newsics. com| ನ್ಯೂಸಿಕ್ಸ್
ಸ್ಯಾಂಡಲ್ವುಡ್ನ ನಟಿ ಕೃಷಿತಾಪಂಡ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಉದ್ಯಮಿ ವೈಶಾಕ್ ಆತ್ಮಹ*ತ್ಯೆ ಪ್ರಕರಣ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡ ಬೆನ್ನಲ್ಲೆ ನಟಿ ಕೃಷಿ ತಾಪಂಡ ಅವರು ಹೆಸರು ಭಾರೀ ಸದ್ದು ಮಾಡಿದೆ.
ಈ ಬೆಡಗಿ ಮೂಲತಃ ಕೊಡಗು ಜಿಲ್ಲೆಯವರಾಗಿದ್ದು, ಮಾಡೆಲ್ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2014ರಲ್ಲಿ ಮಿಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಕನ್ನಡ ಚಿತ್ರರಂಗದಲ್ಲಿ ನಾಯಕಿ ನಟಿಯಾಗಿ ತಮ್ಮ ಪಯಣವನ್ನು ಬೆಳೆಸಿದರು. ಕಹಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ಬಳಿಕ ಸಿನಿ ಪ್ರೇಕ್ಷಕರ ಗಮನ ಸೆಳೆದರು.
2016ರಲ್ಲಿ ಬಿಡುಗಡೆಯಾದ “ಅಕಿರ” ಸಿನಿಮಾದಲ್ಲಿ ಕೃಷಿ ತಾಪಂಡ ಅವರ ವೃತ್ತಿ ಜೀವನ ಬಹು ದೊಡ್ಡ ತಿರುವು ಪಡೆದುಕೊಂಡಿತು. ಈ ರೊಮ್ಯಾಂಟಿಕ್ ಅಕಿರ ಸಿನಿಮಾದಲ್ಲಿ ಲಾವಣ್ಯ ಅನ್ನೋ ಪಾತ್ರದಲ್ಲಿ ಸಖತ್ ಸೈಲಿಶ್ ಲುಕ್ನಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದರು. ನಿರ್ದೇಶಕ ನವೀನ್ ರೆಡ್ಡಿ ಸಿನಿಮಾದವಾದ ಅಕಿರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಚಿರಪರಿಚಿತರಾದರು. ಇನ್ನೂ 2017ರಲ್ಲಿ ಬಿಡುಗಡೆಯಾದ ಎರಡು ಕನಸು ಸಿನಿಮಾದಲ್ಲಿ ನಟ ವಿಜಯ್ ರಾಘವೇಂದ್ರ ಮತ್ತು ಕರುಣ್ಯಾ ರಾಮ್ ಜೊತೆಗೆ ಕೃಷಿ ತಾಪಂಡ ನಟಿಸಿದರು.
ಕಳೆದ ಕೆಲವು ವರ್ಷಗಳಿಂದ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ‘ಬಿಗ್ ಬಾಸ್ ಕನ್ನಡ’ದಲ್ಲಿಯೂ ಭಾಗವಹಿಸಿದ್ದಾರೆ. ಆದರೆ, ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ದುರಂತ ಘಟನೆಯಿಂದಾಗಿ ನಟಿ ಈಗ ಅನಿರೀಕ್ಷಿತವಾಗಿ ಸುದ್ದಿಯಲ್ಲಿದ್ದಾರೆ.
ಕೊಡಗಿನ ಕೊಡವ ಕುಟುಂಬದಿಂದ ಬಂದ ಕೃಷಿ, ಮೊದಲಿನಿಂದಲೂ ಚಿತ್ರರಂಗದ ಭಾಗವಾಗಿರಲಿಲ್ಲ. ಮಾಡೆಲಿಂಗ್ ಮತ್ತು ನಟನಾ ಜಗತ್ತಿಗೆ ಪ್ರವೇಶಿಸುವ ಮೊದಲು, ಅವರು ‘ಇಂಟರ್ಕಾಲ್’ ಎಂಬ ಅಮೇರಿಕನ್ ಆಡಿಯೊ ಕಾನ್ಫರೆನ್ಸಿಂಗ್ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದರು. ಅವರ ಚಲನಚಿತ್ರ ಪ್ರಯಾಣವು ‘ಕಹಿ’ ಚಿತ್ರದಲ್ಲಿನ ಪಾತ್ರದೊಂದಿಗೆ ಪ್ರಾರಂಭವಾದರೂ, 2016 ರಲ್ಲಿ ಬಿಡುಗಡೆಯಾದ ‘ಅಕಿರಾ’ ಚಿತ್ರದ ಮೂಲಕ ಅವರು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಪರಿಚಯವಾದರು.
2018ರಲ್ಲಿ ಬಿಡುಗಡೆಯಾದ ಇರಾ ಸಿನಿಮಾದಲ್ಲಿ ಕೃಷಿತಾಪಂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇನ್ನೂ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿ ಕೃಷಿತಾಪಂಡ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನೂ, ಭರಾಟೆ, ಕಾಳಿದಾಸ ಮೇಷ್ಟ್ರು, ಲಂಕೆ, ಪಾವನಿ ಸಿನಿಮಾದಲ್ಲಿ ನಟಿಸಿದರು. ಮಾತ್ರವಲ್ಲದೇ 2023ರಲ್ಲಿ ಬಿಡುಗಡೆಯಾದ ರೂಪಾಯಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು.