Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Metro broke down… ಕೈಕೊಟ್ಟ ಮೆಟ್ರೋ ಎಫೆಕ್ಟ್: ನಮ್ಮೂರಲ್ಲಿ ಹಂಗೇನಿಲ್ಲ… ಬಸ್ಸು, ಲಾರಿ ಏನೇ ಬರ್ಲಿ ಹತ್ಕೊಂಡ್ ಹೋಯ್ತಾರೋ… ವಿಡಿಯೋ ನೋಡಿ
ಕರ್ನಾಟಕದೇಶಪ್ರಮುಖ

Metro broke down… ಕೈಕೊಟ್ಟ ಮೆಟ್ರೋ ಎಫೆಕ್ಟ್: ನಮ್ಮೂರಲ್ಲಿ ಹಂಗೇನಿಲ್ಲ… ಬಸ್ಸು, ಲಾರಿ ಏನೇ ಬರ್ಲಿ ಹತ್ಕೊಂಡ್ ಹೋಯ್ತಾರೋ… ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರಿನ ನಮ್ಮ ಮೆಟ್ರೋದ ನೇರಳ ಮಾರ್ಗದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯು ಬೆಂಗಳೂರನ್ನು ವಿಶ್ವದಾದ್ಯಂತ ನಗೆಪಾಟಲಿಗೆ ಗುರಿಯಾಗಿಸಿದೆ.

ಬೆಂಗಳೂರಿನ ನೇರಳ ಮಾರ್ಗದಲ್ಲಿ ಮಂಗಳವಾರ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲು ಉಂಟಾಗಿದ್ದ ತಾಂತ್ರಿಕ ಸಮಸ್ಯೆಯು ವಿವಿಧ ಮೆಟ್ರೋ ನಿಲ್ದಾಣಗಳ ಮೇಲೆ ಪ್ರಭಾವ ಬೀರಿತ್ತು.

ಮಂಗಳವಾರ ಸಂಜೆ ಮೆಟ್ರೋ ಪ್ರಯಾಣಿಕರು ಪರದಾಡಿದ್ದು ಹಾಗೂ ಮೆಟ್ರೋ ಸಂಚಾರ ಸೇವೆಯಲ್ಲಿ ವ್ಯತ್ಯಾಸವಾದಾಗ ಪರ್ಯಾಯ ವ್ಯವಸ್ಥೆಗಳು ಇಲ್ಲದೆ ಇರುವುದು ರಿವೀಲ್ ಆಗಿದೆ. ಮಂಗಳವಾರ ಸಂಜೆ ಹಲವು ಮೆಟ್ರೋ ಪ್ರಯಾಣಿಕರು ಲಾರಿಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಸಿಲಿಕಾನ್ ಸಿಟಿ, ಐಟಿ ಸಿಟಿ ಎಂಬ ಖ್ಯಾತಿ ಗಳಿಸಿರುವ ಬೆಂಗಳೂರಿನಂತಹ ಮಹಾನಗರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಇರುವುದು ನಗೆಪಾಟಲಿಗೂ ಕಾರಣವಾಗಿದೆ. ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಸಹ ಟ್ವೀಟ್ ಮಾಡಿದ್ದಾರೆ.

ಲಾರಿಯಲ್ಲಿ ಪ್ರಯಾಣಿಸಿದ ಬೆಂಗಳೂರು ಪ್ರಯಾಣಿಕರು

ಇನ್ನು ಜೂನ್ 23ರ ಮಂಗಳವಾರ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಮೆಟ್ರೋದಿಂದ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡದೆ ಇರುವುದು ಭಾರೀ ಸಮಸ್ಯೆಗೆ ಕಾರಣವಾಯಿತು. ರಾತ್ರಿ ಇದೇ ಸಂದರ್ಭವನ್ನು ಬಳಸಿಕೊಂಡು ಆಟೋ ಚಾಲಕರು ಸಹ ದುಬಾರಿ ಮೊತ್ತವನ್ನು ನಿಗದಿ ಮಾಡಿದ್ದರು. ಹೀಗಾಗಿ, ಕೆಲವು ಪ್ರಯಾಣಿಕರು ಅನಿವಾರ್ಯವಾಗಿ ಲಾರಿಗಳಲ್ಲಿ ಪ್ರಯಾಣ ಮಾಡುವಂತಾಯಿತು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಫಸ್ಟ್‌ಕ್ಲಾಸ್ ವರ್ಡ್‌ಟೆಕ್ ಸಿಟಿ – ಥರ್ಡ್‌ಕ್ಲಾಸ್‌ ಸೇವೆ: ಸಂಸದ ತೇಜಸ್ವಿ ಸೂರ್ಯ ಟ್ವೀಟ್

ನಮ್ಮ ಮೆಟ್ರೋ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಹೆಸರಿಗೆ ಫಸ್ಟ್‌ಕ್ಲಾಸ್, ವರ್ಡ್‌ಟೆಕ್ ಸಿಟಿ ಆದರೆ ಥರ್ಡ್‌ಕ್ಲಾಸ್ ಸೇವೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನ ಕಥೆಯೂ ಅಷ್ಟೇ. ಮೆಟ್ರೋದಲ್ಲಿ ಅಡಚಣೆಗಳು ಆತಂಕಕಾರಿಯಾಗಿ ಆಗಾಗ್ಗೆ ಆಗುತ್ತಿವೆ. ಪ್ರತಿ ಬಾರಿ ಮೆಟ್ರೋ ವಿಫಲವಾದಾಗ, ಇಡೀ ನಗರವು ಅವ್ಯವಸ್ಥೆಗೆ ಸಿಲುಕುತ್ತದೆ. ಕ್ಯಾಬ್‌ಗಳು ಕಣ್ಮರೆಯಾಗುತ್ತವೆ. ಆಟೋ ಚಾಲಕರು ಹೇಳುವ ಜಾಗಕ್ಕೆ ಬರಲು ನಿರಾಕರಿಸುತ್ತಾರೆ. ಈ ಎಲ್ಲ ಸಮಸ್ಯೆಗಳ ನಡುವೆ ಸಾರ್ವಜನಿಕರು ಸಿಲುಕಿಕೊಂಡಿದ್ದಾರೆ. ನಿನ್ನೆ, ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಶ್ರಮಶೀಲ ವೃತ್ತಿಪರರು ಕೆಲಸ ಮುಗಿಸಿ ಮನೆಗೆ ಹೋಗಲು ಟ್ರಕ್‌ಗಳು ಮತ್ತು ಲಾರಿಗಳನ್ನು ಹತ್ತಬೇಕಾದ ಅನಿವಾರ್ಯತೆ ಎದುರಾಯ್ತು. ಅವರು ನಾಳೆ ಎಚ್ಚರಗೊಳ್ಳುತ್ತಾರೆ, ಕಚೇರಿಗೆ ಹಿಂತಿರುಗುತ್ತಾರೆ, ತೆರಿಗೆಗಳನ್ನು ಪಾವತಿಸುತ್ತಾರೆ ಮತ್ತು ಅದೇ ಮುರಿದ ವ್ಯವಸ್ಥೆಯನ್ನು ಮತ್ತೆ ಸಹಿಸಿಕೊಳ್ಳುತ್ತಾರೆ ಎಂದು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Bengalureans hop on to a lorry after metro train serves were disrupted last night due to technical glitches. Hundreds were stranded at inside metro stations and streets. The technical issue has been fixed at 5 am today. pic.twitter.com/WU2AIQaqfO

— Deepak Bopanna (@dpkBopanna) June 24, 2026

Love that melted in fire ಪ್ರೀತಿ ಚಿಗುರೊಡೆದ ಕಟ್ಟಡದಲ್ಲೇ ಸುಟ್ಟು ಬೂದಿಯಾಯ್ತು… ಕಮರಿಹೋಯ್ತು ನೀಲೇಶ್- ಅನಾಮಿಕಾ ಬದುಕು

Strict action against cross-voting ಅಡ್ಡಮತದಾನಕ್ಕೆ ಬಿಜೆಪಿ ವರಿಷ್ಠರು ಕೆಂಡಾಮಂಡಲ: ಪ್ರಶ್ನೆಗಳ ಸುರಿಮಳೆಗೆ ರಾಜ್ಯ ನಾಯಕರು ಕಂಗಾಲು

TAGGED:Metro broke down... They got into a lorry and went home.
Share This Article
Facebook Twitter Copy Link Print
Previous Article Love that melted in fire ಪ್ರೀತಿ ಚಿಗುರೊಡೆದ ಕಟ್ಟಡದಲ್ಲೇ ಸುಟ್ಟು ಬೂದಿಯಾಯ್ತು… ಕಮರಿಹೋಯ್ತು ನೀಲೇಶ್- ಅನಾಮಿಕಾ ಬದುಕು
Next Article Vijay Trisha ತಡವಾಗಿ ಶುಭಾಶಯ ಹೇಳಿದ ತ್ರಿಶಾ: ವಿಜಯ್ ಜತೆಗಿನ ಫೋಟೋದಿಂದ ವದಂತಿಗೆ ಬ್ರೇಕ್

Popular Posts

Kerala highcourt- CM DK ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸಬೇಕಾಗುತ್ತಾ? ಕೇರಳ ಹೈಕೋರ್ಟ್ ತೀರ್ಪಿನಿಂದ ಶುರುವಾಯ್ತು ಹೊಸ ಚರ್ಚೆ!

2 Min Read

TB Dam Spillways ಟಿಬಿ ಡ್ಯಾಂ ಸ್ಪಿಲ್ ವೇಗಳಿಗೆ ಮೂರೂ ರಾಜ್ಯಗಳ ಸಿಎಂಗಳಿಂದ ಚಾಲನೆ

1 Min Read

NCERT- EMERGENCY ಇದೇ ಮೊದಲ ಬಾರಿ NCERT ಪಠ್ಯದಲ್ಲಿ ತುರ್ತುಪರಿಸ್ಥಿತಿ ಪಾಠ

3 Min Read

Krishi Thapanda ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲೇ ಜೀವ ಕಳೆದುಕೊಂಡ ಆಪ್ತ ಗೆಳೆಯ!

1 Min Read

You Might Also Like

ದೇಶಪ್ರಮುಖ

Airplane confrontation ರನ್‌ವೇನಲ್ಲಿ ಏರ್ ಇಂಡಿಯಾ- ಇಂಡಿಗೋ ವಿಮಾನ ಮುಖಾಮುಖಿ: ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ

1 Min Read
ದೇಶಪ್ರಮುಖ

Indian Passport ಪಾಸ್‌ಪೋರ್ಟ್ ಇದ್ದಾಕ್ಷಣ ಭಾರತೀಯ ಪೌರತ್ವ ಸಾಬೀತಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

1 Min Read
ಪ್ರಮುಖವಿದೇಶ

Natural disaster ವೆನೆಜುವೆಲಾದಲ್ಲಿ ಭೀಕರ ಭೂಕಂಪ: ಕಾರಕಾಸ್ ಧ್ವಂಸ, 10 ಸಾವಿರಕ್ಕೂ ಹೆಚ್ಚು ಜನ ಸಾವು

2 Min Read
ಕರ್ನಾಟಕಪ್ರಮುಖ

Info News ರಾಜ್ಯದಲ್ಲಿ ಇವತ್ತು, ನಾಳೆ ಪಡಿತರ ವಿತರಣೆ ಸೇರಿ ಯಾವ್ಯಾವ ಸೇವೆ ಇರಲ್ಲ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?