Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > New Rules from June 1 ಇಂದಿನಿಂದ ಬದಲಾಗಿವೆ ಈ ಪ್ರಮುಖ ನಿಯಮಗಳು
ಕರ್ನಾಟಕದೇಶಪ್ರಮುಖ

New Rules from June 1 ಇಂದಿನಿಂದ ಬದಲಾಗಿವೆ ಈ ಪ್ರಮುಖ ನಿಯಮಗಳು

Share
2 Min Read
SHARE

newsics.com/ನ್ಯೂಸಿಕ್ಸ್

ನವದೆಹಲಿ : ಜೂನ್ ತಿಂಗಳ ಮೊದಲ ದಿನವಾದ ಇಂದಿನಿಂದ ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಹಲವು ಪ್ರಮುಖ ನಿಯಮಗಳು ಬದಲಾಗುತ್ತಿವೆ.

ಗ್ಯಾಸ್ ಪೈಪ್‌ಲೈನ್ ಬಳಸುವವರು, ಆನ್‌ಲೈನ್ ಪೇಮೆಂಟ್ ಮಾಡುವವರು, ಎಟಿಎಂ ಬಳಸುವವರು ಮತ್ತು ರೈಲಿನಲ್ಲಿ ಪ್ರಯಾಣಿಸುವವರು ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

 

1. ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತು ಸುಂಕ ಕಡಿತ

ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ATF) ಮೇಲಿನ ರಫ್ತು ಸುಂಕವನ್ನು ಕಡಿತಗೊಳಿಸಿದೆ. ಇಂದಿನಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ ₹1.5, ಡೀಸೆಲ್ ಮೇಲೆ ₹13.5 ಮತ್ತು ಎಟಿಎಫ್ ಮೇಲೆ ₹9.5 ರಫ್ತು ಸುಂಕವನ್ನು ವಿಧಿಸಲಾಗುತ್ತದೆ.

2. ರೈಲ್ವೆಯ ಹೊಸ ವೇಳಾಪಟ್ಟಿ

ಚೆನ್ನೈ ಸೇರಿದಂತೆ ದೇಶದ ಹಲವು ಮಾರ್ಗಗಳ ರೈಲು ಸೇವೆಗಳ ವೇಳಾಪಟ್ಟಿಯನ್ನು ಇಂದಿನಿಂದ ಬದಲಾಯಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚು ರೈಲುಗಳ ಸಂಚಾರದ ಸಮಯದಲ್ಲಿ ವ್ಯತ್ಯಾಸವಾಗಿದ್ದು, ಪ್ರಯಾಣಿಕರು ಇದರ ಸಂಪೂರ್ಣ ಮಾಹಿತಿಯನ್ನು ಅಧಿಕೃತ ರೈಲ್ವೆ ಆಯಪ್  ಮೂಲಕ ಪಡೆದುಕೊಳ್ಳಬಹುದು.

3. ಪ್ಯಾನ್ ಕಾರ್ಡ್ (PAN Card) ನಿಯಮದಲ್ಲಿ ಬದಲಾವಣೆ

ಇಂದಿನಿಂದ ಬ್ಯಾಂಕ್‌ಗಳಲ್ಲಿ ₹50,000 ವರೆಗೆ ನಗದು ಜಮಾ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿರುವುದಿಲ್ಲ. ಆದರೆ, ₹20 ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ವ್ಯವಹಾರಗಳು ಮತ್ತು ದೊಡ್ಡ ಮೊತ್ತದ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ.

 

4. ಎಟಿಎಂ ಮತ್ತು ಬ್ಯಾಂಕಿಂಗ್ ಸೇವಾ ಶುಲ್ಕಗಳು

ಹಲವಾರು ಬ್ಯಾಂಕುಗಳು ಎಟಿಎಂ ಬಳಕೆಯ ನಿಯಮಗಳನ್ನು ಇಂದಿನಿಂದ ಮತ್ತಷ್ಟು ಬಿಗಿಗೊಳಿಸಿವೆ. ಬ್ಯಾಂಕ್ ನಿಗದಿಪಡಿಸಿದ ಉಚಿತ ವಹಿವಾಟಿನ ಮಿತಿ (Free Transaction Limit) ಮುಗಿದ ನಂತರ, ಎಟಿಎಂನಿಂದ ಹಣ ಡ್ರಾ ಮಾಡಲು, ಮಿನಿ ಸ್ಟೇಟ್‌ಮೆಂಟ್ ಪಡೆಯಲು ಮತ್ತು ಬ್ಯಾಲೆನ್ಸ್ ಚೆಕ್ ಮಾಡಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

5. ಯುಪಿಐ (UPI) ವಹಿವಾಟು ಇನ್ನು ಮುಂದೆ ಮತ್ತಷ್ಟು ಸುರಕ್ಷಿತ

ಯುಪಿಐ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ನಿಯಮವನ್ನು ತರಲಾಗಿದೆ. ಇನ್ನು ಮುಂದೆ ನೀವು ಯುಪಿಐ ಮೂಲಕ ಹಣ ಕಳುಹಿಸುವ ಮೊದಲು, ಯಾರಿಗೆ ಹಣ ಕಳುಹಿಸುತ್ತಿದ್ದೀರೋ ಅವರ ಬ್ಯಾಂಕ್ ಖಾತೆಯಲ್ಲಿರುವ ಅಧಿಕೃತ ಹೆಸರು ಸ್ಕ್ರೀನ್ ಮೇಲೆ ಕಾಣಿಸಲಿದೆ. ಈ ನಿಯಮವು ಗೂಗಲ್ ಪೇ , ಫೋನ್ ಪೇ  ಮತ್ತು ಪೇಟಿಎಂ  ಸೇರಿದಂತೆ ಎಲ್ಲಾ ಪ್ರಮುಖ ಯುಪಿಐ ಆಯಪ್‌ಗಳಿಗೆ ಅನ್ವಯವಾಗುತ್ತದೆ.

 

6. ಎಲ್‌ಪಿಜಿ (LPG) ಗ್ರಾಹಕರಿಗೆ ಪ್ರಮುಖ ಬದಲಾವಣೆ

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ: ಇಂದಿನಿಂದ 19 ಕೆಜಿಯ ವಾಣಿಜ್ಯ ಎಲ್‌ಪಿಜಿ (Commercial LPG) ಸಿಲಿಂಡರ್ ದರದಲ್ಲಿ ₹42 ಹೆಚ್ಚಳವಾಗಿದ್ದು, ಅದರ ಬೆಲೆ ₹3,113.50 ತಲುಪಿದೆ.

 

ಗೃಹಬಳಕೆ ಸಿಲಿಂಡರ್: ಆದರೆ, ಸಮಾಧಾನಕರ ಸಂಗತಿಯೆಂದರೆ 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸಿಲಿಂಡರ್ ಸರೆಂಡರ್ ನಿಯಮ: ಮನೆಯಲ್ಲಿ ಪಿಎನ್‌ಜಿ (PNG – ಪೈಪ್ಡ್ ನ್ಯಾಚುರಲ್ ಗ್ಯಾಸ್) ಕನೆಕ್ಷನ್ ಆರಂಭವಾದ 30 ದಿನಗಳ ಒಳಗಾಗಿ ನಿಮ್ಮ ಹಳೆಯ ಎಲ್‌ಪಿಜಿ ಸಂಪರ್ಕವನ್ನು ಸರೆಂಡರ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ನೋಟಿನ ಮಳೆ ಸುರಿಸಿದ ಕೋತಿ! ವಿಡಿಯೋ ನೋಡಿ

TAGGED:These important rules have changed from today
Share This Article
Facebook Twitter Copy Link Print
Previous Article Stray dog ​​guards girl ರಸ್ತೆ ಪಕ್ಕ ಮಲಗಿದ್ದ ಬಾಲಕಿಗೆ ಬೀದಿ ನಾಯಿ‌ ಕಾವಲು! ವಿಡಿಯೋ ನೋಡಿ
Next Article Tension for BJP ಬದಲಾದ ಸರ್ಕಾರ: ಬುಡಮೇಲಾಯ್ತು ಬಿಜೆಪಿ ಲೆಕ್ಕಾಚಾರ! ಕಮಲ ಪಾಳಯದಲ್ಲೀಗ ಡಿಕೆ ಟೆನ್ಶನ್

Popular Posts

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

You Might Also Like

ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಕರ್ನಾಟಕಕೃಷಿ

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?