Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನೋಟಿನ ಮಳೆ ಸುರಿಸಿದ ಕೋತಿ! ವಿಡಿಯೋ ನೋಡಿ
ದೇಶಪ್ರಮುಖವೈರಲ್

ನೋಟಿನ ಮಳೆ ಸುರಿಸಿದ ಕೋತಿ! ವಿಡಿಯೋ ನೋಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಬುಲಂದ್‌ಶಹರ್ :  ಕೋರ್ಟ್‌ ಆವರಣದಲ್ಲಿದ್ದ ಮಂಗ, ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಬರೋಬ್ಬರಿ 2 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್‌ಅನ್ನು ಕಸಿದುಕೊಂಡು, ಮರ ಹತ್ತಿ ಆಕಾಶದಿಂದ ನೋಟುಗಳ ಮಳೆ ಸುರಿಸಿದ ಪ್ರಸಂಗ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ನಡೆದಿದೆ.

ಸ್ಥಳೀಯ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಆಸ್ತಿ ಖರೀದಿ ಸಂಬಂಧಿಸಿದ ದಾಖಲೆ ಪತ್ರಗಳ ಕೆಲಸವನ್ನು ಪೂರ್ಣಗೊಳಿಸಲು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ಇರುವ ವಕೀಲರ ಚೇಂಬರ್‌ಗೆ ಆಗಮಿಸಿದ್ದರು. ಅವರ ಕೈಯಲ್ಲಿ ಸುಮಾರು 2 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್ ಇತ್ತು. ಅವರು ವಕೀಲರ ಕಚೇರಿಯ ಬಳಿ ನಿಂತಿದ್ದಾಗ, ಅಲ್ಲಿಗೆ ಹಠಾತ್ ಆಗಿ ನುಗ್ಗಿದ ಮಂಗ ಕೈಯಲ್ಲಿದ್ದ ಹಣದ ಬ್ಯಾಗ್‌ಅನ್ನು ಕಸಿದುಕೊಂಡು ಮಿಂಚಿನಂತೆ ಮರ ಹತ್ತಿದೆ.

ಬ್ಯಾಗ್ ಕಸಿದುಕೊಂಡ ಮಂಗ ಮರಹತ್ತಿ, ಬ್ಯಾಗ್ ಒಳಗಡೆ ತಿನ್ನಲು ಏನಾದರೂ ಆಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅದನ್ನು ಜಾಲಾಡಲು ಆರಂಭಿಸಿದೆ.

ಬ್ಯಾಗ್‌ನಲ್ಲಿ ತಿಂಡಿ ಇಲ್ಲದಿರುವುದನ್ನು ಕಂಡು  ಮಂಗ ₹500 ನೋಟುಗಳ ಕಂತೆಗಳನ್ನು ಒಂದೊಂದಾಗಿ ಹರಿದು ಗಾಳಿಯಲ್ಲಿ ತೂರಲು ಪ್ರಾರಂಭಿಸಿತು. ಮರದಿಂದ ನೋಟುಗಳು ಕೆಳಗೆ ಬೀಳುತ್ತಿದ್ದ ದೃಶ್ಯವು ಆಕಾಶದಿಂದ ಹಣದ ಮಳೆಯೇ ಸುರಿಯುತ್ತಿರುವಂತೆ ಭಾಸವಾಗುತ್ತಿತ್ತು. ಕೆಲವೇ ನಿಮಿಷಗಳಲ್ಲಿ, ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದ ತುಂಬಾ ಕರೆನ್ಸಿ ನೋಟುಗಳು ಹಾರಾಡುತ್ತಿರುವುದನ್ನು ಕಂಡು ಕೋರ್ಟ್ ಆವರಣದಲ್ಲಿದ್ದ ನೂರಾರು ಜನರ ದಂಡೇ ಮರದ ಕೆಳಗೆ ಜಮಾಯಿಸಿತು.

ಈ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ಘಟನೆಯ 53 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ತಮ್ಮ ಕಣ್ಣೆದುರೇ ಕಷ್ಟದ ಹಣ ಗಾಳಿಯಲ್ಲಿ ತೇಲಿ ಹೋಗುತ್ತಿರುವುದನ್ನು ಕಂಡು ಬ್ಯಾಗ್ ಮಾಲೀಕರು ಜೋರಾಗಿ ಕೂಗಾಡಿ ನೆರವಿಗಾಗಿ ಚೀರಾಡಿದರು. ಇದನ್ನು ಗಮನಿಸಿದ ನೋಂದಣಿ ಕಚೇರಿಯ ಆವರಣದಲ್ಲಿದ್ದ ಇತರ ವಕೀಲರು, ಮುನ್ಸಿಪಾಲಿಟಿ ಸಿಬ್ಬಂದಿ ಹಾಗೂ ದಾರಿಹೋಕರು ತಕ್ಷಣವೇ ಕಾರ್ಯಪ್ರವೃತ್ತರಾದರು. ರಸ್ತೆಯುದ್ದಕ್ಕೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದರಾದರೂ, ಕೊನೆಯಲ್ಲಿ ಸ್ಥಳೀಯರ ಸಹಾಯದಿಂದ ಬ್ಯಾಗ್ ಮಾಲೀಕರು ನಿರಾಳರಾಗಿದ್ದಾರೆ.ಮಂಗ ರಸ್ತೆಗೆ ಎಸೆದಿದ್ದ ₹2 ಲಕ್ಷ ಒಟ್ಟು ಹಣದಲ್ಲಿ ಬರೋಬ್ಬರಿ ₹1.98 ಲಕ್ಷ ಹಣ ಯಶಸ್ವಿಯಾಗಿ ಮಾಲೀಕನ ಕೈ ಸೇರಿದ್ದು, ಕೇವಲ 2 ಸಾವಿರ ರೂಪಾಯಿಗಳಷ್ಟೇ ಕೈತಪ್ಪಿ ಹೋಗಿದೆ.

https://x.com/ashishkm123/status/2061041989995676106?ref_src=twsrc%5Etfw%7Ctwcamp%5Etweetembed%7Ctwterm%5E2061041989995676106%7Ctwgr%5Ec18ac832245bb16297d2b03b24da2c3f74aea432%7Ctwcon%5Es1_c10&ref_url=https%3A%2F%2Fkannada.asianetnews.com%2Fviral%2Fmonkey-money-rain-bulandshahr-court-viral-video-rs-2-lakh-cash-stolen-san%2Farticleshow-hqg530h

ಸಿದ್ದರಾಮಯ್ಯ ಪತ್ನಿಗೆ ರಾಜ್ಯಸಭೆ ಆಫರ್ ನೀಡಿದ ಕಾಂಗ್ರೆಸ್ ಹೈಕಮಾಂಡ್

TAGGED:The monkey that rained down banknotes!
Share This Article
Facebook Twitter Copy Link Print
Previous Article ಸಿದ್ದರಾಮಯ್ಯ ಪತ್ನಿಗೆ ರಾಜ್ಯಸಭೆ ಆಫರ್ ನೀಡಿದ ಕಾಂಗ್ರೆಸ್ ಹೈಕಮಾಂಡ್
Next Article Stray dog ​​guards girl ರಸ್ತೆ ಪಕ್ಕ ಮಲಗಿದ್ದ ಬಾಲಕಿಗೆ ಬೀದಿ ನಾಯಿ‌ ಕಾವಲು! ವಿಡಿಯೋ ನೋಡಿ

Popular Posts

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

You Might Also Like

ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?