newsics.com
ನವದೆಹಲಿ: ಭಾರತದ ಈ ಗ್ರಾಮದ ಪುರುಷರಿಂದ ಗರ್ಭಿಣಿಯಾಗಲು ವಿದೇಶದಿಂದ ಮಹಿಳೆಯರು ಬರ್ತಾರೆ. ಹೌದು, ಜಮ್ಮು ಕಾಶ್ಮೀರದ ಆರ್ಯನ್ ವ್ಯಾಲಿ ಎಂಬ ಹೆಸರಿನ ಗ್ರಾಮಕ್ಕೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲು ಬರುತ್ತಾರೆ. ಇಲ್ಲಿಯ ಪುರುಷರ ಜೊತೆ ಕೆಲ ಸಮಯ ಇರೋ ಮಹಿಳೆಯರು ಗರ್ಭಿಣಿಯಾಗುತ್ತಲೇ ತಮ್ಮ ದೇಶಕ್ಕೆ ಹೊರಡುತ್ತಾರೆ. ಇದೀಗ ಇದು ಒಂದು ರೀತಿಯ ವ್ಯವಹಾರವಾಗಿದೆ. ಯುರೋಪ್ ಭಾಗದ ಮಹಿಳೆಯರೇ ಹೆಚ್ಚು ಆರ್ಯನ್ ವ್ಯಾಲಿಗೆ ಬರುತ್ತಾರೆ.
ಲಡಾಕ್‌ನ ಆರ್ಯ ವ್ಯಾಲಿ ಎಂಬಲ್ಲಿ ಬ್ರೋಕಾಪ್ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದಾರೆ. ದಿ ಗ್ರೇಟ್ ಅಲೆಕ್ಸಾಂಡರ್ ರಾಜ ಭಾರತದಿಂದ ಹಿಂದಿರುಗಿ ಹೋಗುವಾಗ ಒಂದು ಸೇನಾ ತುಕಡಿ ಇಲ್ಲಿಯೇ ಉಳಿಯುತ್ತದೆ. ಇವರನ್ನು ಅಲೆಕ್ಸಾಂಡರ್ ವಂಶಸ್ಥರು ಮತ್ತು ಮೂಲ ಆರ್ಯನ್ನರು ಎಂದು ಹೇಳಲಾಗುತ್ತದೆ. ಹಾಗಾಗಿ ಯುರೋಪ್‌ಗೂ ಮತ್ತು ಆರ್ಯನ್ ವ್ಯಾಲಿಗೂ ನಿಕಟ ಸಂಪರ್ಕವಿದೆ.
ವಿದೇಶಿ ಮಹಿಳೆಯರು ತಮಗೆ ಹುಟ್ಟುವ ಮಗು ಅಲೆಕ್ಸಾಂಡರ್ ಸೇನೆಯಲ್ಲಿದ್ದ ಬಲಿಷ್ಠ ಸೈನಿಕರಂತೆ ಆಗಬೇಕು. ಸೈನಿಕರ ಹಾಗೆಯೇ ಸದೃಢ ಮೈಕಟ್ಟು, ನೀಲಿ ಕಣ್ಣುಗಳನ್ನು ಹೊಂದಬೇಕೆಂದು ಬಯಸುತ್ತಾರೆ. ಈ ಕಾರಣಕ್ಕಾಗಿ ವಿದೇಶದಿಂದ ಆರ್ಯನ್ ವ್ಯಾಲಿಗೆ ಬರುತ್ತಾರೆ. ಕೆಲ ವರ್ಷಗಳಿಂದ ಆರ್ಯನ್ ವ್ಯಾಲಿ ಪ್ರದೇಶದ ಬಗ್ಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಇದರಿಂದಲೂ ಇಲ್ಲಿಗೆ ಭೇಟಿ ನೀಡುವ ವಿದೇಶಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.
ಇಲ್ಲಿಗೆ ಬರುವ ವಿದೇಶಿ ಮಹಿಳೆಯರು ತಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಲು ಪುರುಷರಿಗೆ ಭಾರೀ ಮೊತ್ತದ ಹಣ ನೀಡುತ್ತಾರೆ. ತಾವು ಗರ್ಭಿಣಿ ಎಂದು ಖಚಿತವಾಗುವವರೆಗೂ ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಗರ್ಭಿಣಿಯಾಗಿರೋದು ಧೃಢವಾಗುತ್ತಿದ್ದಂತೆ ಇಲ್ಲಿಂದ ಹೊರಡುತ್ತಾರೆ.
ಬ್ರೋಕಾಪ್ ಬುಡಕಟ್ಟು ಸಮುದಾಯದ ಜನರು ತಮ್ಮನ್ನು ಆರ್ಯರ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಇಲ್ಲಿಯ ಜನರ ಎತ್ತರ, ದೈಹಿಕ ರಚನೆ, ಕೆಲವು ಕಥೆಗಳು ಮತ್ತು ಜಾನಪದ ಕಥೆಗಳ ಆಧಾರದ ಮೇಲೆ ಅವರು ಶುದ್ಧ ಆರ್ಯರು ಎಂದು ಹೇಳಿಕೊಳ್ಳುತ್ತಾರೆ. ಪ್ರೆಗ್ನೆನ್ಸಿ ಟೂರಿಸಂ ಎಂಬುದು ಕೇವಲ ಕಾಲ್ಪನಿಕ ಕಥೆ ಎಂದು ತಜ್ಞರು ಹೇಳುತ್ತಾರೆ.