ಕಾಂಗ್ರೆಸ್ನ ಹಿರಿಯ ನಾಯಕ, ಅತ್ಯಂತ ಅನುಭವಿ ರಾಜಕಾರಣಿ ರಾಮಲಿಂಗಾರೆಡ್ಡಿ ಅವರು ಖಾತೆ ವಿಚಾರಕ್ಕೆ ತಾಳ್ಮೆ ಕಳೆದುಕೊಂಡಿದ್ದಾರೆ. ಕೊಟ್ಟ ಮಾತು ತಪ್ಪಿದ್ದಕ್ಕೆ ಆಪ್ತ ಡಿಕೆ ಶಿವಕುಮಾರ್ ಅವರ ಸಂಪುಟದಿಂದಲೇ ರೆಡ್ಡಿ ಹೊರಬಂದಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಇದು ದೊಡ್ಡ ಹಿನ್ನಡೆಯೇ ಆಗಿದೆ.
ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ? ತೀವ್ರ ಕುತೂಹಲ ಕೆರಳಿಸಿದೆ ರೆಡ್ಡಿ ನಡೆ.
ಮೊಬೈಲ್ ಸ್ವೀಚ್ ಆಫ್, ರೆಡ್ಡಿ ಹೋಗಿದ್ದು ಎಲ್ಲಿಗೆ?
ಬೆಂಗಳೂರಿನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ ಅವ್ರು ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಆಗಲ್ಲ. ಹೀಗಾಗಿ ರಾಜೀನಾಮೆ ಕೊಡ್ತಿದ್ದೇನೆ ಎಂದಷ್ಟೇ ಹೇಳಿ ರಾಜೀನಾಮೆಗೆ ಸಹಿ ಹಾಕಿದ್ರು. ಬಳಿಕ ಅಲ್ಲಿಂದ ಹೊರಟ ರೆಡ್ಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕಕ್ಕೂ ಸಿಗ್ತಿಲ್ಲ.
ಗಡಿ ದಾಟಿದೆ ರಾಮಲಿಂಗಾರೆಡ್ಡಿ ಕಾರು
ರೆಬಲ್ ರಾಮಲಿಂಗಾರೆಡ್ಡಿ ಅತ್ತಿಬೆಲೆ ಬಳಿ ಖಾಸಗಿ ಹೋಟೆಲ್ ನಲ್ಲಿ ಆಪ್ತರ ಜೊತೆ ಸಮಾಲೋಚನೆ ನಡೆಸಿದ್ರು. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿರುವ ರೆಡ್ಡಿ ಆಪ್ತರು ಮತ್ತು ಪಕ್ಷದ ನಾಯಕರು ಮನವೊಲಿಕೆಗೆ ಆಗಮಿಸುತ್ತಾರೆ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸಭೆ ಬಳಿಕ ಖಾಸಗಿ ಕಾರಿನಲ್ಲಿ ತಮಿಳುನಾಡಿನತ್ತ ತೆರೆಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಯಾರ ಸಂಪರ್ಕಕ್ಕೂ ಸಿಗ್ತಿಲ್ಲ ರೆಡ್ಡಿ?
ಯಾರ ಸಂಪರ್ಕಕ್ಕೂ ಸಿಗಬಾರದು ಎಂಬ ನಿರ್ಧಾರಕ್ಕೆ ಬಂದಿರೋ ರಾಮಲಿಂಗಾರೆಡ್ಡಿ ಅವರು ಆಪ್ತರ ಜೊತೆ ತಮಿಳುನಾಡಿಗೆ ತೆರಳಿದ್ದಾರೆ ಎಂದು ಹೇಳಲಾಗ್ತಿದೆ.
ಸುರ್ಜೇವಾಲಾಗೆ ರಾಹುಲ್ ಸೂಚನೆ
ರಾಮಲಿಂಗಾರೆಡ್ಡಿ ರಾಜೀನಾಮೆ ವಿಚಾರವನ್ನ ಉಸ್ತುವಾರಿ ಸುರ್ಜೇವಾಲಾ ಅವರು ಬೆಳಗ್ಗೆಯೇ ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿ ಎಂದು ಸುರ್ಜೇವಾಲಾಗೆ ಜವಾಬ್ದಾರಿ ನೀಡುತ್ತಾ ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಮಲಿಂಗಾರೆಡ್ಡಿ ರಿಸೈನ್ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!