Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ನಿತ್ಯ ಬೀಟ್​ರೂಟ್​ ಜ್ಯೂಸ್​​​ ಕುಡಿಯೋದ್ರಿಂದ ಎಷ್ಟೆಲ್ಲ ಲಾಭವಿದೆ?
ಲೈಫ್‌ಸ್ಟೈಲ್

ನಿತ್ಯ ಬೀಟ್​ರೂಟ್​ ಜ್ಯೂಸ್​​​ ಕುಡಿಯೋದ್ರಿಂದ ಎಷ್ಟೆಲ್ಲ ಲಾಭವಿದೆ?

Share
2 Min Read
SHARE

newsics.com/ನ್ಯೂಸಿಕ್ಸ್

ಬೀಟ್​ರೂಟ್​ ನೆಲದಡಿ ಬೆಳೆಯುವ ಸಿಹಿ ಗಡ್ಡಯಾಗಿದ್ದು, ಸಾಮಾನ್ಯವಾಗಿ ಇದನ್ನು ಹಲವರು ದ್ವೇಷಿಸುತ್ತಿದ್ದಾರೆ. ರಕ್ತದ ಮಟ್ಟ ಹೆಚ್ಚಾಗುತ್ತದೆ ಎನ್ನುವ ಕಾಳಜಿವುಳ್ಳ ಕೆಲವರು ಮಾತ್ರ ಇದನ್ನು ಪಲ್ಯದಲ್ಲೋ, ಹಸಿಯಾಗಿಯೋ ತಿನ್ನಲು ಪ್ರಯತ್ನಿಸುತ್ತಾರೆ.

ಇದನ್ನು ಕತ್ತರಿಸಿದಾಗ ಕೈಯಲ್ಲಾಗುವ ಮಾರ್ಕ್​ ಹಾಗೂ ರಕ್ತದ ಬಣ್ಣ ಕಂಡು ಕೈ ಸೌಂದರ್ಯ ಹಾಳಾಗುತ್ತದೆ ಎಂದು ಇದರ ಬಳಕೆಗೆ ಹಿಂದೇಟು ಹಾಕೋರು ಇದ್ದಾರೆ. ಆದರೆ, ಬೇಡ ಎಂದು ಮೂಗುಮುರಿಯುವ ಮುನ್ನ ಗಮನಿಸಿ..ನಿತ್ಯ ಬೀಟ್​ರೂಟ್​ ಜ್ಯೂಸ್​ ಕುಡಿಯುವುದರಿಂದ ಆರೋಗ್ಯಕ್ಕೆ ನಾನಾ ವಿಧದಲ್ಲಿ ಲಾಭವಿದೆ.
ಹೌದು ಬೀಟ್​ರೂಟ್​ನಲ್ಲಿ ವಿಟಮಿನ್​, ಖನಿಜಾಂಶ, ಆಂಟಿ ಆಕ್ಸಿಡೆಂಟ್​, ನೈಸರ್ಗಿಕ ನೈಟ್ರೇಟ್​​​ಗಳಿಂದ ಸಮೃದ್ಧವಾಗಿದೆ. ನಿತ್ಯ ಇದನ್ನು ಬೀಟ್​ರೂಟ್​ ಜ್ಯೂಸ್​ ಅಥವಾ ಕಚ್ಚಾ ರೂಪದಲ್ಲಿ ಬೀಟ್​ರೂಟ್​ ಸೇವನೆ ಮಾಡೋದ್ರಿಂದ ದೇಹದ ರಕ್ತದ ಮಟ್ಟ ಹೆಚ್ಚಾಗಲು, ಚರ್ಮದ ಕಾಂತಿ ವೃದ್ಧಿ, ತೂಕ ಕಾಪಾಡಿಕೊಳ್ಳಲು, ಯಕೃತ್ತಿನ ಸಮಸ್ಯೆ ಸೇರಿದಂತೆ ನಾನಾ ವಿಧದಲ್ಲಿ ದೇಹಕ್ಕೆ ಆರೋಗ್ಯಕ. ಹಾಗಾದ್ರೆ ಇದನ್ನು ಬಳಕೆ ಮಾಡೋದು ಹೇಗೆ..ಯಾವ ರೀತಿ ಆರೋಗ್ಯಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ನೋಡೋಣ.
ರಕ್ತಹೀನತೆ ತಡೆಗಟ್ಟುತ್ತೆ

ಬೀಟ್​ರೂಟ್​ನಲ್ಲಿ ಕಬ್ಬಿಣಾಂಶ, ನೈಟ್ರೇಟ್​, ಪೋಲೈಟ್​ ಸಮೃದ್ಧವಾಗಿದೆ. ನಿತ್ಯ ಇದನ್ನು ಜ್ಯೂಸ್​ ರೂಪದಲ್ಲಿ ಉಪ್ಪು, ಸಿಹಿ ಯಾವುದು ಬೆರೆಸದೆ ಸೇವನೆ ಮಾಡಿದರೆ, ಹಲವರಲ್ಲಿ ಕಾಡುವ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಎನ್ನುವುದು ಹಲವು ಅಧ್ಯಯನದ ವರದಿಗಳಿಂದ ತಿಳಿದುಬಂದಿದೆ.

ರಕ್ತದೊತ್ತಡಕ್ಕೂ ಮದ್ದು

ಬೀಟ್​ರೂಟ್​ನಲ್ಲಿರುವ ನೈಸರ್ಗಿಕ ನೈಟ್ರೇಟ್​ ಅಂಶವವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹಕ್ಕೆ ಸೇರಿವ ನೈಟ್ರೇಟ್​ ನೈಟ್ರಿಕ್​ ಆಸಿಡ್​ ಆಗಿ ಪರಿವರ್ತನೆಗೊಂಡು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ರಕ್ತಸಂಚಾರ ಸುಗಮಗೊಂಡು ಅಧಿಕವಾಗುವ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಯಕೃತ್ತಿನ ಆರೋಗ್ಯ ಸ್ನೇಹಿ

ಯಕೃತ್ತಿನಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ಬೀಟ್​ರೂಟ್​ ಸಹಾಯ ಮಾಡುತ್ತದೆ. ಬೀಟ್​ರೂಟ್​ನಲ್ಲಿರುವ ಬೀಟಾಲೈನ್ ಎನ್ನುವ ಆಂಟಿ ಆಕ್ಸಿಡೆಂಟ್​ ಅಂಶವು ಲಿವರ್​ ಕಾರ್ಯಕ್ಷಮತೆಯನ್ನು ಸುಧಾರಿಸಿ, ಅನಗತ್ಯವಾಗಿ ಸಂಗ್ರಹವಾಗುವ ಕೊಬ್ಬಿನ ಅಂಶವನ್ನು ಹೊರದೂಡುತ್ತದೆ.
ಚರ್ಮಕಾಂತಿ ಹೆಚ್ಚಳ

ಬೀಟ್​ರೂಟ್​ನಲ್ಲಿರುವ ಆಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್​​ ಸಿ ಅಂಶ ಚರ್ಮದ ಕೋಶಗಳನ್ನು ರಕ್ಷಿಸುತ್ತದೆ. ಇವು ದೇಹದಲ್ಲಿನ ರಕ್ತವನ್ನು ಆಗಾಗ್ಗೆ ಶುದ್ಧೀಕರಿಸುವ ಮೂಲಕ ಮೊಡವೆ ಹಾಗೂ ಕಲೆಗಳು ಕಡಿಮೆಯಾಗುವಂತೆ ಮಾಡಿ ನೈಸರ್ಗಿಕವಾಗಿ ಕಾಂತಿಯನ್ನು ನೀಡಲು ಸಹಾಯ ಮಾಡುತ್ತದೆ.
ಬೀಟ್​ರೂಟ್​ ಜ್ಯೂಸ್ ಸೇವಿಸುವಾಗ ಇದರ ಜೊತೆಗೆ ಸೇಬು, ನಿಂಬು ಹುಳಿ, ಕ್ಯಾರೆಟ್​​, ಶುಂಠಿಯನ್ನು ಸೇರಿಸಿ ಸೇವಿಸಬಹುದು. ಈ ಪದಾರ್ಥಗಳಲ್ಲಿರುವ ನೈಸರ್ಗಿಕ ಅಂಶವು ದೇಹಕ್ಕೆ ಸೇರಿ, ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳುತ್ತದೆ.

ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ

 

TAGGED:Do you know how many benefits there are from drinking beetroot juice daily?..Beetroot Juice
Share This Article
Facebook Twitter Copy Link Print
Previous Article ನಿಮ್ಮ ಕಿಚನ್ ಸಿಂಕ್‌ನಿಂದ ಬ್ಯಾಡ್ ಸ್ಮೆಲ್ ಬರ್ತಿದ್ಯಾ? ಈ ಸೀಕ್ರೆಟ್ ಟ್ರಿಕ್ ಬಳಸಿ
Next Article Chethan Ahimsa: ನಟ ಚೇತನ್‌ ಅಹಿಂಸಾ ಹೊಸ ರಾಜಕೀಯ ಪಕ್ಷ ಘೋಷಣೆ! ಹೆಸರು ಏನು? ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ?

Popular Posts

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

AI ಬಳಸಿ ಸ್ಪರ್ಧಿಗಳನ್ನೇ ಅಳಿಸಿದ ಅಭ್ಯರ್ಥಿ! ಸರ್ಕಾರಿ ಉದ್ಯೋಗಕ್ಕಾಗಿ RPSC ಪೋರ್ಟಲ್ ಹ್ಯಾಕ್

1 Min Read

‘ಈಥಾ’ ಟೀಸರ್ ರಿಲೀಸ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಿಂಚು!

1 Min Read

ಮೊದಲು ಬೆಂಗಳೂರು ಇಷ್ಟವಾಗಿರಲಿಲ್ಲ, ಈಗ ಬಿಡಲು ಮನಸ್ಸೇ ಆಗುತ್ತಿಲ್ಲ; ಯುವತಿಯ ಭಾವನಾತ್ಮಕ ಪೋಸ್ಟ್ ವೈರಲ್

1 Min Read

You Might Also Like

Uncategorizedಲೈಫ್‌ಸ್ಟೈಲ್

50 ಮೊಟ್ಟೆ ತಿನ್ನುವ ಚಾಲೆಂಜ್‌ ಸ್ವೀಕರಿಸಿದ್ದ ವ್ಯಕ್ತಿ ಸಾವು! 42ನೇ ಮೊಟ್ಟೆ ತಿಂದ ಬಳಿಕ ಕುಸಿದು ಬಿದ್ದು ದುರಂತ

1 Min Read
ಲೈಫ್‌ಸ್ಟೈಲ್

ಚಹಾಕ್ಕೆ ಈ 3 ಪದಾರ್ಥಗಳನ್ನ ಸೇರಿಸೋದ್ರಿಂದ ಅದ್ಭುತ ಸುವಾಸನೆ, ರುಚಿ ಸಿಗುತ್ತದೆ

3 Min Read
ಲೈಫ್‌ಸ್ಟೈಲ್

ನಿಮ್ಮ ಕಿಚನ್ ಸಿಂಕ್‌ನಿಂದ ಬ್ಯಾಡ್ ಸ್ಮೆಲ್ ಬರ್ತಿದ್ಯಾ? ಈ ಸೀಕ್ರೆಟ್ ಟ್ರಿಕ್ ಬಳಸಿ

2 Min Read
ಲೈಫ್‌ಸ್ಟೈಲ್

ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?