Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Ayodhya scam ಅಯೋಧ್ಯೆ ದೇಣಿಗೆ ದುರ್ಬಳಕೆ: 8 ಮಂದಿ ಬಂಧನ
ದೇಶಪ್ರಮುಖ

Ayodhya scam ಅಯೋಧ್ಯೆ ದೇಣಿಗೆ ದುರ್ಬಳಕೆ: 8 ಮಂದಿ ಬಂಧನ

Share
2 Min Read
SHARE

newsics.com | ನ್ಯೂಸಿಕ್ಸ್

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಎಫ್‌ಐಆರ್ (FIR) ದಾಖಲಾದ ಕೆಲವೇ ಗಂಟೆಗಳಲ್ಲಿ ಎಲ್ಲಾ ಎಂಟು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ತನಿಖಾ ತಂಡ (SIT) ನೀಡಿದ ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಬಂಧಿತ ಆರೋಪುಗಳು. ಎಫ್‌ ಐಆರ್‌ನಲ್ಲಿ ಇತರ ಕೆಲವು ಅಪರಿಚಿತ ವ್ಯಕ್ತಿಗಳ ಹೆಸರನ್ನೂ ಉಲ್ಲೇಖಿಸಲಾಗಿದೆ.

ಆರೋಪಿಗಳ ವಿರುದ್ಧ ಕಳ್ಳತನ, ವಿಶ್ವಾಸದ್ರೋಹ, ಕದ್ದ ಆಸ್ತಿಯನ್ನು ಮರೆಮಾಡುವುದು ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಟ್ರಸ್ಟಿ ಕೃಷ್ಣ ಮೋಹನ್ ಯಾರು?
ಹಿರಿಯ ಟ್ರಸ್ಟಿ ಕಾಮೇಶ್ವರ್ ಚೌಪಾಲ್ ಅವರ ನಿಧನದ ನಂತರ, ತೆರವಾಗಿದ್ದ ಸ್ಥಾನಕ್ಕೆ ಹರ್ದೋಯಿ ನಿವಾಸಿಯಾದ ಕೃಷ್ಣ ಮೋಹನ್ ಅವರನ್ನು ಸೆಪ್ಟೆಂಬರ್ 16, 2025 ರಂದು ಟ್ರಸ್ಟಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಲಕ್ನೋ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿರುವ ಇವರು, ಪರಮಾಣು ಇಂಧನ ವಲಯದಲ್ಲಿ ಆರು ವರ್ಷ ಕೆಲಸ ಮಾಡಿದ್ದರು. ಆ ಬಳಿಕ ಭಾರತೀಯ ಅರಣ್ಯ ಸೇವೆಗೆ (IFS) ಆಯ್ಕೆಯಾಗಿ, 2012 ರಲ್ಲಿ ನಿವೃತ್ತರಾದ ನಂತರ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ.

ದೇಣಿಗೆ ದುರುಪಯೋಗದ ಬಗ್ಗೆ ಟ್ರಸ್ಟ್ ಮಾಡಿದ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13 ರಂದು ಎಸ್‌ಐಟಿ (SIT) ರಚಿಸಿತ್ತು. ಇದಕ್ಕೂ ಮುನ್ನ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ನಾಪತ್ತೆಯಾಗಿದೆ ಎಂದು ಆರೋಪಿಸಿ, ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಎಚ್ಪಿ ಮುಖ್ಯಸ್ಥ ಅಲೋಕ್ ಕುಮಾರ್, ಮುಂಬರುವ 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್ಪಿ ಮತ್ತು ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ ಎಂದು ತಿರುಗೇಟು ನೀಡಿದ್ದರು.

Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?

Siya – Kethan ಉದ್ಯಮಿ ಕೇತನ್ ಕೊ*ಲೆ ಪ್ರಕರಣ: ಪ್ರತಿದಿನ ಹೊಸ ಕಥೆ, ಹ*ತ್ಯೆಗೆ ನಿಜ ಕಾರಣ ಬಹಿರಂಗ

TAGGED:misuse-of-ayodhya-donation-8-people-arrested
Share This Article
Facebook Twitter Copy Link Print
Previous Article Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?
Next Article Torture of a child ಮಗುವನ್ನು ಒದ್ದು ಉರುಳಿಸಿದ ಅಂಗನವಾಡಿ ಸಹಾಯಕಿ! ಆಘಾತಕಾರಿ‌ ವಿಡಿಯೋ ನೋಡಿ

Popular Posts

Bomb blast ಕನಕಪುರ ಫಾರ್ಮ್‌ಹೌಸ್ ಬಳಿ ನಾಡಬಾಂಬ್ ಸ್ಫೋಟ: ವಕೀಲನಿಗೆ ಗಾಯ

1 Min Read

Cancer medicine ಭಾರತಕ್ಕೆ ಎಂಟ್ರಿ ಕೊಟ್ಟ ಅತ್ಯಾಧುನಿಕ ಕ್ಯಾನ್ಸರ್ ಔಷಧ

2 Min Read

Ayodhye Ramamandir ರಾಮಮಂದಿರ ದೇಣಿಗೆ ಲೂಟಿ: ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್, ಟ್ರಸ್ಟಿ ಮಿಶ್ರಾ ರಾಜೀನಾಮೆ

1 Min Read

Indian Citizen ಅಮೆರಿಕದ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ವೃದ್ಧೆ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ನಾನೇ ಸೀರೆ ಕತ್ತರಿಸಿ ವೈಶಾಕ್ ಮೃತದೇಹ ಕೆಳಗಿಳಿಸಿದ್ದೆ: ನಟಿ ಕೃಷಿ ತಾಪಂಡ ಹೇಳಿಕೆ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actor Sharuk Khan ಮಂಗಳೂರಲ್ಲೇ ಇದ್ದಿದ್ರೆ ಶಿಕ್ಷಕನಾಗಿರ್ತಿದ್ದೆ: ಬಾಲಿವುಡ್ ನಟ ಶಾರುಕ್ ಖಾನ್, ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖಮನರಂಜನೆ

Vinesh Vijayalakshmi ವಿನೀಶ್ ಕಾರು ಓಡಿಸುತ್ತಿರಲಿಲ್ಲ, ಯಾರಿಗೆ ಏನೂ ಆಗಿಲ್ಲ: ಹಾಗಾದ್ರೆ ನಡೆದಿದ್ದೇನು? ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

LPG ಸಿಲಿಂಡರ್ ಮೇಲಿನ ಎಲ್ಲ ನಿರ್ಬಂಧ ತಕ್ಷಣದಿಂದಲೇ ತೆರವು: ಕೇಂದ್ರ ಸರ್ಕಾರ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?