Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಆರತಿ ತಟ್ಟೆಗೆ ಹಣ ಹಾಕುವುದೇಕೆ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?
ಪ್ರಮುಖಲೈಫ್‌ಸ್ಟೈಲ್

ಆರತಿ ತಟ್ಟೆಗೆ ಹಣ ಹಾಕುವುದೇಕೆ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?

Share
2 Min Read
SHARE

newsics.com/ನ್ಯೂಸಿಕ್ಸ್

ನಾವು ಮಾಡುವ ಪೂಜೆಯಲ್ಲಿ ಶಾಸ್ತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ಹಿಂದೂ ಶಾಸ್ತ್ರದಲ್ಲಿ ದೇವರ ಪೂಜೆಯನ್ನು ಹೇಗೆ ಮಾಡಬೇಕೆಂದು ಹೇಳಲಾಗಿದೆಯೋ ಅದರಂತೆ ಪೂಜೆಯನ್ನು ಮಾಡಲು ಪ್ರಯತ್ನಿಸುತ್ತೇವೆ.

ಪೂಜೆಯನ್ನು ನಾವು ದೇವರ ಕೋಣೆಯನ್ನು ಸ್ವಚ್ಛಗೊಳಿಸುವ ಮೂಲಕ ಪ್ರಾರಂಭಿಸುತ್ತೇವೆ ಮತ್ತು ದೇವರಿಗೆ ಆರತಿಯನ್ನು ಮಾಡುವ ಮೂಲಕ ಮುಕ್ತಾಯಗೊಳಿಸುತ್ತೇವೆ. ಅಂದರೆ, ದೇವರಿಗೆ ನಾವು ಮಾಡುವ ಆರತಿಯು ಪೂಜೆಯ ಅಂತಿಮ ಹಂತವಾಗಿರುತ್ತದೆ. ಸಾಮಾನ್ಯವಾಗಿ, ಆರತಿಯನ್ನು ನೀಡಿದಾಗ ನಾವು ಆರತಿ ತಟ್ಟೆಯಲ್ಲಿ ಹಣವನ್ನು ಹಾಕಿ ಆರತಿಯನ್ನು ತೆಗೆದುಕೊಳ್ಳುತ್ತೇವೆ. ಆರತಿ ತಟ್ಟೆಯಲ್ಲಿ ಹಣವನ್ನು ಹಾಕುವುದರ ಪ್ರಯೋಜನವೇನು?

ಶಾಸ್ತ್ರಗಳ ಪ್ರಕಾರ, ಭಗವಂತನು ನಮಗೆ ನೀಡಿರುವ ಐಶ್ವರ್ಯ, ಆರೋಗ್ಯ ಮತ್ತು ಪ್ರಕೃತಿಯ ಕೊಡುಗೆಗಳಿಗೆ ಪ್ರತಿಯಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆರತಿ ತಟ್ಟೆಗೆ ನಾಣ್ಯವನ್ನು ಹಾಕುವುದು ಎಂದರೆ ನಮ್ಮಲ್ಲಿರುವ ‘ಮಮಕಾರ’ ಮತ್ತು ‘ಅಹಂಕಾರ’ವನ್ನು ದೇವರ ಪಾದಕ್ಕೆ ಅರ್ಪಿಸುವುದು ಎಂದರ್ಥ. ದೇವಸ್ಥಾನಕ್ಕೆ ಹೋದಾಗ ಬರಿಗೈಯಲ್ಲಿ ಹೋಗಬಾರದು ಮತ್ತು ಬರಿಗೈಯಲ್ಲಿ ವಾಪಸ್ ಬರಬಾರದು ಎಂಬ ನಿಯಮವಿದೆ. ಭಕ್ತಿಪೂರ್ವಕವಾಗಿ ನೀಡುವ ಈ ಕಾಣಿಕೆ ಮನುಷ್ಯನಲ್ಲಿ ಕಂಜೂಸ್ ಗುಣವನ್ನು ದೂರ ಮಾಡಿ, ತ್ಯಾಗ ಮನೋಭಾವನೆಯನ್ನು ಬೆಳೆಸುತ್ತದೆ.

ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ಇಡೀ ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ರಾಜರು ಮತ್ತು ಶ್ರೀಮಂತರು ದೇವಸ್ಥಾನಗಳಿಗೆ ಭಾರಿ ದಾನ ನೀಡುತ್ತಿದ್ದರು. ಆದರೆ ಸಾಮಾನ್ಯ ಜನರಿಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಸಿಗಲೆಂದು ಆರತಿ ತಟ್ಟೆಗೆ ಸಣ್ಣ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂತು. ಈ ರೀತಿ ಸಂಗ್ರಹವಾದ ಹಣವನ್ನು ದೇವಸ್ಥಾನದ ದೀಪದ ಎಣ್ಣೆ, ಪೂಜಾ ಸಾಮಗ್ರಿಗಳು, ಅರ್ಚಕರ ಜೀವನೋಪಾಯ ಹಾಗೂ ಅಲ್ಲಿಗೆ ಬರುವ ಬಡ ಭಕ್ತರ ಅನ್ನದಾನಕ್ಕೆ ಬಳಸಲಾಗುತ್ತಿತ್ತು.

ಹಳೆಯ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು ಸಂಪೂರ್ಣವಾಗಿ ಚಿನ್ನ, ಬೆಳ್ಳಿ ಅಥವಾ ತಾಮ್ರದ ಲೋಹದಿಂದ ಮಾಡಲ್ಪಟ್ಟಿದ್ದವು. ಆರತಿಯನ್ನು ಸಾಮಾನ್ಯವಾಗಿ ತಾಮ್ರ ಅಥವಾ ಹಿತ್ತಾಳೆ ತಟ್ಟೆಯಲ್ಲೇ ಬೆಳಗಲಾಗುತ್ತದೆ. ಲೋಹದ ನಾಣ್ಯಗಳು ತಟ್ಟೆಗೆ ಸ್ಪರ್ಶಿಸಿದಾಗ ಮತ್ತು ಕರ್ಪೂರದ ಶಾಖ ತಗುಲಿದಾಗ, ಅಲ್ಲಿ ಒಂದು ಧನಾತ್ಮಕ ಶಕ್ತಿ ಹಾಗೂ ಕಂಪನ ಉತ್ಪತ್ತಿಯಾಗುತ್ತದೆ. ಭಕ್ತರು ಆರತಿ ತೆಗೆದುಕೊಳ್ಳುವಾಗ ಕೈಗಳನ್ನು ತಟ್ಟೆಯ ಹತ್ತಿರ ತಂದಾಗ ಆ ದಿವ್ಯ ಲೋಹದ ಶಕ್ತಿ ಅವರ ದೇಹವನ್ನು ಪ್ರವೇಶಿಸುತ್ತದೆ ಎಂಬ ವೈಜ್ಞಾನಿಕ ನಂಬಿಕೆಯೂ ಇದೆ.

ನಿಮ್ಮ ಶಕ್ತಿ ಮತ್ತು ಭಕ್ತಿಗೆ ಅನುಗುಣವಾಗಿ ಶ್ರದ್ಧೆಯಿಂದ ಒಂದು ರೂಪಾಯಿ ಹಾಕಿದರೂ ಅದು ಕೋಟಿ ಪುಣ್ಯವನ್ನು ತರುತ್ತದೆ. ಇಲ್ಲಿ ಭಕ್ತಿ ಪ್ರಧಾನವೇ ಹೊರತು ಹಣದ ಮೌಲ್ಯವಲ್ಲ ಎಂದು ಧರ್ಮಶಾಸ್ತ್ರಗಳು ಸಾರುತ್ತವೆ.

Jamun Fruit ನೇರಳೆ ಹಣ್ಣಿನ ಆರೋಗ್ಯ ಗುಣಗಳು; ರುಚಿಯ ಜೊತೆಗೆ ಆರೋಗ್ಯದ ಖಜಾನೆ

TAGGED:Why is money put on the Aarti plate? What are the scientific reasons behind it?
Share This Article
Facebook Twitter Copy Link Print
Previous Article Tamilnadu BJP ತಮಿಳುನಾಡು ಬಿಜೆಪಿಗೆ ತೀವ್ರ ಆಘಾತ: ಇಬ್ಬರು ಮುಖಂಡರ ಎಕ್ಸಿಟ್ ಬೆನ್ನಲ್ಲೇ ಕಾರ್ಯದರ್ಶಿ ಸುಮತಿ ವೆಂಕಟೇಶ್ ರಾಜೀನಾಮೆ!
Next Article ಒಬ್ಬಂಟಿಯಾದ ಸಿದ್ದರಾಮಯ್ಯ: ಸಿಎಂ ಡಿಕೆ ಎದುರಾದರೂ ಮಾತಿಲ್ಲ! ವಿಡಿಯೋ ನೋಡಿ

Popular Posts

ಇನ್ನೈದು ದಿನ ಕನಸಿನ ಬಗ್ಗೆ ಇರಲಿ ಭಾರೀ ಎಚ್ಚರ!

1 Min Read

NEET ಹೋರಾಟಕ್ಕೆ ಪೊಲೀಸರ ಗ್ರೀನ್ ಸಿಗ್ನಲ್; ಕಾಕ್ರೋಚ್​ ಜನತಾ ಪಾರ್ಟಿಯಿಂದ ಪ್ರತಿಭಟನೆ: ಭಾರತಕ್ಕೆ ಸಿಜೆಪಿ ಸಂಸ್ಥಾಪಕ ಡಿಪ್ಕೆ ಆಗಮನ

1 Min Read

ಲಂಡನ್ ವಿಶ್ವವಿದ್ಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಎದುರೇ ತೀವ್ರ ವಾಗ್ವಾದ :ಭಾಷಣದ ವೇಳೆ ನಡೆದಿದ್ದೇನು?

1 Min Read

ಒಬ್ಬಂಟಿಯಾದ ಸಿದ್ದರಾಮಯ್ಯ: ಸಿಎಂ ಡಿಕೆ ಎದುರಾದರೂ ಮಾತಿಲ್ಲ! ವಿಡಿಯೋ ನೋಡಿ

1 Min Read

You Might Also Like

ದೇಶಪ್ರಮುಖ

Tamilnadu BJP ತಮಿಳುನಾಡು ಬಿಜೆಪಿಗೆ ತೀವ್ರ ಆಘಾತ: ಇಬ್ಬರು ಮುಖಂಡರ ಎಕ್ಸಿಟ್ ಬೆನ್ನಲ್ಲೇ ಕಾರ್ಯದರ್ಶಿ ಸುಮತಿ ವೆಂಕಟೇಶ್ ರಾಜೀನಾಮೆ!

1 Min Read
ಪ್ರಮುಖಆರೋಗ್ಯ

Jamun Fruit ನೇರಳೆ ಹಣ್ಣಿನ ಆರೋಗ್ಯ ಗುಣಗಳು; ರುಚಿಯ ಜೊತೆಗೆ ಆರೋಗ್ಯದ ಖಜಾನೆ

2 Min Read
ಕರ್ನಾಟಕದೇಶಪ್ರಮುಖ

Porfolio issue ಖಾತೆ ಕ್ಯಾತೆಗೆ ತೇಪೆ: ಫಲಿಸಿತು ಸಿಎಂ ಡಿಕೆ ತಡರಾತ್ರಿಯ ಸಂಧಾನ

1 Min Read
ದೇಶಪ್ರಮುಖವಿದೇಶ

IND vs AFG Test ಭಾರತ vs ಅಫ್ಘಾನ್‌ ಟೆಸ್ಟ್‌ ಪಂದ್ಯ : ಐಪಿಎಲ್‌ನ ಸ್ಕ್ವಾಡ್‌ನಲ್ಲಿ ನಾಲ್ವರು ಕನ್ನಡಿಗರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?