗ್ ಪ್ಲಾಟ್’ಫಾರಂ ಹೊಸ ಫೀಚರ್
ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟಫಾರಂ ಅಧಿಕೃತವಾಗಿ ’ಯೂಸರ್ ನೇಮ್’ ಅನ್ನು ಘೋಷಿಸಿದೆ. ಇದು, ಬಳಕೆದಾರರು ಮೊಬೈಲ್ ನಂಬರ್ ಬದಲಿಗೆ ವಿಶಿಷ್ಟವಾದ ಯೂಸರ್ ನೇಮ್ ಬಳಸಿ ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಹೊಸ ಫೀಚರ್ ಅನ್ನು ಹೊಂದಿರುತ್ತದೆ. ಹಾಗಾಗಿ, ಬಳಕೆದಾರರು ಇಂತದ್ದೇ ಯೂಸರ್ ನೇಮ್’ಅನ್ನು ಇಟ್ಟುಕೊಳ್ಳಬೇಕು ಎಂದು ಬಯಸಿದ್ದಲ್ಲಿ, ಅದನ್ನು ಈಗಲೇ ರಿಜಿಸ್ಟರ್ ಮಾಡಿ ಎಂದು ಕುನಾಲ್ ಶಾ ಹೇಳಿದ್ದಾರೆ.
ವರ್ಷಾಂತ್ಯದಲ್ಲಿ ಬಳಕೆದಾರರಿಗೆ ಈ ಫೀಚರ್ ಲಭ್ಯ
ಈ ವರ್ಷಾಂತ್ಯದಲ್ಲಿ ಈ ಹೊಸ ಫೀಚರ್ ಅನ್ನು ಅಧಿಕೃತವಾಗಿ ಪರಿಚಯಿಸಲಾಗುತ್ತದೆ. ಆದರೆ, ಯೂಸರ್ ನೇಮ್ ರಿಜಿಸ್ಟರ್ ಮಾಡುವ ವಿಂಡೋವನ್ನು ಜೂನ್ 29ರಿಂದಲೇ ತೆರೆಯಲಾಗಿದೆ. ಜಾಗತಿಕವಾಗಿ ಇದನ್ನು ಸೋಮವಾರದಿಂದ ಆರಂಭಿಸಲಾಗಿದೆ.
ಆ ಆಯ್ಕೆಯು ಲಭ್ಯವಾದಾಗ, ಆಪ್’ನಲ್ಲಿ ಬಳಕೆದಾರರಿಗೆ ನೋಟಿಫಿಕೇಶನ್ ಬರಲಿದೆ.
ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ತಮ್ಮ ಯೂಸರ್ ನೇಮ್ ಬದಲಾಗಿವುದನ್ನು ಕುನಾಲ್ ಶಾ ಬರೆದುಕೊಂಡಿದ್ದಾರೆ. ನಿಮಗಿಷ್ಟವಾದ ಹೆಸರನ್ನು ಪಡೆಯಲು ಇದುವೇ ಸರಿಯಾದ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಫೀಚರ್ ಜಾರಿಗೆ ಪ್ರಮುಖ ಕಾರಣಗಳೇನು?
ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ನಂಬರ್’ಗಳನ್ನು ಬಹಿರಂಗಪಡಿಸದೇ ಸಂಪರ್ಕದಲ್ಲಿರಲು ಬಯಸುವ ಅನೇಕ ಸಂದರ್ಭಗಳಿರುತ್ತವೆ. ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಂತೆ ಅನಿಸಲೂಬಹುದು. ಯೂಸರ್ ನೇಮ್ ಫೀಚರ್’ನಲ್ಲಿ ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ನಂಬರ್ ಬಹಿರಂಗಪಡಿಸದೆ, ವಿಶಿಷ್ಟ ಹೆಸರನ್ನು ಹಂಚಿಕೊಳ್ಳಬಹುದು.
ಇದೊಂದು ಸಾಮಾಜಿಕ ಮಾಧ್ಯಮದ ಪ್ರೊಫೈಲ್’ನಂತೆ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಯೂಸರ್ ನೇಮ್’ಗಳನ್ನು ವಾಟ್ಸಾಪ್ ಯಾರಿಗೂ ಶಿಫಾರಸನ್ನೂ ಮಾಡುವುದಿಲ್ಲ. ಸಂಪರ್ಕ ಕಲ್ಪಿಸಲು ಬಯಸುವವರು, ಅವರ ನಿಖರವಾದ ಮಾಹಿತಿಯನ್ನು ಹೊಂದಿರಬೇಕು. ಇದೊಂದು, ಬಳಕೆದಾರರ ಗೌಪ್ಯತೆಗೆ ಆದ್ಯತೆಯನ್ನು ನೀಡಿ, ಪರಿಚಯಿಸಲಾಗುವ ಫೀಚರ್ ಆಗಿದೆ.
ವಾಟ್ಸಾಪ್ ಯೂಸರ್ ನೇಮ್ ( User Name )ಅನ್ನು ಕಾಯ್ದಿರಿಸಿಕೊಳ್ಳುವುದು ಹೇಗೆ?
ಬಳಕೆದಾರರು ಏನು ಮಾಡನೇಕು?
ಸೆಟ್ಟಿಂಗ್ಸ್ (Settings) ಓಪನ್ ಮಾಡಿಕೊಳ್ಳಬೇಕು
ಅಕೌಂಟ್ ( Account ) ಮೇಲೆ ಟ್ಯಾಪ್ ಮಾಡಬೇಕು
ಯೂಸರ್ ನೇಮ್ (User Name) ಆಯ್ಕೆ ಮಾಡಿಕೊಳ್ಳಬೇಕು
ಲಭ್ಯವಿರುವ ಯೂಸರ್ ನೇಮ್ ಆರಿಸಿ, ಅದನ್ನು ಕನ್ಫರ್ಮ್ ಮಾಡಿಕೊಳ್ಳಬೇಕು.
ಇದೇ ವೇಳೆ, ಕಂಟೆಂಟ್ ಕ್ರಿಯೇಟರ್, ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸಂಸ್ಥೆಗಳು, ತಮ್ಮ ಈಗಿರುವ ಇನ್ಸ್ಟಾಂಗ್ರಾಂ ಅಥವಾ ಫೇಸ್’ಬುಕ್ ಖಾತೆಗಳಿಗೆ ಹೊಂದುವಂತಹ ಯೂಸರ್ ನೇಮ್ ಪಡೆಯಲು ಸಾಧ್ಯವಾಗುತ್ತದೆ.
ಯೂಸರ್ ನೇಮ್, ಗರಿಷ್ಠ 35 ಅಕ್ಷರದ ಮೇಲೆ ಇರುವಂತಿಲ್ಲ ಮತ್ತು ಈ ವೇಳೆ, ವಾಟ್ಸಾಪ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಯಾರಾದರೂ ನಿಮಗೆ ಮೊದಲ ಬಾರಿಗೆ ಮೆಸೇಜ್ ಮಾಡಬೇಕಾದರೆ ಅವರಿಗೆ ನಿಮ್ಮ ನಿಖರವಾದ ಯೂಸರ್ ನೇಮ್ ತಿಳಿದಿರಲೇಬೇಕು.
ಬಳಕೆದಾರರು ತಮ್ಮ ಯೂಸರ್ ನೇಮ್ ಅನ್ನು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದಾದ ಫೀಚರ್ ಹೊಂದಿರುತ್ತದೆ.
ಪ್ರಸಿದ್ದ ವ್ಯಕ್ತಿಗಳು, ಸೆಲೆಬ್ರಿಟಿಗಳ ನಕಲಿ ಖಾತೆಯ ಹಾವಳಿ ತಪ್ಪಿಸಲು, ಯೂಸರ್ ನೇಮ್ ಅನ್ನು ಮುಂಚಿತವಾಗಿಯೇ ಕಾಯ್ದಿರಿಸಲಾಗುವುದು.
ಪ್ರಸ್ತತ ಚಾಟ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಎಂದಿನಂತೆ, ಮೆಸೇಜ್ ಮಾಡುವುದು, ಬ್ಲಾಕ್ ಮಾಡುವುದು, ರಿಪೋರ್ಟ್ ಮಾಡುವುದನ್ನು ಮುಂದುವರಿಸಬಹುದು.
Health ಬಿಸಿ ಚಹಾ ಜೊತೆ ಸಿಗರೇಟ್ ಸೇದುವ ಅಭ್ಯಾಸವಿದೆಯೇ? ಇದು ಸಾವಿಗೆ ನೀವೇ ಇಡುವ ಸೈಲೆಂಟ್ ಆಹ್ವಾನ!
Viral story ಆಟೋ ಚಾಲಕನ ‘ಕಾರ್ಪೊರೇಟ್’ ಸ್ಟೈಲ್ ರಿಪ್ಲೈಗೆ ದಂಗಾದ ಯುವತಿ: ವಿಡಿಯೋ ವೈರಲ್!!