Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

Share
1 Min Read
SHARE

newsics.com / ನ್ಯೂಸಿಕ್ಸ್

ಮುಂಬೈ: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಈ ಘಟನೆ ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ನಡೆದಿದೆ. ಆರೋಪಿಯನ್ನು ಅಮೋಲ್ ಮುಲೆ ಎಂದು ಗುರುತಿಸಲಾಗಿದೆ. ಆತ ನ್ಯಾಯಾಲಯದ ಗುಮಾಸ್ತನಾಗಿದ್ದು, ಪ್ರಸ್ತುತ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಬಲೆ ಬೀಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಹಲ್ಲೆಗೊಳಗಾದ ಸ್ನೇಹಲ್ ಸಾವಂತ್ ಪಾಲ್ಘರ್ ಜಿಲ್ಲಾ ಕಲೆಕ್ಟರ್ ಕಚೇರಿಯಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ನೇಹಲ್ ಸಾವಂತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಅಮೋಲ್ ಹಿಂದಿನಿಂದ ಓಡಿ ಬಂದು ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಕುತ್ತಿಗೆ, ಬೆನ್ನು, ಭುಜಗಳು ಮತ್ತು ಸೊಂಟದ ಮೇಲೆ ಸುಮಾರು ಎಂಟು ಬಾರಿ ಇರಿದಿದ್ದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಸ್ನೇಹಲ್ ಸಾವಲ್ ಕುಸಿದು ಬಿದ್ದರೂ ಅಮೋಲ್ ಮುಲೆ ಸ್ಥಳದಿಂದ ಪರಾರಿಯಾಗುವ ಮೊದಲು ಆಕೆಗೆ ಹೊಡೆದಿದ್ದಾನೆ. ಇಡೀ ಘಟನೆಯು ಹತ್ತಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದಾಳಿಯ ನಂತರ ಆತ ತನ್ನ ಬ್ಯಾಗ್ ಮತ್ತು ಆಯುಧವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ರಸ್ತೆಯ ಮೇಲೆ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ವ್ಯಕ್ತಿಯೊಬ್ಬರು ವಾಹನ ನಿಲ್ಲಿಸಿದ್ದು, ಬಳಿಕ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದರು.

ಗಾಯಗೊಂಡ ಮಹಿಳೆಯನ್ನು ಆರಂಭದಲ್ಲಿ ಪಾಲ್ಘರ್‌ನ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪಾಲ್ಘರ್ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಪಾಲ್ಘರ್ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.

ದಾಳಿಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಅಮೋಲ್ ಮುಲೆಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಂದು ತಿಳಿಸಿದ್ದಾರೆ.

Woman Govt Employee Hacked 8 Times With Sickle In Broad Daylight

📍Palghar, Maharashtra

Snehal Sawant, 27, a revenue department employee at Palghar District Collector's Office, was attacked with a sickle by colleague Amol Mule… a court peon… near Gold Cinema Hall at 6:15… pic.twitter.com/jF0ogc8hb7

— زماں (@Delhiite_) June 13, 2026

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

TAGGED:Government employee attackedyoung woman in critical condition
Share This Article
Facebook Twitter Copy Link Print
Previous Article ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ
Next Article I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?