Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

Share
2 Min Read
SHARE

newsics.com/ನ್ಯೂಸಿಕ್ಸ್

ಆಫೀಸ್‌ನಲ್ಲಿ ಕೆಲಸ ಜಾಸ್ತಿ ಇದ್ದಿದ್ದರಿಂದ ಕಾರ್ತಿಕ್ ಮನೆಗೆ ಹೊರಡುವಾಗ ರಾತ್ರಿ ಬರೋಬ್ಬರಿ 1:30 ಗಂಟೆಯಾಗಿತ್ತು. ತನ್ನ ಬೈಕ್‌ನಲ್ಲಿ ಬೆಂಗಳೂರಿನ ಹೊರವಲಯದ ಕತ್ತಲೆ ತುಂಬಿದ ನಿರ್ಜನ ಹೆದ್ದಾರಿಯಲ್ಲಿ ಕಾರ್ತಿಕ್ ಹೋಗುತ್ತಿದ್ದಾಗ  ರಸ್ತೆಯ ಮಧ್ಯೆ ಸಡನ್ ಆಗಿ ಒಂದು ಸಣ್ಣ ಮಗು ಪ್ರತ್ಯಕ್ಷವಾಯಿತು. ಆ ಒಂಟಿ ಮಗುವಿನ ಹಿಂದೆ ಅಡಗಿದ್ದ ಆ ಕರಾಳ ಅತೀಂದ್ರಿಯ ಘಟನೆ.

ಮಧ್ಯರಾತ್ರಿಯ ಹೊತ್ತಿನಲ್ಲಿ ಆ ಪುಟ್ಟ ಮಗು ಒಂಟಿಯಾಗಿ ಅಲ್ಲಿ ಏನು ಮಾಡುತ್ತಿದೆ ಅಂತ ಕಾರ್ತಿಕ್‌ಗೆ ಒಂದು ಕ್ಷಣ ಭಾರಿ ಗಾಬರಿಯಾಯಿತು. ತಕ್ಷಣವೇ ಆತ ಮಗುವಿನ ಹತ್ತಿರ ಹೋಗಿ ಬೈಕ್ ನಿಲ್ಲಿಸಿದ.

 

ಬೈಕ್‌ನಿಂದ ಇಳಿದು ಕಾರ್ತಿಕ್ ಆ ಮಗುವಿನ ಹತ್ತಿರ ಹೆಜ್ಜೆ ಇಟ್ಟ. ಮಗು ಕೇವಲ ನೆಲವನ್ನೇ ದಿಟ್ಟಿಸಿ ನೋಡುತ್ತಾ ನಿಂತಿತ್ತು. ಕಾರ್ತಿಕ್ ಮರುಕದಿಂದ, ‘ಏನಮ್ಮ ಇಲ್ಲಿ ಏನ್ ಮಾಡ್ತಿದ್ದೀಯಾ? ನಿಮ್ಮ ಮನೆ ಎಲ್ಲಿದೆ?’ ಅಂತ ಪ್ರೀತಿಯಿಂದಲೇ ಕೇಳಿದ. ಆದ್ರೆ ಆ ಮಗು ಮಾತ್ರ ಯಾವುದೇ ಉತ್ತರ ಕೊಡದೆ ಸದ್ದಿಲ್ಲದೆ ಹಾಗೆಯೇ ನಿಂತಿತ್ತು.

ಭುಜ ಮುಟ್ಟಿ, ‘ಮಗುವೇ ಮಾತಾಡು…’ ಅಂದ. ಆತ ಭುಜ ಮುಟ್ಟಿದ ತಕ್ಷಣ ಆ ಮಗು ನಿಧಾನವಾಗಿ ತನ್ನ ತಲೆಯನ್ನು ಮೇಲಕ್ಕೆ ಎತ್ತಿತು. ಆ ಕ್ಷಣ ಕಾರ್ತಿಕ್ ಕಣ್ಣಾರೆ ಕಂಡ ಆ ದೃಶ್ಯಕ್ಕೆ ಆತನ ಹೃದಯದ ಬಡಿತವೇ ಒಂದು ಸೆಕೆಂಡ್ ನಿಂತು ಹೋದಂತಾಯಿತು

ಆ ಮಗುವಿನ ಮುಖದ ಜಾಗದಲ್ಲಿ ಕಣ್ಣುಗಳೇ ಇರಲಿಲ್ಲ. ಅದರ ಬದಲಿಗೆ ಕೇವಲ ಎರಡು ಕಪ್ಪು ಕುಳಿಗಳಿದ್ದವು! ಆ ಭೀಕರ ಮುಖದೊಂದಿಗೆ ಅದು ಕಾರ್ತಿಕ್ ಕಡೆ ನೋಡಿ ಜೋರಾಗಿ ಅಟ್ಟಹಾಸದಿಂದ ನಗಲು ಶುರು ಮಾಡಿತು. ಆ ನಗುವಿನ ಭೀಕರ ಶಬ್ದ ಎಷ್ಟು ಜೋರಾಗಿತ್ತೆಂದರೆ ಇಡೀ ನಿರ್ಜನ ರಸ್ತೆಯೇ ಒಂದು ಕ್ಷಣ ನಡುಗಿದಂತ ಭಾಸವಾಯಿತು. ಇದನ್ನು ನೋಡಿ ಬೆಚ್ಚಿಬಿದ್ದ ಕಾರ್ತಿಕ್ ತಕ್ಷಣವೇ ಅಲ್ಲಿಂದ ಓಡಿ ಹೋಗಲು ತನ್ನ ಬೈಕ್ ಸ್ಟಾರ್ಟ್ ಮಾಡಲು ಹೋದ.

 

 

ಕಾರ್ತಿಕ್ ಬೈಕ್ ಹತ್ತಿ ಆಕ್ಸಿಲರೇಟರ್ ಕೊಡಲು ಹೋದ ತಕ್ಷಣ, ಆ ಮಗು ಸಡನ್ ಆಗಿ ಮುಂದೆ ಬಂದು ತನ್ನ ಕೈಗಳನ್ನು ಬೈಕ್‌ನ ಟೈಯರ್‌ಗೆ ಇಟ್ಟುಬಿಟ್ಟಿತು! ಆ ಶಕ್ತಿಯ ಮುಂದೆ ಬೈಕ್ ಮೂವ್ ಆಗುತ್ತಿರಲಿಲ್ಲ. ಕಾರ್ತಿಕ್ ಭಾರಿ ಗಾಬರಿಯಲ್ಲಿ ದೇವರ ನಾಮ ಸ್ಮರಣೆ ಮಾಡುತ್ತಾ ಕಷ್ಟಪಟ್ಟು ಬೈಕ್ ಅನ್ನು ಭರಸರದಿಂದ ಸ್ಟಾರ್ಟ್ ಮಾಡಿ ಅಲ್ಲಿಂದ ತೀವ್ರ ವೇಗದಲ್ಲಿ ಓಡಿಸಿದ.

 

 

ಕಾರ್ತಿಕ್ ಬೈಕ್ ಅನ್ನು ನೂರರ ವೇಗದಲ್ಲಿ ಓಡಿಸುತ್ತಿದ್ದರೂ ಆ ಮಗುವಿನ ಆತ್ಮ ಬೈಕ್‌ನ ಹಿಂದೆಯೇ ಗಾಳಿಯಲ್ಲಿ ತೇಲುತ್ತಾ ಬರುತ್ತಿತ್ತು. ಅಷ್ಟೇ ಅಲ್ಲ, ಅದು ಕಾರ್ತಿಕ್ ಕಿವಿಯ ತೀರಾ ಹತ್ತಿರ ಬಂದು ‘ನನ್ನ ಜೊತೆ ಆಟಾಡ್ತೀಯಾ?’ ಅಂತ ಭೀಕರವಾಗಿ ಕೂಗುತ್ತಿತ್ತು. ಬೈಕ್ ಓಡಿಸಿ ತನ್ನ ಮನೆ ತಲುಪುವವರೆಗೂ ಆ ಕರಾಳ ಶಕ್ತಿ ಆತನನ್ನು ಬೆನ್ನಟ್ಟುತ್ತಲೇ ಇತ್ತು.

 

 

ಮರುದಿನ ಬೆಳಗ್ಗೆ ಕಾರ್ತಿಕ್ ಸ್ವಲ್ಪ ಧೈರ್ಯ ತಂದುಕೊಂಡು ಆ ದಾರಿಯಲ್ಲಿ ಹೋಗಿ ಅಲ್ಲಿನ ಸ್ಥಳೀಯರ ಹತ್ತಿರ ವಿಚಾರಿಸಿದಾಗ ಅಸಲಿ ಸತ್ಯ ಬಯಲಾಯಿತು. ಬರೋಬ್ಬರಿ ಒಂದು ವರ್ಷದ ಹಿಂದೆ ಅದೇ ಜಾಗದಲ್ಲಿ ಒಂದು ಸಣ್ಣ ಮಗು ಭೀಕರ ರೋಡ್ ಆಕ್ಸಿಡೆಂಟ್‌ನಲ್ಲಿ ಪ್ರಾಣ ಬಿಟ್ಟಿತ್ತಂತೆ.

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

TAGGED:The child who appeared in the middle of the night on a deserted highway in Bengaluru! What happened next?
Share This Article
Facebook Twitter Copy Link Print
Previous Article ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?