Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Tension for BJP ಬದಲಾದ ಸರ್ಕಾರ: ಬುಡಮೇಲಾಯ್ತು ಬಿಜೆಪಿ ಲೆಕ್ಕಾಚಾರ! ಕಮಲ ಪಾಳಯದಲ್ಲೀಗ ಡಿಕೆ ಟೆನ್ಶನ್
ಕರ್ನಾಟಕದೇಶಪ್ರಮುಖ

Tension for BJP ಬದಲಾದ ಸರ್ಕಾರ: ಬುಡಮೇಲಾಯ್ತು ಬಿಜೆಪಿ ಲೆಕ್ಕಾಚಾರ! ಕಮಲ ಪಾಳಯದಲ್ಲೀಗ ಡಿಕೆ ಟೆನ್ಶನ್

Share
5 Min Read
SHARE

newsics.com/ನ್ಯೂಸಿಕ್ಸ್

ರಾಜ್ಯದ ಮುಂದಿನ ಮುಖ್ಯ ಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಟ್ರಬಲ್ ಶ್ಯೂಟರ್ ಎಂದೇ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಪ್ರತಿಪಕ್ಷ ಬಿಜೆಪಿಯ ಕಾರ್ಯತಂತ್ರವನ್ನೇ ಬುಡಮೇಲು ಮಾಡಿದೆ.

ಈವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರೇ 2028ರವರೆಗೆ ಅಧಿಕಾರದಲ್ಲಿದ್ದರೆ, ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರ ಎರಡು ಪಕ್ಷಗಳಲ್ಲಿತ್ತು.

ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ವಿಶೇಷವಾಗಿ ಬಿಜೆಪಿಯ ಜಂಘಬಲವನ್ನೇ ಉಡುಗಿಸಿದೆ.

ಹೀಗಾಗಿ ಈವರೆಗೂ ರೂಪಿಸುತ್ತಿದ್ದ ರಣತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ಕಾರ್ಯತಂತ್ರ ಹೆಣೆಯುತ್ತ ಸಂಘಪರಿವಾರದ ನಾಯಕರು ಮಗ್ನರಾಗಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿ ಇದ್ದಿದ್ದರೆ, ಅಲ್ಪಸಂಖ್ಯಾತರ ತುಷ್ಟಿಕರಣ ,ಹಿಂದೂ ವಿರೋಧಿ ಎಂಬಲ್ಲ ಪಟ್ಟ ಕಟ್ಟಿ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿ ಬಿಜೆಪಿ ಇತ್ತು.

ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಇಂತಹದ್ದೇ ಆರೋಪಗಳನ್ನು ಮಾಡಿ ಬಿಜೆಪಿ ಯಶಸ್ವಿಯಾಗಿತ್ತು. ಅದೇ ಕಾಲಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಕೈ ಹಾಕಿ ಕಾಂಗ್ರೆಸ್ ಇನ್ನಿಲ್ಲದ ಹೊಡೆತ ತಿಂದಿದ್ದು ಇತಿಹಾಸ.

ಅಪ್ಪಟ ದೈವಭಕ್ತ

ಸಿದ್ದರಾಮಯ್ಯ ಅವರು ದೇವರನ್ನು ನಂಬುತ್ತಿದ್ದರಾದರೂ, ಅತಿಯಾದ ಧಾರ್ಮಿಕ ಆಚರಣೆ ಪಾಲನೆ ಮಾಡುತ್ತಿರಲಿಲ್ಲ. ಕೇವಲ ನಾಮಕವಾಸ್ತೆಗೆ ಎಂಬಂತೆ ದೇವಸ್ಥಾನ ಧಾರ್ಮಿಕ ಮಂದಿರಗಳಿಗೆ ಭೇಟಿ ನೀಡಿ ಬರುತ್ತಿದ್ದರು.ಇದಕ್ಕೆ ತದ್ವಿರುದ್ಧ ಎನ್ನುವಂತೆ, ಡಿಕೆ ಶಿವಕುಮಾರ್ ಮಹಾನ್ ದೈವಭಕ್ತರು ,ತಾವು ನಂಬುವ ದೇವರು, ಮಠ ,ಶ್ರೀಗಳು ನೀಡುವ ಸಲಹೆ ,ಸೂಚನೆ, ಮಾರ್ಗದರ್ಶನ ಯಾವುದನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಾರೆ. ಹೀಗಾಗಿ ಅವರನ್ನು ದೈವಭಕ್ತ ಎಂದು ಅನೇಕರು ಕರೆಯುತ್ತಾರೆ.

ಡಿಕೆ ಶಿವಕುಮಾರ್ ಬಗ್ಗೆ ಪುತ್ರಿ ಐಶ್ವರ್ಯಾ ಮಾತನಾಡಿರುವ ವಿಡಿಯೋ ವೈರಲ್‌

ಒಂದು ಬಾರಿ ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಸದಾ ವತ್ಸಲೇ ಮಾತೃಭೂಮಿ ಗೀತೆ ಹಾಡಿ ವಿವಾದಕ್ಕೆ ಗುರಿಯಾಗಿದ್ದರು.ಅವರು ದೇವರನ್ನು ಎಷ್ಟು ನಂಬುತ್ತಾರೆ ಎಂಬುದಕ್ಕೆ

ತಾವು ಯಾವ ದಿನಾಂಕದಂದು ,ಯಾವ ಸಮಯದಲ್ಲಿ? ಯಾವ ಶುಭ ಮಹರ್ತದಂದು? ಅಧಿಕಾರ ಸ್ವೀಕಾರ ಮಾಡಬೇಕು ಎಂಬುದನ್ನು ಖ್ಯಾತ ಜ್ಯೋತಿಷಿ ದ್ವಾರಕನಾಥ್ ಹಾಗೂ ನೊಣವಿನಕರೆಯ ಕಾಡು ಸಿದ್ದೇಶ್ವರ ಮಠದ ಶ್ರೀಗಳು ತೀರ್ಮಾನಿಸಿದ್ದಾರೆ. ಅದರಂತೆ ಬುಧವಾರ ಸಂಜೆ 4.05 ಕ್ಕೆ ಸಲ್ಲುವ ಗೋಧೂಳಿ ಶುಭ ಲಗ್ನದಲ್ಲಿ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಾರೆ ಅಂದರೆ ಅಷ್ಟರಮಟ್ಟಿಗೆ ಅವರು ದೇವರು, ಧರ್ಮ, ಆಚರಣೆ ಸಂಪ್ರದಾಯ ಎಲ್ಲವನ್ನು ನಂಬುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರು.

ಇಂತಹ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವುದು ಬಿಜೆಪಿ ಅತಿಯಾಗಿ ಓಲೈಸುವ ಹಿಂದೂ ಮತಗಳ ದೃವೀಕರಣಕ್ಕೆ ಮೊದಲ ಹೊಡೆತ ಬೀಳಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಹೀಗಾಗಿ ಬಿಜೆಪಿ ಹಾಗೂ ಸಂಘ ಪರಿವಾರ ತನ್ನ ತಂತ್ರಗಾರಿಕೆಯಲ್ಲಿ ಭಾರಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿರುವುದು ವಿಶೇಷ.ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆರ್‍ಎಸ್‍ಎಸ್, ಬಿಜೆಪಿಯ ನಾಯಕರಿಗೆ ‘ಸರಳ ಮತ್ತು ಪರಿಣಾಮಕಾರಿ’ ತಂತ್ರಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿದೆ ಎನ್ನಲಾಗಿದೆ.

ಪಕ್ಷವನ್ನು ಬಲಪಡಿಸಲು ಮತ್ತು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಹೈಕಮಾಂಡ್ ಸಜ್ಜಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ, ಕೋರ್ ಕಮಿಟಿ ಸಭೆ ನಡೆಸಿ, ಸಂಘಟನಾತ್ಮಕವಾಗಿ ಪಕ್ಷವನ್ನು ಪುನರ್ ರಚನೆ ಮಾಡಲು ನಿರ್ಧರಿಸಲಾಗಿದೆ.

ವಿಶೇಷವಾಗಿ, ಒಬ್ಬ ಕೇಂದ್ರ ಸಚಿವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಜವಾಬ್ದಾರಿಯನ್ನು ನೀಡುವ ಸಾಧ್ಯತೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದು ಪಕ್ಷದಲ್ಲಿ ಹೊಸ ಚೈತನ್ಯ ತುಂಬುವ ಪ್ರಯತ್ನವಾಗಿದೆ.ಕೇವಲ ರಾಜಕೀಯ ತಂತ್ರಗಳಿಗಷ್ಟೇ ಸೀಮಿತವಾಗದೆ, ಆರ್‍ಎಸ್‍ಎಸ್ ರಾಜ್ಯದಲ್ಲಿ ‘ಸರಳ ಮತ್ತು ಪರಿಣಾಮಕಾರಿ’ ತಂತ್ರಗಳನ್ನು ರೂಪಿಸುವಲ್ಲಿ ನೇರ ನಿಗಾ ವಹಿಸಿದೆ.

ತಳಮಟ್ಟದ ಸಂಘಟನೆ ( ಮತ್ತು ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ).

ಸೈದ್ಧಾಂತಿಕ ಬದ್ಧತೆ ಮತ್ತು ಪಕ್ಷದ ಸಂಘಟನೆಯ ನಡುವೆ ಸಮನ್ವಯ ಸಾಧಿಸುವುದು ಆರೆಸ್ಸೆಸ್‍ನ ಪ್ರಮುಖ ಉದ್ದೇಶವಾಗಿದೆ.

ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಿರುವ ವಿಷಯವನ್ನು ಬಿಜೆಪಿ ತನ್ನ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಆಡಳಿತ ವೈಫಲ್ಯ, ಭ್ರಷ್ಟಾಚಾರ ಮತ್ತು ಕೇವಲ ‘ಮುಖಗಳ ಬದಲಾವಣೆ’ಯಿಂದ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದು ಬಿಜೆಪಿ ವಾದವಾಗಿದೆ.

ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ತಪ್ಪುಗಳನ್ನು ಎತ್ತಿಹಿಡಿಯುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಬಿಜೆಪಿ ಪಣತೊಟ್ಟಿದೆ.

ವಿಷಯಾಧಾರಿತ ಹೋರಾಟ

ಕೇವಲ ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಬದಲು, ಆಡಳಿತ ವೈಫಲ್ಯ, ಭ್ರಷ್ಟಾಚಾರದ ಆರೋಪಗಳು ಮತ್ತು ಅಭಿವೃದ್ಧಿ ಕುಂಠಿತವಾಗಿರುವ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲು ನಿರ್ಧರಿಸಲಾಗಿದೆ.ಆರ್‍ಎಸ್‍ಎಸ್ ತನ್ನ ಸಾಂಪ್ರದಾಯಿಕ ಶೈಲಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸೂಚಿಸಿದೆ. ಮೇಲ್ಮಟ್ಟದ ನಾಯಕರ ಗದ್ದಲಕ್ಕಿಂತ, ಗ್ರಾಮೀಣ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ನೆಲೆ ಗಟ್ಟಿಗೊಳಿಸುವುದು ಇದರ ಉದ್ದೇಶ.

ಹಳೆಯ ನಾಯಕರ ನಡುವಿನ ಗುಂಪುಗಾರಿಕೆಯನ್ನು ತಗ್ಗಿಸಿ, ಯುವ ಮತ್ತು ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಪಕ್ಷದ ವರ್ಚಸ್ಸನ್ನು ಸುಧಾರಿಸಲು ಪ್ರಯತ್ನಗಳು ನಡೆದಿವೆ.ಕೇವಲ ಪ್ರಭಾವಿ ಜಾತಿಗಳ ಮೇಲೆ ಅವಲಂಬಿತರಾಗದೆ, ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ನಿಟ್ಟಿನಲ್ಲಿ ‘ಸಮಗ್ರ ಅಭಿವೃದ್ಧಿ’ಯ ಮಂತ್ರವನ್ನು ಜಪಿಸಲು ಬಿಜೆಪಿ ಮುಂದಾಗಿದೆ.

ಡಿ.ಕೆ ಶಿವಕುಮಾರ್ ಅವರ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಬಿಜೆಪಿಯ ಆತಂಕಕ್ಕೆ ಕಾರಣವಾಗಿವೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ ಮತ್ತು ಸಂಪನ್ಮೂಲಗಳನ್ನು ಎದುರಿಸಲು ಬಿಜೆಪಿಗೆ ಸಮರ್ಥವಾದ ರಣತಂತ್ರದ ಅಗತ್ಯವಿದೆ.

ನನಗೆ ಹೂವಿನ ಹಾರ ಹಾಕಬೇಡಿ, ಅಲರ್ಜಿಯಾಗುತ್ತೆ!: ಡಿ.ಕೆ. ಶಿವಕುಮಾರ್ ಮನವಿ!

ಹಳೆಯ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಅವರ ಬಲ ಹೆಚ್ಚಿರುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಈ ಭಾಗದಲ್ಲಿ ಪಕ್ಷದ ಹಿಡಿತ ಸಾಧಿಸಲು ಆರ್‍ಎಸ್‍ಎಸ್ ವಿಶೇಷ ಗಮನ ಹರಿಸುತ್ತಿದೆ.

ಅವರು ಮುಖ್ಯಮಂತ್ರಿ ಆದರೆ, ಅದನ್ನು ತಡೆಯಲು ಬಿಜೆಪಿ ಬಳಸುವ ತಂತ್ರಗಳು ಉಲ್ಟಾ ಆಗುವ ಸಾಧ್ಯತೆಯನ್ನು ಕೂಡಾ ಆರ್‍ಎಸ್‍ಎಸ್ ಅರಿತಿದೆ. ಹೀಗಾಗಿ, ಆವೇಶಭರಿತ ರಾಜಕಾರಣಕ್ಕಿಂತ ನಿಧಾನವಾಗಿ ಆದರೆ ಅಚಲವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆಗೆ ಆದ್ಯತೆ ನೀಡಲಾಗಿದೆ.

ರಾಜ್ಯ ಬಿಜೆಪಿ ಇದೀಗ ಆರ್‍ಎಸ್‍ಎಸ್‍ನ ಮಾರ್ಗದರ್ಶನದಲ್ಲಿ ‘ಹಳೆ ಚಾಳಿ’ಗಳನ್ನು ಬಿಟ್ಟು ಹೊಸ ಹಾದಿಯನ್ನು ಹಿಡಿಯಲು ಪ್ರಯತ್ನಿಸುತ್ತಿದೆ. ಕೇವಲ ವಿರೋಧಿಸುವುದಕ್ಕಾಗಿ ವಿರೋಧಿಸದೆ, ಆಡಳಿತ ಪಕ್ಷದ ಲೋಪಗಳನ್ನು ಸಾರ್ವಜನಿಕವಾಗಿ ಬಯಲಿಗೆಳೆಯುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಜನರ ವಿಶ್ವಾಸ ಗಳಿಸಲು ಬಿಜೆಪಿ ಸಜ್ಜಾಗುತ್ತಿದೆ. ಡಿಕೆ ಶಿವಕುಮಾರ್ ಅವರ ರಾಜಕೀಯ ಏಳಿಗೆಯನ್ನು ತಡೆಯಲು ಬಿಜೆಪಿ ಅನುಸರಿಸುವ ಈ ಹೊಸ ‘ಸರಳ ತಂತ್ರ’ ಯಾವ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಸಿದ್ದರಾಮಯ್ಯ ನಿರ್ಗಮನ ಮತ್ತು ಕಾಂಗ್ರೆಸ್ ಆಂತರಿಕ ಸಮೀಕರಣ: ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರದಿಂದ ಕಾಂಗ್ರೆಸ್ ಒಳಗೆ ಯಾವ ರೀತಿಯ ಬದಲಾವಣೆಗಳಾಗಲಿವೆ ಎನ್ನುವುದು ಕುತೂಹಲ ಮೂಡಿಸಿದೆ. ಬಿಜೆಪಿ ಈ ಆಂತರಿಕ ಭಿನ್ನಾಭಿಪ್ರಾಯಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ.

2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿನ ಜಾತಿ ಸಮೀಕರಣಗಳು, ಹಿಂದುಳಿದ ವರ್ಗಗಳ ಬೆಂಬಲ ಮತ್ತು ಬೆಂಗಳೂರಿನ ನಾಗರಿಕ ಚುನಾವಣೆಗಳು ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸಲಿವೆ.

ಪ್ರಮಾಣವಚನ ದಿನವೇ ಕಾಂಗ್ರೆಸ್ ನೂತನ ಭವನ ಶಂಕುಸ್ಥಾಪನೆಗೆ ಡಿಕೆ ಶಿವಕುಮಾರ್ ಪ್ಲ್ಯಾನ್​

 

TAGGED:Changed government: BJP's calculations have been shaken! DK tension now in Kamal's camp
Share This Article
Facebook Twitter Copy Link Print
Previous Article New Rules from June 1 ಇಂದಿನಿಂದ ಬದಲಾಗಿವೆ ಈ ಪ್ರಮುಖ ನಿಯಮಗಳು
Next Article ಚುನಾವಣೆ ಸಮಯದ ಆಡಿಯೋ ವೈರಲ್: ಜಮೀರ್‌ಗೆ ಭಾರೀ ಸಂಕಷ್ಟ

Popular Posts

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

Anurag Kashyap Controversy| ನಗ್ನ ದೃಶ್ಯಕ್ಕೆ ನಿರಾಕರಣೆ; ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು ಎಂದ ನಟಿಯ ಬಹಿರಂಗ

2 Min Read

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?