Newsics.com
ಮುಂಬೈ: ಆರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ನಂತರ ಪ್ರೇಕ್ಷಕರ ಮೆಚ್ಚುಗೆಯಿಂದ ಭರ್ಜರಿ ಕಮ್‌ಬ್ಯಾಕ್ ಮಾಡಿದ ‘ಮೇನ್ ವಾಪಸ್ ಆವಂಗಾ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಇಮ್ತಿಯಾಜ್ ಅಲಿ ಬಾಲಿವುಡ್‌ಗೆ ಮಹತ್ವದ ಸಲಹೆ ನೀಡಿದ್ದಾರೆ. ಉತ್ತಮ ಸಿನಿಮಾಗಳನ್ನು ಹೇಗೆ ನಿರ್ಮಿಸಬೇಕು ಮತ್ತು ಅವುಗಳನ್ನು ಹೇಗೆ ಜನರಿಗೆ ತಲುಪಿಸಬೇಕು ಎಂಬುದನ್ನು ಚಿತ್ರರಂಗವು ಪ್ರೇಕ್ಷಕರಿಂದಲೇ ಕಲಿಯಬೇಕು ಎಂದು ಅವರು ಹೇಳಿದ್ದಾರೆ.
ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಸಾಧಾರಣ ಗಳಿಕೆ ಕಂಡಿದ್ದರೂ, ಪ್ರೇಕ್ಷಕರಿಂದ ಬಂದ ಉತ್ತಮ ಪ್ರತಿಕ್ರಿಯೆ ಹಾಗೂ ‘ವರ್ಡ್ ಆಫ್ ಮೌತ್’ ಪ್ರಚಾರದಿಂದ ಎರಡನೇ ವಾರದಲ್ಲಿ ಚಿತ್ರದ ಕಲೆಕ್ಷನ್‌ನಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದೇ ಚಿತ್ರದ ಯಶಸ್ಸಿನ ಪ್ರಮುಖ ಕಾರಣ ಎಂದು ಇಮ್ತಿಯಾಜ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
“ಪ್ರೇಕ್ಷಕರು ಒಂದು ಚಿತ್ರವನ್ನು ಒಪ್ಪಿಕೊಂಡರೆ ಅದರ ಭವಿಷ್ಯವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಉತ್ತಮ ವಿಷಯವಿರುವ ಸಿನಿಮಾಗಳಿಗೆ ಜನರು ಯಾವಾಗಲೂ ಬೆಂಬಲ ನೀಡುತ್ತಾರೆ,” ಎಂದು ಅವರು ಹೇಳಿದ್ದಾರೆ. ಚಿತ್ರರಂಗವು ಕೇವಲ ಪ್ರಚಾರದ ಮೇಲೆ ಅವಲಂಬಿಸದೆ, ಗುಣಮಟ್ಟದ ಕಥೆ ಮತ್ತು ಭಾವನಾತ್ಮಕ ಸಂಪರ್ಕದ ಮೇಲೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಿಭಜನೆಯ ಹಿನ್ನೆಲೆಯ ಪ್ರೇಮಕಥೆಯನ್ನು ಒಳಗೊಂಡಿರುವ ‘ಮೇನ್ ವಾಪಸ್ ಆವುoಗಾ’ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್, ಶರ್ವರಿ, ವೇದಾಂಗ್ ರೈನಾ ಹಾಗೂ ನಸೀರುದ್ದೀನ್ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಆರಂಭಿಕ ಹಿನ್ನಡೆಯನ್ನು ಮೀರಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಪುನರಾಗಮನ ದಾಖಲಿಸಿದೆ.
ಚಿತ್ರದ ಯಶಸ್ಸಿನ ಬಳಿಕ ಇಮ್ತಿಯಾಜ್ ಅಲಿ ನೀಡಿರುವ ಈ ಹೇಳಿಕೆ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿಷಯಾಧಾರಿತ ಸಿನಿಮಾಗಳ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಕೇತನ್ ಕೊಲೆ ಮಿಸ್ಟರಿ: ಸಿಯಾಳ ಆ ಒಂದು ನಡೆ ಮೂಡಿಸಿತ್ತು ಅನುಮಾನ; ಅಂತ್ಯ ಕಂಡದ್ದು ದುರಂತದಲ್ಲಿ!