Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Crime > Sucide ಕೊನೆಯ ಊಟ ಮುಗಿಸಿ ನದಿಗೆ ಹಾರಿದ ಕುಟುಂಬ: ಬಡತನಕ್ಕೆ ಬಲಿಯಾಯಿತು ಎರಡು ಪುಟ್ಟ ಜೀವಗಳು!!
Crimeದೇಶಪ್ರಮುಖ

Sucide ಕೊನೆಯ ಊಟ ಮುಗಿಸಿ ನದಿಗೆ ಹಾರಿದ ಕುಟುಂಬ: ಬಡತನಕ್ಕೆ ಬಲಿಯಾಯಿತು ಎರಡು ಪುಟ್ಟ ಜೀವಗಳು!!

Share
3 Min Read
SHARE

newsics. com| ನ್ಯೂಸಿಕ್ಸ್
ತುತ್ತು ಅನ್ನಕ್ಕೂ ಪರದಾಡುವಂತಹ ಬಡತನ ಮತ್ತು ಸಾಲದ ಸುಳಿಯಲ್ಲಿ ಸಿಲುಕಿದ ಒಂದೇ ಕುಟುಂಬದ ನಾಲ್ವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿರುವ ಕರುಣಾಜನಕ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಟ್ಟುಫುಝಾ ನದಿಯಲ್ಲಿ ನಡೆದಿದೆ. ಮೃತರನ್ನು ಪಾಲಕ್ಕಾಡ್’ನ ಇಲವಂಚೇರಿಯ ನಾರಾಯಣನ್, ಈತನ ಪತ್ನಿ ಬಿಜಿಮೋಲ್ ಹಾಗೂ 2 ಹಾಗೂ7ವರ್ಷದ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ಈ ನಾಲ್ವರ ಕುಟುಂಬ ಹೋಟೆಲೊಂದರಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಊಟ ಮುಗಿದ ತಕ್ಷಣವೇ ಈ ಕುಟುಂಬ ಸೇತುವೆ ಮೇಲಿಂದ ನದಿಗೆ ಹಾರಿದೆ.

ಈತನ ಪತ್ನಿ ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದವರು. ಗುರುವಾಯೂರಿನ ದತ್ತಿ ಸಂಸ್ಥೆಯೊಂದು, ಇವರ ವಿವಾಹವನ್ನು ನಡೆಸಿತ್ತು. ಸಂಬಂಧಿಕರಿಂದ ದೂರವಿದ್ದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ವಾಸವಿದ್ದ ಮನೆಯಲ್ಲಿ ಬಾಡಿಗೆ ಕಟ್ಟದ ಹಿನ್ನಲೆಯಲ್ಲಿ, ಮನೆ ಮಾಲೀಕ, ಮನೆ ಖಾಲಿ ಮಾಡಿಸಿದ್ದ. ಹಾಗಾಗಿ, ನಾಲ್ವರ ಈ ಕುಟುಂಬ ಅಕ್ಷರಸಃ ಬೀದಿಗೆ ಬಂದಿತ್ತು.

ಕೊರಮಂಗಲಂ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಈ ಕುಟುಂಬ ವಾಸವಾಗಿತ್ತು. ಇಬ್ಬರು ಪುಟ್ಟ ಮಕ್ಕಳು, ಅಂಧ ಪತ್ನಿ, ಮುಂದೇನು ಎನ್ನುವುದು ತೋಚದೇ, ನಾರಾಯಣನ್, ಠಾಣೆಯಲ್ಲಿ ಕಣ್ಣೀರು ಇಡುತ್ತಾ ತನ್ನ ಕುಟುಂಬದ ಸಮಸ್ಯೆಯನ್ನು ಪೊಲೀಸರ ಮುಂದೆ ವಿವರಿಸುತ್ತಾರೆ. ಇದಕ್ಕೆ ಮಾನವೀಯತೆ ದೃಷ್ಟಿಯಲ್ಲಿ ಸ್ಪಂದಿಸಿದ ಪೊಲೀಸರು, ತಾವೇ ದುಡ್ಡನ್ನು ಹಾಕಿ, ದಿನಬಾಡಿಗೆ ಲೆಕ್ಕದಲ್ಲಿ ಅವರಿಗೊಂದು ಊಟ ವಸತಿಯನ್ನು ಕಲ್ಪಿಸಿದ್ದರು. ಈ ಕುಟುಂಬಕ್ಕಾಗಿ ಬಾಡಿಗೆ ಮನೆಯನ್ನು ಹುಡುಕಿ, ಇನ್ನೇನು ಆ ಮನೆಗೆ ಕುಟುಂಬವನ್ನು ಸ್ಥಳಾಂತರಿಸಬೇಕು ಎನ್ನುವಷ್ಟರಲ್ಲಿ, ಕುಟುಂಬ ಇಹಲೋಕದಿಂದಲೇ ತ್ಯಜಿಸುವ ದಾರುಣ ನಿರ್ಧಾರಕ್ಕೆ ಬಂದಿತ್ತು.
ಯಾವ ದಿನದಂದು ಕುಟುಂಬವನ್ನು ಬಾಡಿಗೆ ಮನೆಗೆ ಶಿಫ್ಟ್ ಮಾಡಬೇಕೆಂದು ಪೊಲೀಸರು ನಿರ್ಧರಿಸಿದ್ದರೋ, ಅದೇ ದಿನ ಕುಟುಂಬ ನಾಪತ್ತೆಯಾಗಿತ್ತು. ಇವರಿಗಾಗಿ ವಿಶೇಷ ತಂಡದೊಂದಿಗೆ ಪೊಲೀಸರು ಹುಡುಕಾಟ ನಡೆಸಿದಾಗ, ಸಿಸಿಟಿವಿಯಲ್ಲಿ ಇವರ ಚಲನವಲನದ ದೃಶ್ಯಗಳು ಪತ್ತೆಯಾಗಿದೆ. ಅದರಲ್ಲಿ, ನಾರಾಯಣನ್ ತನ್ನ ಇಬ್ಬರು ಮಕ್ಕಳ ಕೈಯನ್ನು ಹಿಡಿದುಕೊಂಡು, ಹೋಟೆಲ್ ಬಳಿ ನಂತರ ಚರ್ಚ್ ಬಳಿ ಇರುವುದು ಪತ್ತೆಯಾಗಿತ್ತು. ಅಲ್ಲಿಂದ, ಪಿರಾವೂಮ್ ಸೇತುವೆಯ ಕಡೆ ನಡೆದುಕೊಂಡು ಹೋಗಿರುವುದು ರೆಕಾರ್ಡ್ ಆಗಿತ್ತು.

ಶೋಧಕಾರ್ಯವನ್ನು ಸ್ಥಳೀಯ ಪೊಲೀಸರು ತೀವ್ರಗೊಳಿಸುತ್ತಿರುವ ಹೊತ್ತಿನಲ್ಲೇ, ಮೊದಲು ಎರಡು ವರ್ಷದ ಮಗುವಿನ ಶವ ತೇಲಿ ಬರುತ್ತಿರುವುದನ್ನು ಮೀನುಗಾರರೊಬ್ಬರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಇಡೀ ಕುಟುಂಬವೇ ನದಿಗೆ ಹಾರಿರಬೇಕು ಎಂದು ಅಗ್ನಿಶಾಮಕದಳ ಶೋಧ ಕಾರ್ಯಾಚರಣೆಗೆ, ಸ್ಥಳೀಯ ಪೊಲೀಸರ ಜೊತೆ ಕೈಜೋಡಿಸಿತು. ಮೊದಲು, ನಾರಾಯಣನ್ ಪತ್ನಿ ಬಿಜಿಮೋಲ್, ನಂತರ ನಾರಾಯಣನ್ ಮತ್ತು ಕೊನೆಯದಾಗಿ ಆರು ವರ್ಷದ ಮಗುವಿನ ಶವವನ್ನು ಹೊರತೆಗೆಯಲಾಗಿದೆ.
“ಬಾಡಿಗೆ ಮನೆಯಿಂದ ಮಾಲೀಕ ಹೊರಹಾಕಿದ ಒಂದು ವಾರದ ನಂತರ ಕುಟುಂಬ ಈ ತೀವ್ರ ನಿರ್ಧಾರವನ್ನು ತೆಗೆದುಕೊಂಡಿದೆ. ಆರು ವಾರಗಳಿಂದ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಾಯವನ್ನು ಮಾಡುತ್ತಿದ್ದಾರೆ, ನಮಗೆ ಪರ್ಯಾಯ ವ್ಯವಸ್ಥೆಯೊಂದನ್ನು ಮಾಡಿಕೊಡಿ ಎಂದು ಒಂದು ವಾರದ ಹಿಂದೆ ನಮ್ಮಲ್ಲಿ ವಿನಂತಿಸಿಕೊಂಡಿದ್ದರು. ಅವರಿಗೆ ಪುನರ್-ವಸತಿ, ಕಲ್ಪಿಸಲು ನಾವು ಪ್ರಯತ್ನವನ್ನೂ ಮಾಡಿದ್ದೆವು. NJO ಒಂದರಲ್ಲಿ ಮಾತುಕತೆ ನಡೆದಿತ್ತು, ಆದರೆ, ಅದು ಮಹಿಳೆಯರಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ, ನಾವೇ ಅವರ ಕಷ್ಟಕ್ಕೆ ಸಹಾಯವಾಗಿ ನಿಂತಿದ್ದೆವು. ನಾವೇ ಮನೆಯನ್ನು ಹುಡುಕಿ, ಗುರುವಾರ, ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆವು. ಅಷ್ಟರೊಳಗೆ ಕುಟುಂಬ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದೆ” ಎಂದು ಪೊಲೀಸ್ ನಿರೀಕ್ಷಕರಾದ ಕೆಆರ್ ಪ್ರಶಾಂತ್ ಕುಮಾರ್, ಬೇಸರ ವ್ಯಕ್ತ ಪಡಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಈ ದುರಂತ ಸಾವಿನ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಕಳೆದ ಒಂದು ವರ್ಷದಿಂದ ಈ ಕುಟುಂಬ ಗ್ರಾಮದಲ್ಲಿ ವಾಸಿಸುತ್ತಿತ್ತು. ಸರ್ಕಾರದ ಯಾವುದೇ ಸಾಮಾಜಿಕ ಭದ್ರತೆಯಡಿಯಲ್ಲಿ ಈ ಕುಟುಂಬ ಇರಲಿಲ್ಲ. ಪ್ರತಿದಿನ ಬೆಳಗ್ಗೆ ಮಕ್ಕಳನ್ನು ದಂಪತಿಗಳು ಸ್ಕೂಲಿಗೆ ಬಿಡುತ್ತಿದ್ದರು, ಶಾಲೆಯ ಸಮಯ ಮುಗಿಯುತ್ತಿದ್ದಂತೇ, ವಾಪಸ್ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಇವರು ಏನು ಕೆಲಸ ಮಾಡಿಕೊಂಡಿದ್ದರು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಸರ್ಕಾರ ಬಡತನ ನಿರ್ಮೂಲನೆಯಾಗಿದೆ ಎಂದೇನೋ ಹೇಳುತ್ತಿದೆ. ಆದರೆ, ಈ ಕಟುವಾಸ್ತವ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ” ಎಂದು ಗ್ರಾಮ ಪಂಚಾಯತಿ ಸದಸ್ಯ ಕೆಯು ಶಮೀರ್ ಹೇಳಿದ್ದಾರೆ.

Share This Article
Facebook Twitter Copy Link Print
Previous Article School Students ಶಾಲಾ ಮಕ್ಕಳ ಮೊಬೈಲ್ ಗೀಳಿಗೆ ಬೀಳಲಿದೆ ಬ್ರೇಕ್, ರಾಜ್ಯಾದ್ಯಂತ ಶೀಘ್ರದಲ್ಲೇ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಮಹಾ ಅಭಿಯಾನ ಆರಂಭ!
Next Article Viral story ಆಟೋ ಚಾಲಕನ ‘ಕಾರ್ಪೊರೇಟ್’ ಸ್ಟೈಲ್‌ ರಿಪ್ಲೈಗೆ ದಂಗಾದ ಯುವತಿ: ವಿಡಿಯೋ ವೈರಲ್!!

Popular Posts

ಬಿಜೆಪಿಯಲ್ಲಿ ‘ಆಡಿಯೋ’ ಬಾಂಬ್: ಬಿ. ವೈ. ವಿಜಯೇಂದ್ರ ಕೆಳಗಿಳಿಸಲು ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್ ಗೇಮ್? ಸದ್ದು ಮಾಡ್ತಿದೆ ವೈರಲ್ ಕ್ಲಿಪ್!

1 Min Read

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

1 Min Read

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್!

1 Min Read

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

1 Min Read

You Might Also Like

ಕರ್ನಾಟಕದೇಶಪ್ರಮುಖ

Mumbai ಶಾಲಾ ಬಸ್‌ ಮೇಲೆ ಬಿದ್ದ ಮರ – ಓರ್ವ ವಿದ್ಯಾರ್ಥಿ ಸಾವು, 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1 Min Read
Sportsಕರ್ನಾಟಕದೇಶಪ್ರಮುಖ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

1 Min Read
ದೇಶಪ್ರಮುಖವಿದೇಶ

AI ನಂಬಿ‌ ಕೆಟ್ಟ ಫೋರ್ಡ್! 350 ಅನುಭವಿ ಟೆಕ್ಕಿಗಳ ಮರುನೇಮಕ

2 Min Read
ಕರ್ನಾಟಕದೇಶಪ್ರಮುಖವಿದೇಶ

Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?