newsics.com / ನ್ಯೂಸಿಕ್ಸ್
ಪ್ರಾಣಿಗಳು ತಮ್ಮ ಮಾಲೀಕರೊಂದಿಗೆ ಬೆಳೆಸಿಕೊಳ್ಳುವ ಬಾಂಧವ್ಯ ಎಷ್ಟರ ಮಟ್ಟಿಗೆ ಗಾಢವಾಗಿರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಮತ್ತೊಂದು ಉದಾಹರಣೆಯಾಗಿದೆ. ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ತನ್ನ ಮಾಲಕಿಯನ್ನೇ ಆನೆಯೊಂದು ಅನುಕರಿಸಿರುವ ಮನಮುಟ್ಟುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
‘ಇಂಡಿಯಾ ಟ್ರೆಂಡ್ಸ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮಹಿಳೆಯೊಬ್ಬರು ಕಾಲಿನ ನೋವಿನಿಂದ ಕುಂಟುತ್ತಾ ನಡೆದು ಹೋಗುತ್ತಿರುವುದು ಕಾಣಿಸುತ್ತದೆ. ಅವರ ಹಿಂದೆ ಬರುತ್ತಿದ್ದ ಆನೆ ಕೂಡ ಅದೇ ರೀತಿ ಕುಂಟುತ್ತಾ ನಡೆದು ಎಲ್ಲರನ್ನು ಅಚ್ಚರಿಗೊಳಿಸಿದೆ.
ವಿಡಿಯೋದಲ್ಲಿ ಮತ್ತೊಂದು ವಿಶೇಷ ಕ್ಷಣವೂ ಸೆರೆಹಿಡಿಯಲಾಗಿದೆ. ಮಹಿಳೆ ನಿಧಾನವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದಂತೆ, ಆನೆಯೂ ಅದೇ ರೀತಿ ಕುಳಿತುಕೊಂಡು ತನ್ನ ಮಾಲಕಿಯನ್ನು ಅನುಕರಿಸುತ್ತದೆ. ಈ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ವೈರಲ್ ಆಗಿರುವ ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ಹರಿದುಬಂದಿವೆ. “ಇದನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ”, “ಎಷ್ಟು ಮುದ್ದಾಗಿದೆ!”, “ನಿಜವಾದ ಆಕ್ಟಿಂಗ್ ಕಿಂಗ್ ಇದೇ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಆನೆಯ ಬುದ್ಧಿವಂತಿಕೆ ಮತ್ತು ಮಾಲಕಿಯ ಮೇಲಿನ ಅದರ ಆತ್ಮೀಯತೆಯನ್ನು ಈ ವಿಡಿಯೋ ಸುಂದರವಾಗಿ ಬಿಂಬಿಸಿದ್ದು, ಪ್ರಾಣಿ ಪ್ರೇಮಿಗಳ ಹೃದಯ ಗೆದ್ದಿದೆ.
https://www.instagram.com/reel/DZt9JvHu6Pc/?igsh=Z244YXFkZ2RpMDI5
https://www.instagram.com/reel/DZt9JvHu6Pc/?igsh=Z244YXFkZ2RpMDI5
ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ, ಸಂಸದ ಕಿಶನ್? ವೈರಲ್ ವಿಡಿಯೋ ನೋಡಿ