Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Chethan Ahimsa: ನಟ ಚೇತನ್‌ ಅಹಿಂಸಾ ಹೊಸ ರಾಜಕೀಯ ಪಕ್ಷ ಘೋಷಣೆ! ಹೆಸರು ಏನು? ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ?
ಪ್ರಮುಖಮನರಂಜನೆ

Chethan Ahimsa: ನಟ ಚೇತನ್‌ ಅಹಿಂಸಾ ಹೊಸ ರಾಜಕೀಯ ಪಕ್ಷ ಘೋಷಣೆ! ಹೆಸರು ಏನು? ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ?

Share
2 Min Read
SHARE

https://newsics.com/ನ್ಯೂಸಿಕ್ಸ್

ದೇಶದಲ್ಲಿ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಪರ್ವವೇ ಶುರುವಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಥಳಪತಿ ವಿಜಯ್‌ TVK ಪಕ್ಷವನ್ನು ಕಟ್ಟಿ ರಾಜ್ಯ ಚುನಾವನೆಯಲ್ಲಿ ಗೆದ್ದು ಸಿಎಂ ಗದ್ದುಗೆ ಏರಿದ್ದಾರೆ. ಇದಾದ ಬಳಿಕ ಕರ್ನಾಟಕದಲ್ಲಿ ಸಹ ಯುವ ನಾಯಕ ಬೇಕೆಂಬ ಕೂಗು ಯುವ ಜನತೆಯಲ್ಲಿ ಕೇಳಿಬಂದಿತ್ತು.

ಆದರೆ ಇದೀಗ ಈ ವಿಚಾರವಾಗಿ ನಟ, ಚೇತನ್ ಅಹಿಂಸ (Chetan Ahimsa) ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಬಗ್ಗೆ ಹಲವು ವಿವರಗಳನ್ನು ಚೇತನ್ ಅಹಿಂಸ ಹಂಚಿಕೊಂಡಿದ್ದಾರೆ.

ಚೇತನ್ ಅಹಿಂಸಾ ಹೊಸ ರಾಜಕೀಯ ಪಕ್ಷ:

ಹೌದು, ತಮಿಳು ನಟ ವಿಜಯ್‌ ಬಳಿಕ ಇದೀಗ ಕನ್ನಡದ ನಟ ಚೇತನ್ ಅಹಿಂಸ (Chethan Ahimsa Political Party) ಸಹ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ದೇಶದಲ್ಲಿ ಈಗಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಂತ ಹಿತಾಸಕ್ತಿಗೆ ರಾಜಕೀಯ ಮಾಡುತ್ತಿದೆ. ಅಲ್ಲದೇ ಈಗಿನ ರಾಜಕಾರಣಿಗಳು ಹಾಗೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಚಿತ್ರ ದೂರಿದ್ದಾರೆ.

ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟುತ್ತೇವೆ:

ಬೆಳಗಾವಿ ಜಿಲ್ಲೆಯ ಕಾಗವಾಡ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್ ಅಹಿಂಸ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡದೆ ಬರೀ ಬೆಂಗಳೂರಿಗೆ ಆಧ್ಯತೆ ನೀಡುತ್ತಿದೆ. ಈ ಮೂಲಕ ಈ ಭಾಗದ ಜನರಿಗೆ, ಯುವಕರಿಗೆ ಅನ್ಯಾಯ ಮಾಡುತ್ತಿದೆ. ಜನರು ಇದರಿಂದ ರೋಸಿ ಹೋಗಿದ್ದಾರೆ. ಅದಕ್ಕಾಗಿ ರಾಜ್ಯದ ಎಲ್ಲ 224 ಕ್ಷೇತ್ರದಲ್ಲಿ ಓಡಾಡಿ ಸಂವಿಧಾನದ ಆಶಯ ಎತ್ತಿ ಹಿಡಿಯುವ ಪಕ್ಷವನ್ನು ಕಟ್ಟುತ್ತೇನೆ ಎಂದು ಹೇಳಿದ್ದಾರೆ.

ಇದರ ಭಾಗವಾಗಿ ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿಸಿಕೊಂಡು ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ. ಇದಕ್ಕಾಗಿಯೇ ನಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. 224 ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. ಅಲ್ಲದೇ ಮುಂದಿನ ವರ್ಷ ಅಂದರೆ 2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷದ ಹೆಸರು, ಪಕ್ಷದ ಚಿನ್ಹೆ, ಪಕ್ಷದ ಪ್ರಣಾಳಿಕೆ, ಪಕ್ಷದ ಧ್ವಜ, ರಾಜ್ಯ ಸಮಿತಿ ರಚನೆ ಸೇರಿದಂತೆ ಇನ್ನಿತರೆ ವಿಚಾರಗಳ ಘೋಷಣೆ ಮಾಡಲಿದ್ದೇವೆ ಎಂದು ಚೇತನ್ ಅಹಿಂಸ ಹೇಳಿದ್ದಾರೆ.

ಚೇತನ್‌ ಹೊಸ ಪಕ್ಷದ ಪ್ರಣಾಳಿಕೆ ಏನಿದೆ?

ಇನ್ನು, ಚೇತನ್‌ ಹೊಸ ಪಕ್ಷ ಕಟ್ಟುವುದಾಗಿ ಹೇಳುತ್ತಿದ್ದಂತೆ ಕರ್ನಾಟಕದ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಅಲ್ಲದೇ ಈ ಪಕ್ಷದ ಪ್ರಣಾಳಿಕೆ ಹೇಗಿರಬಹುದು ಎಂಬ ವಿಚಾರ ಸಹ ಸಾಕಷ್ಟು ಹರಿದಾಡುತ್ತಿದೆ. ಕೆಲ ಮೂಲಗಳ ವರದಿ ಪ್ರಕಾರ, ಸಮಾನ ಸಮಾಜ ಕಟ್ಟುವ ಉದ್ದೇಶದೊಂದಿಗೆ ಚೇತನ್ ತಮ್ಮ ಪಕ್ಷದ 10 ಪ್ರಮುಖ ಆಶಯ ಹೊಂದಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಲಿಂಗ ಸಮಾನತೆ, ಜಾತಿಯ ಸಮಾನತೆ, ಆರ್ಥಿಕ ಸಮಾನತೆ, ಭದ್ರತೆ, ಧರ್ಮ ನಿರಪೇಕ್ಷತೆ, ಪ್ರಾದೇಶಿಕತೆ ಮತ್ತು ಭಾಷೆ-ಸಾಂಸ್ಕೃತಿಕ ಸಮಾನತೆ, ಪರಿವರ್ತನಾ ಪರಿಸರವಾದ, ಭ್ರಷ್ಟಾಚಾರ ವಿರೋಧಿ, ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಜೊತೆಗೆ ರಾಜ್ಯದಲ್ಲಿನ ಪೊಲೀಸ್ ಮತ್ತು ಜೈಲು ಸುಧಾರಣೆ ಹಾಗೂ ತಂತ್ರಜ್ಞಾನದ ಸದ್ಬಳಕೆಗೆ ಒತ್ತು ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ

TAGGED:Chethan Ahimsa: Actor Chethan Ahimsa announces new political party! What is the name? What is in the manifesto?
Share This Article
Facebook Twitter Copy Link Print
Previous Article ನಿತ್ಯ ಬೀಟ್​ರೂಟ್​ ಜ್ಯೂಸ್​​​ ಕುಡಿಯೋದ್ರಿಂದ ಎಷ್ಟೆಲ್ಲ ಲಾಭವಿದೆ?
Next Article 25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ; ಆರ್ಥಿಕ ತಜ್ಞರು ಹೇಳಿದ್ದೇನು?

Popular Posts

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

AI ಬಳಸಿ ಸ್ಪರ್ಧಿಗಳನ್ನೇ ಅಳಿಸಿದ ಅಭ್ಯರ್ಥಿ! ಸರ್ಕಾರಿ ಉದ್ಯೋಗಕ್ಕಾಗಿ RPSC ಪೋರ್ಟಲ್ ಹ್ಯಾಕ್

1 Min Read

‘ಈಥಾ’ ಟೀಸರ್ ರಿಲೀಸ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಿಂಚು!

1 Min Read

ಮೊದಲು ಬೆಂಗಳೂರು ಇಷ್ಟವಾಗಿರಲಿಲ್ಲ, ಈಗ ಬಿಡಲು ಮನಸ್ಸೇ ಆಗುತ್ತಿಲ್ಲ; ಯುವತಿಯ ಭಾವನಾತ್ಮಕ ಪೋಸ್ಟ್ ವೈರಲ್

1 Min Read

You Might Also Like

ವೈರಲ್ಪ್ರಮುಖ

ರಸ್ತೆಯಲ್ಲೇ ಬೆತ್ತಲಾದ ಯುವತಿ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ನೋಡಿ

1 Min Read
Crimeಪ್ರಮುಖ

ಮದುವೆಗೆ ಎರಡು ದಿನ ಬಾಕಿ ಇರುವಾಗ ದುರಂತ: ವಧುವಿನ ತಂದೆ-ತಾಯಿ ಆತ್ಮಹತ್ಯೆ, ಕಿರುಕುಳ ಆರೋಪದಡಿ ವ್ಯಕ್ತಿ ಬಂಧನ

1 Min Read
ಪ್ರಮುಖಪ್ರಮುಖ

ಜುಲೈ 1ರಿಂದ ಬದಲಾಗಲಿವೆ 7 ಪ್ರಮುಖ ನಿಯಮಗಳು! LPG, ರೈಲ್ವೆ ಟಿಕೆಟ್‌ನಿಂದ ಆಧಾರ್‌ವರೆಗೆ ಹೊಸ ಅಪ್‌ಡೇಟ್‌

1 Min Read
filmಈ ದಿನಪ್ರಮುಖ

ಸೋಷಿಯಲ್ ಮೀಡಿಯಾ ಸುಳಿವಿನಿಂದ ಮತ್ತೆ ಸುದ್ದಿಯಾದ ವಿಜಯ್-ತ್ರಿಶಾ ಸಂಬಂಧ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?