Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Krishna byre gowda ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡು ಕೂತಿದಿನಾ? ಅಸಂಬದ್ಧ ಉತ್ತರಗಳನ್ನು ಕೊಡಬೇಡಿ- ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ
ಕರ್ನಾಟಕದೇಶಪ್ರಮುಖ

Krishna byre gowda ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡು ಕೂತಿದಿನಾ? ಅಸಂಬದ್ಧ ಉತ್ತರಗಳನ್ನು ಕೊಡಬೇಡಿ- ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ

Share
2 Min Read
SHARE

newsics.com| ನ್ಯೂಸಿಕ್ಸ್
ಅಗತ್ಯ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಸಭೆಗೆ ಬಂದ ಅಧಿಕಾರಿಯನ್ನ ಜಿಬಿಎ ಕರ್ತವ್ಯದಿಂದಲೇ ಬಿಡುಗಡೆ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡರು ಖಡಕ್ ಆಗಿ ಸೂಚನೆ ನೀಡಿದ್ದಾರೆ.

ಅವರು ಇಲಾಖಾ ಪರಿಶೀಲನೆ ಸಭೆ ನಡೆಸಿ ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು.

ಇಲಾಖೆಯಲ್ಲಿ 19 ಮಂದಿ ಅಧಿಕಾರಿಗಳಿದ್ದರೂ ಸಚಿವರು ಕರೆದ ಸಭೆಗೆ ಕನಿಷ್ಠ ಅಂಕಿ-ಅಂಶಗಳು ಇಲ್ಲದೆ ಬರಿಗೈಲಿ ಬಂದಿದ್ದ ಅಧಿಕಾರಿಯೊಬ್ಬರನ್ನು ಕಂಡು ಕೆಂಡಾಮಂಡಲರಾದ ಸಚಿವರು, ‘ಅಗತ್ಯ ದಾಖಲೆ ತರದೇ ಬರಿಗೈಲಿ ಬಂದಿದ್ದೀರಾ?’ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯೋಜನೆಗಳ ಪ್ರಗತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾದ ಅಧಿಕಾರಿಗಳ ವಿರುದ್ಧ ಗರಂ ಆದರು.

ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಸ್ತಾಪಿಸಿದ ಸಚಿವರು, ‘ನೀವುಗಳು 20 ವರ್ಷಗಳಿಂದ ಸಂತಾನ ಹರಣ (ABC) ಕಾರ್ಯಕ್ರಮ ನಡೆಸುತ್ತಿದ್ದರೂ ನಾಯಿಗಳ ಸಂಖ್ಯೆ ಅಷ್ಟೇ ಇರುವುದಕ್ಕೆ ಹೇಗೆ ಸಾಧ್ಯ?’ ಎಂದು ಸಚಿವರು ಪ್ರಶ್ನಿಸಿದರು. ನೀವು ಸಂತಾನಹರಣ ಕಾರ್ಯಕ್ರಮ ನಡೆಸಿದ ಬಗ್ಗೆಯೂ ಅನುಮಾನವಿದೆ. ಸರಿಯಾದ ಅಂಕಿ ಅಂಶಗಳನ್ನು ನೀಡುವಂತೆ ಸೂಚಿಸಿದರು. ಈ ವೇಳೆ ಅಧಿಕಾರಿಗಳು ನೀಡಿದ ಉತ್ತರಗಳು ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಸಚಿವರು ಇನ್ನಷ್ಟು ಕಿಡಿಕಾರಿದರು. ‘ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡು ಕೂತಿದ್ದೀನಿ? ಅಸಂಬದ್ಧ ಉತ್ತರಗಳನ್ನು ಕೊಡಬೇಡಿ. ಸರಿಯಾದ ಮಾಹಿತಿ, ಅಂಕಿ ಅಂಶಗಳೊಂದಿಗೆ ಸಭೆಗೆ ಬನ್ನಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಮೊದಲನೆಯದಾಗಿ, ಇವತ್ತು ಎರಡು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿರುವ ಬೀದಿನಾಯಿಗಳ ಸಮಸ್ಯೆ ಮತ್ತು ಈ ಸಮಸ್ಯೆಗೆ ಕಾನೂನಾತ್ಮಕವಾಗಿ ನಾವು ಹೇಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದ್ದೇವೆ. ಇನ್ನೊಂದು ಬೆಂಗಳೂರು ನಗರದಲ್ಲಿ ನಾವು ಲಕ್ಷಾಂತರ ಗಿಡಗಳನ್ನ ನೆಡುತ್ತಿದ್ದೇವೆ. ಅದು ಎಲ್ಲಿ ಹೋಗ್ತಾ ಇದೆ? ಗಿಡ ನೆಡೋದಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿದೆ. ಆದ್ರೆ ನೆಟ್ಟ ಗಿಡಗಳೆಲ್ಲ ಎಲ್ಲಿ ಹೋಗ್ತಾವೆ ಅನ್ನೋದು ಪ್ರಶ್ನೆ. ಲಕ್ಷಾಂತರ ಗಿಡ ನೆಟ್ಟರು ಕೆಲವು ತಿಂಗಳ ಬಳಿಕ ನೆಟ್ಟ ಜಾಗದಲ್ಲಿ ಗಿಡಗಳೇ ಇರಲ್ಲ. ಹಾಗಾದ್ರೆ ಗಿಡಗಳೆಲ್ಲ ಎಲ್ಲಿಗೆ ಹೋದವು? ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

ನಾಯಿಗಳ ಸಂತಾನಹರಣದಲ್ಲಿ ಜಿಬಿಎ ಅಧಿಕಾರಿಗಳ ಕಳ್ಳಾಟ ಇದೆ. ಪಶು ಸಂಗೋಪನಾ ಇಲಾಖೆ ಅದಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು. ಕಳೆದ 8 ವರ್ಷಗಳ ಅವಧಿಯಲ್ಲಿ 3 ಲಕ್ಷ ನಾಯಿಗಳಿಗೆ ಸಂತಾನಹರಣ ಮಾಡಿದ್ದಾರೆ, ಅದಕ್ಕಾಗಿ 120 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ನಾಯಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಹಾಗಾದರೆ ಹಣ ಎಲ್ಲಿ ಹೋಯ್ತು? ಸಂತಾನ ಹರಣ ಯಾರಿಗೆ ಮಾಡಿದ್ರು? ಅನ್ನೋ ಸಂಶಯ ಇದೆ ಅಂತಾ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

Share This Article
Facebook Twitter Copy Link Print
Previous Article Ev policy ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ 1 ಲಕ್ಷದವರೆಗೆ ರಿಯಾಯಿತಿ – ಗ್ರಾಹಕರಿಗೆ ಭರ್ಜರಿ ಸಬ್ಸಿಡಿ ಭಾಗ್ಯ
Next Article Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

Popular Posts

ಬಿಜೆಪಿಯಲ್ಲಿ ‘ಆಡಿಯೋ’ ಬಾಂಬ್: ಬಿ. ವೈ. ವಿಜಯೇಂದ್ರ ಕೆಳಗಿಳಿಸಲು ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್ ಗೇಮ್? ಸದ್ದು ಮಾಡ್ತಿದೆ ವೈರಲ್ ಕ್ಲಿಪ್!

1 Min Read

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

1 Min Read

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್!

1 Min Read

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

1 Min Read

You Might Also Like

ಕರ್ನಾಟಕದೇಶಪ್ರಮುಖ

Mumbai ಶಾಲಾ ಬಸ್‌ ಮೇಲೆ ಬಿದ್ದ ಮರ – ಓರ್ವ ವಿದ್ಯಾರ್ಥಿ ಸಾವು, 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1 Min Read
Sportsಕರ್ನಾಟಕದೇಶಪ್ರಮುಖ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

1 Min Read
ದೇಶಪ್ರಮುಖವಿದೇಶ

AI ನಂಬಿ‌ ಕೆಟ್ಟ ಫೋರ್ಡ್! 350 ಅನುಭವಿ ಟೆಕ್ಕಿಗಳ ಮರುನೇಮಕ

2 Min Read
ಕರ್ನಾಟಕದೇಶಪ್ರಮುಖವಿದೇಶ

Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?