Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Viral story ಆಟೋ ಚಾಲಕನ ‘ಕಾರ್ಪೊರೇಟ್’ ಸ್ಟೈಲ್‌ ರಿಪ್ಲೈಗೆ ದಂಗಾದ ಯುವತಿ: ವಿಡಿಯೋ ವೈರಲ್!!
ಕರ್ನಾಟಕದೇಶಪ್ರಮುಖವೈರಲ್

Viral story ಆಟೋ ಚಾಲಕನ ‘ಕಾರ್ಪೊರೇಟ್’ ಸ್ಟೈಲ್‌ ರಿಪ್ಲೈಗೆ ದಂಗಾದ ಯುವತಿ: ವಿಡಿಯೋ ವೈರಲ್!!

Share
2 Min Read
SHARE
  • newsics.com| ನ್ಯೂಸಿಕ್ಸ್
    ಆಟೋದಲ್ಲಿ ಪ್ರಯಾಣಿಸುವಾಗ ಯುಪಿಐ ಮೂಲಕ ಹಣ ಪಾವತಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಸಾಮಾನ್ಯ. ಆದರೆ, ಆ ಹಣ ಪೇ ಮಾಡಲು ಹೋದಾಗ ಸರ್ವರ್‌ ಡೌನ್‌ ಅಥವಾ ಇನ್ಯಾವುದೋ ವಿಷಯಕ್ಕೆ ಹಣ ಪಾವತಿಯಾಗದಿದ್ರೆ ಆಗ ನಡೆಯುವ ಮಾತುಕತೆಗಳು ಕೆಲವೊಮ್ಮೆ ತಮಾಷೆಯಾಗಿರುತ್ತವೆ.
    ಇಲ್ಲೊಬ್ಬ ಆಟೋ ಚಾಲಕ, ಪಾವತಿ ವಿಫಲವಾದ ಬಗ್ಗೆ ಮಹಿಳೆ ಮೆಸೇಜ್ ಮಾಡಿದಾಗ, ಕಾರ್ಪೊರೇಟ್ ಕಂಪನಿಯ ಎಚ್‌ಆರ್ ಅಥವಾ ಬಾಸ್ ಶೈಲಿಯಲ್ಲಿ ವೃತ್ತಿಪರ ಉತ್ತರ ನೀಡಿ ಎಲ್ಲರ ಹುಬ್ಬೇರಿಸಿದ್ದಾನೆ. ಒಂದು ಸಣ್ಣ ಯುಪಿಐ ಪಾವತಿ ವೈಫಲ್ಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಅಲೆ ಎಬ್ಬಿಸಿದ್ದು, ಈ ತಮಾಷೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ನಿಷ್ಠಾ ಶೆಟ್ಟಿ ಎಂಬ ಯುವತಿ ಇತ್ತೀಚೆಗೆ ಕೆಲಸಕ್ಕೆ ಹೋಗಲು ಆಟೋ ಬುಕ್ ಮಾಡಿದ್ದರು. ತಾವು ತಲುಪಬೇಕಾದ ಸ್ಥಳಕ್ಕೆ ಬಂದ ನಂತರ ಅವರು ಆಟೋ ಚಾಲಕನಿಗೆ ಗೂಗಲ್ ಪೇ ಮೂಲಕ ಹಣ ಪಾವತಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಪಾವತಿ ಐಡಿಯಲ್ಲಿನ ಸಮಸ್ಯೆಯಿಂದಾಗಿ ಹಣ ಸಂದಾಯವಾಗಿಲ್ಲ ಎಂಬುದು ಅವರಿಗೆ ತಿಳಿದುಬಂದಿದೆ. ಇದನ್ನು ಚಾಲಕನಿಗೆ ತಿಳಿಸುವ ಉದ್ದೇಶದಿಂದ ನಿಷ್ಠಾ ಅವರು ಹಿಂದಿಯಲ್ಲಿ ಮೆಸೇಜ್ ಮಾಡಿದ್ದಾರೆ. “ನಿಮ್ಮ ಪಾವತಿ ವಿಫಲವಾಗಿದೆ, ಏಕೆಂದರೆ ಈ ಐಡಿಯಲ್ಲಿ ಏನೋ ಸಮಸ್ಯೆ ಆಗುತ್ತಿದೆ” ಎಂದು ಅವರು ಚಾಲಕನಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದರು. ಇವರ ಈ ಸಂದೇಶಕ್ಕೆ ಚಾಲಕನಿಂದ ಅಚ್ಚರಿಯ ವೃತ್ತಿಪರ ಪ್ರತಿಕ್ರಿಯೆ ವ್ಯಕ್ತವಾಗಿದೆ.

“ನೀವು ಕೆಲಸ ಮುಗಿಸಿ ಮತ್ತೆ ಆಟೋದಲ್ಲಿಯೇ ವಾಪಸ್ ಹೋಗುವುದಾದರೆ, ನಾನೇ ಬಂದು ನಿಮ್ಮನ್ನು ಡ್ರಾಪ್ ಮಾಡುತ್ತೇನೆ. ಆಗ ಸಾಧ್ಯವಾದರೆ ನೀವು ನನಗೆ ನಗದು ರೂಪದಲ್ಲಿ ಹಣ ನೀಡಬಹುದು, ಇದು ನಿಮಗೆ ಓಕೆನಾ? ಅಥವಾ ನಾನು ನಿಮ್ಮನ್ನು ಡ್ರಾಪ್ ಮಾಡಿದ ಜಾಗಕ್ಕೇ ಬರುತ್ತೇನೆ, ನಿಮ್ಮ ಬಳಿ ಹಣವಿದ್ದರೆ ಅಲ್ಲಿಯೇ ಪಡೆಯುತ್ತೇನೆ,” ಎಂದು ಆತ ಇಂಗ್ಲಿಷ್‌ನಲ್ಲಿ ಮೆಸೇಜ್ ಮಾಡಿದ್ದಾನೆ.

ಚಾಲಕನ ಈ ಪ್ರತಿಕ್ರಿಯೆ ಕಂಡು ನಿಷ್ಠಾ ಶೆಟ್ಟಿ ಅಕ್ಷರಶಃ ದಂಗಾಗಿದ್ದಾರೆ. ಆತ ಯಾವುದೋ ಅಧಿಕೃತ ಇಮೇಲ್‌ಗೆ ರಿಪ್ಲೈ ಮಾಡುವಂತೆ ಮಾತನಾಡುತ್ತಿದ್ದಾನಲ್ಲ ಎಂದು ಆಶ್ಚರ್ಯಪಟ್ಟಿದ್ದಾರೆ. ಚಾಲಕನ ಈ ‘ಪ್ರೊಫೆಷನಲ್’ ಶೈಲಿಯಿಂದ ತುಸು ಹಿಂದೆ ಸರಿದ ನಿಷ್ಠಾ, ತಕ್ಷಣವೇ ತಮ್ಮ ಭಾಷೆಯನ್ನು ಬದಲಾಯಿಸಿ ಇಂಗ್ಲಿಷ್‌ನಲ್ಲಿಯೇ ಮೆಸೇಜ್ ಮಾಡಿದ್ದಾರೆ.
“ದಯವಿಟ್ಟು ಸಂಜೆ 6 ಗಂಟೆಗೆ ವಾಪಸ್ ಹೋಗುವಾಗ ಬನ್ನಿ,” ಎಂದು ಅವರು ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಆಟೋ ಚಾಲಕ ನೀಡಿದ ಮತ್ತೊಂದು ಉತ್ತರ ಇನ್ನಷ್ಟು ಮಜವಾಗಿದೆ. ಆತ ಕೇವಲ “Noted” (ಗಮನಕ್ಕೆ ಬಂದಿದೆ) ಎಂದು ಒಂದೇ ಪದದಲ್ಲಿ ಗಂಭೀರವಾಗಿ ಉತ್ತರಿಸಿದ್ದಾನೆ.

ಈ ಇಡೀ ಸಂಭಾಷಣೆಯನ್ನು ನಿಷ್ಠಾ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. “ನಾನು ಕೆಲಸ ಮಾಡಿರುವ ಅರ್ಧಕ್ಕಿಂತ ಹೆಚ್ಚು ಜನರಿಗಿಂತ ಈತನ ಕಾರ್ಪೊರೇಟ್ ಸಂವಹನ ಕೌಶಲ್ಯ ಉತ್ತಮವಾಗಿದೆ” ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದಾರೆ. “ಆತನ ವೃತ್ತಿಪರತೆಗೆ ತಕ್ಕಂತೆ ನಾನೂ ಬದಲಾದ ಪರಿ” ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. “ಈ ಆಟೋ ಚಾಲಕನಿಗೆ ಒಂದು ಲಿಂಕ್ಡ್‌ಇನ್ ಪ್ರೊಫೈಲ್ ಇರಲೇಬೇಕು,” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು, “ಆತ ಕೊನೆಯಲ್ಲಿ ಕಳುಹಿಸಿದ ‘Noted’ ಎಂಬ ಪದವು ಕಾರ್ಪೊರೇಟ್ ನಡವಳಿಕೆಯ ಪರಾಕಾಷ್ಠೆ,” ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ, ಒಂದು ಸಾಮಾನ್ಯ ಪಾವತಿ ಸಮಸ್ಯೆಯು ಆಟೋ ಚಾಲಕನ ವೃತ್ತಿಪರತೆಯಿಂದಾಗಿ ಜನರಿಗೆ ಭರ್ಜರಿ ಮನರಂಜನೆ ನೀಡಿದೆ.

 

Share This Article
Facebook Twitter Copy Link Print
Previous Article Sucide ಕೊನೆಯ ಊಟ ಮುಗಿಸಿ ನದಿಗೆ ಹಾರಿದ ಕುಟುಂಬ: ಬಡತನಕ್ಕೆ ಬಲಿಯಾಯಿತು ಎರಡು ಪುಟ್ಟ ಜೀವಗಳು!!
Next Article CM DK shivakumar ಬೇರೆ ರಾಜ್ಯದ ಮತದಾರರಿಗೆ ನಾವು ಯಾಕೆ ಗ್ಯಾರಂಟಿ ನೀಡಬೇಕು? – ಸಿಎಂ ಡಿಕೆಶಿ

Popular Posts

ಬಿಜೆಪಿಯಲ್ಲಿ ‘ಆಡಿಯೋ’ ಬಾಂಬ್: ಬಿ. ವೈ. ವಿಜಯೇಂದ್ರ ಕೆಳಗಿಳಿಸಲು ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್ ಗೇಮ್? ಸದ್ದು ಮಾಡ್ತಿದೆ ವೈರಲ್ ಕ್ಲಿಪ್!

1 Min Read

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

1 Min Read

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್!

1 Min Read

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

1 Min Read

You Might Also Like

ಕರ್ನಾಟಕದೇಶಪ್ರಮುಖ

Mumbai ಶಾಲಾ ಬಸ್‌ ಮೇಲೆ ಬಿದ್ದ ಮರ – ಓರ್ವ ವಿದ್ಯಾರ್ಥಿ ಸಾವು, 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1 Min Read
Sportsಕರ್ನಾಟಕದೇಶಪ್ರಮುಖ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

1 Min Read
ದೇಶಪ್ರಮುಖವಿದೇಶ

AI ನಂಬಿ‌ ಕೆಟ್ಟ ಫೋರ್ಡ್! 350 ಅನುಭವಿ ಟೆಕ್ಕಿಗಳ ಮರುನೇಮಕ

2 Min Read
ಕರ್ನಾಟಕದೇಶಪ್ರಮುಖವಿದೇಶ

Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?