newsics.com | ನ್ಯೂಸಿಕ್ಸ್
ತಮಿಳುನಾಡು ಮುಖ್ಯಮಂತ್ರಿ ಹಾಗೂ ಕಾಲಿವುಡ್ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ತ್ರಿಶಾ ಕೃಷ್ಣನ್ ಯಾವುದೇ ಪೋಸ್ಟ್ ಮಾಡದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ತ್ರಿಶಾ ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು.
ವಿಜಯ್ ಅವರೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸುತ್ತಿರುವ ಅಪರೂಪದ ಚಿತ್ರವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ತ್ರಿಶಾ, “ಎಲ್ಲದಕ್ಕೂ ಒಂದು ಮೌಲ್ಯ ತಂದುಕೊಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ವಿಜಯ್ ಕೇಕ್ ಕತ್ತರಿಸುತ್ತಿದ್ದರೆ, ತ್ರಿಶಾ ಪ್ರೀತಿಯಿಂದ ಅವರನ್ನು ನೋಡುತ್ತಿರುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ. ಪೋಸ್ಟ್ ವೈರಲ್ ಆಗಿದ್ದು, ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ.
ಕಳೆದ ಹಲವು ವರ್ಷಗಳಿಂದಲೂ ವಿಜಯ್ ಹುಟ್ಟುಹಬ್ಬದಂದು ತ್ರಿಶಾ ವಿಶೇಷ ಪೋಸ್ಟ್ ಹಂಚಿಕೊಳ್ಳುತ್ತಾ ಬಂದಿದ್ದಾರೆ. ‘ಗಿಲ್ಲಿ’, ‘ತಿರುಪಾಚಿ’, ‘ಆತಿ’, ‘ಕುರುವಿ’ ಹಾಗೂ ‘ಲಿಯೋ’ ಸಿನಿಮಾಗಳ ಮೂಲಕ ಈ ಜೋಡಿ ತೆರೆ ಮೇಲೆ ಸೂಪರ್ ಹಿಟ್ ಜೋಡಿಯಾಗಿ ಗುರುತಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಇಬ್ಬರ ವೈಯಕ್ತಿಕ ಸ್ನೇಹದ ಬಗ್ಗೆ ಹಲವು ಗಾಸಿಪ್‌ಗಳು ಹರಿದಾಡಿದ್ದರೂ, ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದ ಜೋಡಿ ಇದೀಗ ಈ ಪೋಸ್ಟ್ ಮೂಲಕ ತಮ್ಮ ಸ್ನೇಹ ಅಚಲವಾಗಿದೆ ಎಂಬುದನ್ನು ಪರೋಕ್ಷವಾಗಿ ಸಾಬೀತುಪಡಿಸಿದೆ.