newsics.com| ನ್ಯೂಸಿಕ್ಸ್
ಶಿವಮೊಗ್ಗ: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಮೆಜೆಸ್ಟಿಕ್ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ (Bhama Harish) ಮಗ ಉಲ್ಲಾಸ್ ಗೌಡ (Ullas Gowda) ಹೃದಯಾಘಾತದಿಂದ ಉಲ್ಲಾಸ್ ಮೃತಪಟ್ಟಿದ್ದಾರೆ
ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಪ್ರದೇಶದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಇತೀಚೆಗೆ ಚಂದನಾ ಗೌಡ ಜತೆ ಉಲ್ಲಾಸ್ ಮದುವೆ ನಿಶ್ಚಯವಾಗಿತ್ತು. ಈ ಜೋಡಿಯ ಮನೆಯಲ್ಲಿ ಸರಳವಾಗಿ ದೀಪದ ಶಾಸ್ತ್ರ ನೆರವೇರಿತ್ತು. ಕುಟುಂಬಸ್ಥರು ನಿಶ್ಚಯಿಸಿದಂತೆ ಈ ವರ್ಷವೆ ಉಲ್ಲಾಸ್ ಗೌಡ – ಚಂದನಾ ಗೌಡ ಮದುವೆ ಆಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಉಲ್ಲಾಸ್ ಮೃತಪಟ್ಟಿದ್ದಾರೆ.
ಭಾ ಮಾ ಹರೀಶ್ ಮಗನ ಮದುವೆ ಸಂಭ್ರಮದಲ್ಲಿದ್ದರು. ಹೀಗಿರುವಾಗಲೇ ಮಗನ ಸಾವಿನ ಸುದ್ದಿ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಉಲ್ಲಾಸ್ ಗೌಡ – ಚಂದನಾ ಗೌಡ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಕುಟುಂಬಸ್ಥರು ನಿಶ್ಚಯಿಸಿದಂತೆ ಉಲ್ಲಾಸ್ ಗೌಡ – ಚಂದನಾ ಗೌಡ ಮದುವೆಗೆ ಸಮ್ಮತಿ ನೀಡಿದ್ದರು.
https://www.newsics.com/2026/06/27/fir-case/
https://www.newsics.com/2026/06/27/krishi-thapanda-