newsics.com
ಮಂಡ್ಯ: ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಸಮೀಪದ ಕಾವೇರಿ ನದಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಐವರು ಬುಧವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದ ಶ್ವೇತಾ (38) ಅವರ ಪುತ್ರಿ ಚೈತ್ರಾ (19), ಅವರ ಅತ್ತಿಗೆ ವಿಜಯಲಕ್ಷ್ಮಿ (52), ಅತ್ತಿಗೆ ಮಗಳು ಪ್ರಿಯಾಂಕಾ (28) ಹಾಗೂ ಬೆಂಗಳೂರಿನ ಕಾರು ಚಾಲಕ ಮಹೇಶ್ (38) ಮೃತಪಟ್ಟವರು.
ಪ್ರವಾಸಕ್ಕೆ ಬಂದಿದ್ದ ಏಳು ಮಂದಿಯಲ್ಲಿ ಶ್ವೇತಾ ಅವರ ಪತಿ ರವಿ ಮತ್ತು ಪ್ರಿಯಾಂಕಾ ಅವರ 2 ವರ್ಷದ ಮಗು ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಅವರ ಕುಟುಂಬಸ್ಥರು, ಬುಧವಾರ ಬೆಳಿಗ್ಗೆ ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮಕ್ಕೆ ಬೀಗರ ಊಟಕ್ಕೆ ಹೋಗಿದ್ದರು. ಅಲ್ಲಿಂದ ಮುತ್ತತ್ತಿಗೆ ಪ್ರವಾಸಕ್ಕೆಂದು ಸಂಜೆ 4ಕ್ಕೆ ಬಂದಿದ್ದರು.
ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ, ಕಾವೇರಿ ನದಿಯ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಶ್ವೇತಾ ಅವರು ನೀರಿನ ಮಡುವಿನಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಹೋದ ಇತರ ನಾಲ್ವರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನುರಿತ ಈಜುಗಾರರ ನೆರವಿನಿಂದ 5 ಮೃತದೇಹಗಳನ್ನು ಸಂಜೆ ವೇಳೆಗೆ ಹೊರತೆಗೆಯಲಾಯಿತು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ
‘ಮೇನ್ ವಾಪಸ್ ಆವುoಗಾ’ ಯಶಸ್ಸಿನ ಬಳಿಕ ಬಾಲಿವುಡ್ಗೆ ಇಮ್ತಿಯಾಜ್ ಅಲಿ ಸಲಹೆ; ಪ್ರೇಕ್ಷಕರಿಂದಲೇ ಕಲಿಯಿರಿ ಎಂದ ನಿರ್ದೇಶಕ