newsics.com
ಶುಭೋದಯ
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಈ ದಿನ- ನಿತ್ಯ ಪಂಚಾಂಗ
26-08-2024 ಸೋಮವಾರ
ದಿನ ವಿಶೇಷ:
* ಶ್ರೀಕೃಷ್ಣ ಜನ್ಮಾಷ್ಟಮಿ
* ಮಹಿಳಾ ಸಮಾನತೆ ದಿನ
* ವಿಶ್ವ ಶ್ವಾನ ದಿನ
* ಮದರ್ ತೆರೇಸಾ ಜನ್ಮದಿನ
* ಸಂತ ಜ್ಞಾನೇಶ್ವರ ಜಯಂತಿ
* ಪಂತ ಬಾಳೇಕುಂದ್ರಿ ಮಹಾರಾಜ ಜಯಂತಿ
* ಶ್ರೀ ಮೋಟಬಸವೇಶ್ವರ ಜಾತ್ರೆ, ಕನ್ನೂರ, ನವಲಗುಂದ.
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 26/08/2024
ತಿಂಗಳು – ಆಗಸ್ಟ್
ಬಣ್ಣ – ಕೆಂಪು
ವಾರ – ಸೋಮವಾರ
ತಿಥಿ – ಅಷ್ಟಮಿ 26:19:06*
ಪಕ್ಷ – ಕೃಷ್ಣ
ನಕ್ಷತ್ರ – ಕೃತ್ತಿಕಾ 15:54:16
ಯೋಗ – ವ್ಯಾಘಾತ 22:15:25
ಕರಣ – ಬಾಳವ 14:54:45
ಕರಣ – ಕೌಳವ 26:19:06*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ವೃಷಭ
ಸೂರ್ಯ ರಾಶಿ ಸಿಂಹ
ಋತು ವರ್ಷ
ಸೂರ್ಯೋದಯ 06:09:25
ಸೂರ್ಯಾಸ್ತ 18:33:01
ಹಗಲಿನ ಅವಧಿ 12:23:36
ರಾತ್ರಿಯ ಅವಧಿ 11:36:26
ಚಂದ್ರಾಸ್ತ 12:20:35
ಚಂದ್ರೋದಯ 23:56:28
ರಾಹು ಕಾಲ 07:42 – 09:15 ಅಶುಭ
ಯಮಗಂಡ ಕಾಲ. 10:48 – 12:21 ಅಶುಭ
ಗುಳಿಕ ಕಾಲ 13:54 – 15:27
ಅಭಿಜಿತ್ 11:56 – 12:46 ಶುಭ
ದುರ್ಮುಹೂರ್ತ 12:46 – 13:36 ಅಶುಭ
ದುರ್ಮುಹೂರ್ತ 15:15 – 16:04 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಜೀವನದಲ್ಲಿ ನೈಜ ಕಷ್ಟಕ್ಕಿಂತಲೂ, ಕಷ್ಟದ ಬಗೆಗಿನ ಅತಿಯಾದ ಭಯ, ಭ್ರಮೆಗಳೇ ಹೆಚ್ಚು ನೋವು, ಆತಂಕ ಉಂಟುಮಾಡುತ್ತವೆ.
– ಸೆನೆಕಾ, ರೋಮ್ ತತ್ತ್ವಜ್ಞಾನಿ
***
ಈ ದಿನದ ಸುಭಾಷಿತ
ಪ್ರತ್ಯಹಂ ಯಾತಿ ಕಟುತಾಂ
ಏಷಾ ಸಂಸಾರಸಂಸ್ಥಿತಿಃ |
ಕಾಲಪಾಕವಶಾಲ್ಲೋಕಾ
ರಸಾ ನಿಂಬಲತಾ ಯಥಾ ||
(ಯೋಗವಾಸಿಷ್ಠ)
ಎಳೆಯದಾಗಿರುವ ಬೇವಿನ ಸಸಿಯು ಬೆಳೆದು ಬೆಂದು ಬಲಿತಂತೆಲ್ಲಾ ಅದರ ಕಹಿಯೂ ಹೆಚ್ಚಾಗುವಂತೆ, ಸಂಸಾರಸ್ಥಿತಿಯೂ ಬೆಳೆದ ಹಾಗೆಲ್ಲಾ ಕಟುವಾಗಿರುವುದು.
***
ಈ ದಿನದ ಇತಿಹಾಸ
ಆಗಸ್ಟ್ 26 – ಮಹಿಳಾ ಸಮಾನತೆ ದಿನ
ಪ್ರತಿವರ್ಷ ಆಗಸ್ಟ್ 26 ರಂದು ವಿಶ್ವಾದ್ಯಂತ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸಲಾಗುತ್ತದೆ. ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಅಮೆರಿಕದ 19ನೇ ಕಾಯ್ದೆ ತಿದ್ದುಪಡಿಯ ದ್ಯೋತಕವಾಗಿ ಈ ದಿನಾಚರಣೆ ಆಚರಿಸಲಾಗುತ್ತದೆ.
1973 ರಲ್ಲಿ ಪ್ರಥಮ ಬಾರಿಗೆ ಮಹಿಳಾ ಸಮಾನತೆ ದಿನ ಆಚರಿಸಲಾಯಿತು. ಅಂದಿನಿಂದ ಅಮೆರಿಕದ ಅಧ್ಯಕ್ಷರು ನಿಗದಿಪಡಿಸಿರುವ ಆಗಸ್ಟ್ 26 ರಂದು ಈ ದಿನ ಆಚರಿಸಿಕೊಂಡು ಬರಲಾಗುತ್ತಿದೆ. 1920 ರಲ್ಲಿ ಇದೇ ದಿನದಂದು ಅಮೆರಿಕದಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡುವ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಅದರ ನೆನಪಿಗಾಗಿ ಅಂದೇ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು.
ಆಗಸ್ಟ್ 26 – ವಿಶ್ವ ಶ್ವಾನ ದಿನ
ಮನುಷ್ಯನ ಬದುಕಿನಲ್ಲಿ ನಾಯಿಗಳು ವಹಿಸುವ ಪಾತ್ರವೇನು ಮತ್ತು ಅವುಗಳ ಮಹತ್ವವೇನು ಎಂಬುದರ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 26 ಅನ್ನು ‘ವಿಶ್ವ ಶ್ವಾನ ದಿನ’ವನ್ನಾಗಿ ಆಚರಿಸಲಾಗುತ್ತೆ. ನಿಯತ್ತಿಗೆ ಮತ್ತೊಂದು ಹೆಸರು ನಾಯಿ ಮನುಷ್ಯನ ಬದುಕಿನೊಂದಿಗೆ ಹೇಗೆ ಬೆಸೆದುಕೊಂಡಿದೆ, ಮತ್ತು ಬೀದಿ ನಾಯಿಗಳು ಎಷ್ಟು ಹಿಂಸೆಗೆ ಒಳಗಾಗುತ್ತಿವೆ ಎಂಬುದರತ್ತ ಬೆಳಕು ಚೆಲ್ಲುವ ಪ್ರಯತ್ನವನ್ನೂ ಈ ದಿನ ಮಾಡಲಾಗುತ್ತಿದೆ.
2004 ರಲ್ಲಿ ಕಾಲ್ಲೀನ್ ಪೈಗೆ ಎಂಬುವವರು ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಆರಂಭಿಸಿದರು. ಪ್ರಾಣಿ ಹಿತರಕ್ಷಣಾ ಅಡ್ವೋಕೇಟ್ ಆಗಿರುವ ಅವರು ಬೀದಿ ನಾಯಿಗಳ ರಕ್ಷಣೆ ಮತು ಅವುಗಳಿಗೆ ರಕ್ಷಣೆಯ ನೀಡುವ ಉದ್ದೇಶದಿಂದ ಈ ದಿನವನ್ನು ಆರಂಭಿಸಿದರು. ಬೀದಿ ನಾಯಿಗಳನ್ನು ದತ್ತು ಪಡದೆಯುವುದಕ್ಕೆ ಪ್ರೋತ್ಸಾಹ ನೀಡುವುದೂ ಅವರ ಉದ್ದೇಶವಾಗಿತ್ತು.
ಪ್ರಮುಖ ಘಟನೆಗಳು
* ಆಗಸ್ಟ್ 26, 1883 ರಂದು ಕ್ರಾಕಟೋವಾ ಜ್ವಾಲಾಮುಖಿ ಭೀಕರವಾಗಿ ಬಾಯ್ದೆರೆದ ದಿನವಿದು. ಮಧ್ಯಾಹ್ನ 1 ಗಂಟೆಗೆ ಮೊದಲ ಬಾರಿಗೆ ಸ್ಫೋಟಗಳ ಸರಣಿ ಸಂಭವಿಸಿತು. 2 ಗಂಟೆಗೆ ಬೂದಿಯ ಕರಿಮೋಡ ಕ್ರಾಕಟೋವಾದ ಮೇಲೆ 17 ಮೈಲುಗಳಷ್ಟು ಎತ್ತರಕ್ಕೆ ಎದ್ದು ನಿಂತಿತು. ಮರುದಿನ ಬೆಳಗ್ಗೆ ಹತ್ತು ಗಂಟೆ ವೇಳೆಗೆ ಜ್ವಾಲಾಮುಖಿ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿತು. ಆಗ ಸಂಭವಿಸಿದ ಸ್ಫೋಟದ ಸದ್ದು 2200 ಮೈಲು ದೂರದ ಆಸ್ಟ್ರೇಲಿಯಾಕ್ಕೂ ಕೇಳಿಸಿತು. ಐವತ್ತು ಮೈಲುಗಳಷ್ಟು ದೂರಕ್ಕೆ ಬೂದಿ ಚಿಮ್ಮಿತು.
* ಆಗಸ್ಟ್ 26, 1920 ರಂದು ಅಮೆರಿಕದಲ್ಲಿ ಈ ದಿನವನ್ನು ‘ಮಹಿಳಾ ಸಮಾನತಾ ದಿನ’ವಾಗಿ ಆಚರಿಸಲಾಗುತ್ತದೆ. 72 ವರ್ಷಗಳ ಹೋರಾಟದ ಬಳಿಕ ಈದಿನ ಅಮೆರಿಕದ ಸಂವಿಧಾನಕ್ಕೆ 19ನೇ ತಿದ್ದುಪಡಿ ತಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.
* ಟಿ. ವಿ. ವೆಂಕಟಾಚಲ ಶಾಸ್ತ್ರೀ – 26 ಆಗಸ್ಟ್, 1933 ರಂದು ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಸಂಶೋಧಕರು, ವಿದ್ವಾಂಸರು, ವ್ಯಾಕರಣಕಾರರು. ಅವರು ಛಂದಸ್ಸು, ವ್ಯಾಕರಣ, ನಿಘಂಟು, ಕಾವ್ಯಮೀಮಾಂಸೆ, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಚರಿತ್ರೆ, ಸಂಶೋಧನೆ , ಜೀವನಚರಿತ್ರೆ ಇತ್ಯಾದಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕುರಿತು 120ಕ್ಕೂ ಹೆಚ್ಚು ಕೃತಿಗಳು, ಸಹಕರ್ತೃತ್ವ ಮತ್ತು ಸಹಸಂಪಾದನೆಯಲ್ಲಿ 16 ಕೃತಿಗಳು, ಪ್ರಧಾನ ಸಂಪಾದಕತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಕನ್ನಡ ಸಾಹಿತ್ಯ ಸೇವೆಗಾಗಿ ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್., ಪಂಪ ಪ್ರಶಸ್ತಿ , ರನ್ನ ಪ್ರಶಸ್ತಿ , ನೃಪತುಂಗ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಹಳಗನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವ ಪ್ರೊ.ಟಿ.ವಿ.ವಿ. ಅವರನ್ನು ಕುರಿತು ‘ಡಿ.ಎಲ್. ನರಸಿಂಹಾಚಾರ್ ಅವರ ನಂತರ ಆ ಸ್ಥಾನವನ್ನು ಶಾಸ್ತ್ರಿಗಳು ತುಂಬಿಕೊಟ್ಟರು’ ಎಂದಿರುವ ಮಾತು ಗಮನಾರ್ಹ.
* ಆಗಸ್ಟ್ 26, 1978 ರಂದು ರಷ್ಯದ ಸೋಯುಜ್ 31ರ ಮೂಲಕ ಗಗನಕ್ಕೆ ಏರಿದ ಸಿಗ್ಮಂಡ್ ಜಾನ್ ಅವರು ಬಾಹ್ಯಾಕಾಶಕ್ಕೆ ಏರಿದ ಪ್ರಥಮ ಜರ್ಮನ್ ಎಂಬ ಕೀರ್ತಿಗೆ ಭಾಜನರಾದರು.