Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಧರ್ಮಸ್ಥಳ ಬುರುಡೆ ಪ್ರಕರಣ: ತಮ್ಮ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?
ಪ್ರಮುಖಮನರಂಜನೆ

ಧರ್ಮಸ್ಥಳ ಬುರುಡೆ ಪ್ರಕರಣ: ತಮ್ಮ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?

Share
2 Min Read
ವರ್ಸೈಲ್ಸ್‌ನಲ್ಲಿ ಇರಾನ್ - ಅಮೆರಿಕ ಒಪ್ಪಂದಕ್ಕೆ ಟ್ರಂಪ್ ಸಹಿ ; ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಮಹತ್ವದ ಹೆಜ್ಜೆ
SHARE

newsics.com/ನ್ಯೂಸಿಕ್ಸ್

ಭಾರತದಲ್ಲಿ ಮಾರಿಕೊಂಡವರು ಮತ್ತು ಮಾರಿಕೊಳ್ಳದವರು ಇದ್ದಾರೆ ಎಂಬುದು ಜನರಿಗೂ ಗೊತ್ತಿದೆ. ನಿಮಗೆ ಹೇಳಿದ್ದಲ್ಲ, ಮಾರಿಕೊಂಡವರಿಗೆ ಹೇಳಿದ್ದು. ನಾನು ಬಳಸಿದ ಪದಕ್ಕೆ ಬದ್ಧ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.

ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಪ್ರಕಾಶ್ ರಾಜ್ ಸುದ್ದಿಗೋಷ್ಠಿ ಕರೆದಿದ್ದರು.

ಬುಧವಾರ ಬೆಳಿಗ್ಗೆ ಸುದ್ದಿಗೋಷ್ಠಿ ಆರಂಭಿಸುತ್ತಿದ್ದಂತೆ ಕೆಲವರು, ‘ಮಾರಿಕೊಂಡವರು ಯಾರು ಎಂಬುದನ್ನು ಹೇಳಬೇಕು. ಇಲ್ಲದೇ ಇದ್ದರೆ ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು. ಒಂದೂವರೆ ತಾಸಿಗೂಹೆಚ್ಚು ಸಮಯ ಇದೇ ವಿಷಯದಲ್ಲಿ ವಾಗ್ವಾದ ನಡೆಯಿತು.

‘ಮಾರಿಕೊಂಡವರು, ಗೋದಿ ಮೀಡಿಯಾ ಎಂಬುದೆಲ್ಲ ಇದೆ. ನಿಮಗೆ ನೀಡಿದ ಅಧಿಕೃತ ಆಹ್ವಾನದಲ್ಲಿ ಆ ಶಬ್ದ ಬಳಸಿಲ್ಲ. ನನ್ನ ವೈಯಕ್ತಿಕ ಜಾಲತಾಣ ಖಾತೆಯಲ್ಲಿ ಮಾರಿಕೊಂಡವರನ್ನೂ ಆಹ್ವಾನಿಸಿದ್ದೇನೆ. ಅಧಿಕೃತ ಆಹ್ವಾನ ನೋಡಿ ನೀವು ಬಂದಿದ್ದೀರಲ್ಲವೇ? ಏನೇ ಪ್ರಶ್ನೆ ಕೇಳಿ, ಯಾವುದೇ ಶಬ್ದ ಬಳಸಿ ಕೆರಳಿಸಲು ಪ್ರಯತ್ನಿಸಿದರೂ ನನ್ನನ್ನು ರೊಚ್ಚಿಗೆಬ್ಬಿಸಲು ಸಾಧ್ಯವಿಲ್ಲ’ ಎಂದ ಪ್ರಕಾಶ್‌ರಾಜ್‌ ಕಣ್ಣರಳಿಸಿ, ಚಪ್ಪಾಳೆ ತಟ್ಟಿ, ಆಗಾಗ ಕೈಕಟ್ಟಿಕೊಂಡು ನಗುವ ವಿವಿಧ ಭಾವ ಭಂಗಿಗಳೊಂದಿಗೆ ಆಗಾಗ ಮೌನ ವಹಿಸುತ್ತಲೇ ಉತ್ತರ ನೀಡಿದರು.

ಇಷ್ಟು ಹೊತ್ತು ಸಮಾಧಾನಕರವಾಗಿಯೇ ಹೇಳಿದ್ದೇನೆ. ನನ್ನ ಅಭಿಪ್ರಾಯವನ್ನು ನೀವು ಪ್ರಕಟ/ಬಿತ್ತರಿಸದೇ ಇದ್ದರೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದೂ ಅವರು ಹೇಳಿದರು.

‘ತಾಕತ್ತಿದ್ದರೆ, ಮರ್ಯಾದೆ ಇದ್ದರೆ ಉತ್ತರ ಹೇಳಿ’ ಎಂದು ಕೆಲವರು ಒತ್ತಾಯಿಸದಾಗಲೂ, ‘ನಾನು ಅಧಿಕೃತವಾಗಿ ನೀಡಿದ ಆಹ್ವಾನದಿಂದಾಗಿ ಬಂದಿದ್ದೀರಿ. ಮತ್ಯಾಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.

‘ಮಾರಿಕೊಂಡವರು ಯಾರು ಎಂಬುದು ನನಗೆ ಗೊತ್ತಿದೆ. ನಿಮಗಲ್ಲ ಹೇಳಿದ್ದು. ಮಾರಿಕೊಂಡವರಿಗೆ ಹೇಳಿದ್ದು’ ಎಂದ ಪ್ರಕಾಶ್ ರಾಜ್, ‘ಕ್ಷಮೆ ಕೇಳುವುದಿಲ್ಲ’ ಎಂದರು.

‘ಇಂಥವರೆಲ್ಲ ಮಾರಿಕೊಂಡವರು ಎಂದು ಸ್ಪಷ್ಟವಾಗಿ ಹೇಳಿ’ ಎಂದು ಒತ್ತಾಯಿಸಿದಾಗ, ‘ಅವರಿಗೂ ಹೆಂಡತಿ ಮಕ್ಕಳಿದ್ದಾರೆ. ಅವರು ಬದುಕಿಕೊಳ್ಳಲಿ ಎಂಬ ಕಾಳಜಿಯಿಂದ ಹೇಳುವುದಿಲ್ಲ. ಮಾರಿಕೊಂಡವರು ಯಾರು? ಮಾರಿಕೊಳ್ಳದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಎಸ್‌ಐಟಿ ರಚಿಸುವಂತೆ ನೀವು- ನಾವು ಸೇರಿ ಮುಖ್ಯಮಂತ್ರಿಗೆ, ನ್ಯಾಯಾಲಯಕ್ಕೆ ಪತ್ರ ಬರೆಯೋಣ’ ಎಂದು ಹೇಳಿದರು.

ಕರ್ನಾಟಕದ ಮಾಧ್ಯಮದ ಬಗ್ಗೆ ಅಲ್ಲ, ಕರ್ನಾಟಕದ ಮಾಧ್ಯಮವನ್ನು ಹಾಳು ಮಾಡುತ್ತಿರುವ ಕೆಲವು ಮಾರಿಕೊಂಡವರ ಬಗ್ಗೆ ಅಷ್ಟೇ ಹೇಳಿದ್ದೇನೆ’ ಎಂದು ಹೇಳಿದ ಪ್ರಕಾಶ್‌ ರಾಜ್‌, ದೇವನೂರ ಮಹಾದೇವರ ಅವರ ‘ಮಾರಿಕೊಂಡವರು’ ಕಥೆಯನ್ನು ಓದಿ ಗೊತ್ತಾಗುತ್ತದೆ ಎಂದು ತೇಲಿಸಿದರು. ‘ಮಾರಿಕೊಂಡವರು ಯಾರು ಎಂಬುದು ನಿಮಗೇ ಗೊತ್ತಿದೆ. ಆದರೂ ಕೇಳುತ್ತೀರಿ’ ಎಂದು ಕುಟುಕಿದರು.

‘ಕ್ಷಮೆ ಕೇಳಲು ಸಾವರ್ಕರ್ ಅಲ್ಲ’

‘ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ. ಸುದ್ದಿಗೋಷ್ಠಿ ಕರೆಯದಿರಲು ನಾನು ಪ್ರಧಾನಿಯೂ ಅಲ್ಲ’ ಎಂದು ಪ್ರಕಾಶ್ ರಾಜ್ ಹೇಳಿದರು. ‘ಮಾರಿಕೊಂಡವರು’ ಪದಕ್ಕೆ ಕ್ಷಮೆಯಾಚಿಸಬೇಕು ಎಂದು ಕೆಲವರು ಒತ್ತಾಯಿಸಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

‘ನಾನು ಉತ್ತರವನ್ನು ಹೇಳಿಯಾಗಿದೆ. ನೀವು ಬಯಸುವ ಉತ್ತರವನ್ನು ನಾನು ಹೇಳಲು ಸಾಧ್ಯವಿಲ್ಲ. ನಾನು ಏನು ಹೇಳಬೇಕೋ ಅದನ್ನೇ ಹೇಳುತ್ತೇನೆ. ಅದು ಸಮಂಜಸವಲ್ಲ ಎಂದು ನಿಮಗೆ ಅನ್ನಿಸಿದರೆ ಹಾಗೇ ಬರೆದುಬಿಡಿ. ಮಾರಿಕೊಂಡ ಮಾಧ್ಯಮ ಎಂಬುದು ಲೇವಡಿಯಲ್ಲ. ನನ್ನ ನೋವು’ ಎಂದರು.

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

TAGGED:Dharmasthala Burude case: Actor Prakash Raj holds press conference on allegations against him
Share This Article
Facebook Twitter Copy Link Print
Previous Article ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?
Next Article ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಂಫರ್ ಗಿಫ್ಟ್: ಪ್ರತಿ ತಿಂಗಳು ಖಾತೆಗೆ ಸೇರಲಿದೆ ₹7,000 ಸ್ಟೈಫಂಡ್!

Popular Posts

Father’s Day 2026: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ 7 ಸ್ಟಾರ್ ನಟರು

2 Min Read

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

You Might Also Like

ಪ್ರಮುಖಮನರಂಜನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read
ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?