newsics.com/ನ್ಯೂಸಿಕ್ಸ್
AI ಆಧಾರಿತ ಡೀಪ್ ಫೇಕ್ ತಂತ್ರಜ್ಞಾನ ಈಗ ಕ್ರಿಯೇಟಿವ್ ಕ್ಷೇತ್ರದಲ್ಲಷ್ಟೇ ಅಲ್ಲ, ತಪ್ಪುಮಾಹಿತಿ ಹರಡುವ ಸಾಧನವಾಗಿಯೂ ಬಳಕೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಸೋಷಿಯಲ್ ಮೀಡಿಯಾಗಳಲ್ಲಿ ಬರುವುದರಲ್ಲಿ ನಿಜ ಯಾವುದು ನಕಲಿ ಯಾವುದು ಎಂಬುದನ್ನು ಕಂಡುಹಿಡಿಯುವುದು ಕೂಡಾ ಕಷ್ಟ.
ಫೆಮಿನಾ ಅವಾರ್ಡ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಅವರ ವೀಡಿಯೊ ಎಂದು ಬಿಂಬಿಸಲಾದ ಡೀಪ್‌ಫೇಕ್ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಪ್ಪು ಬಣ್ಣದ ಗೌನ್ ಮತ್ತು ಡೀಪ್ ಕಟ್ ನೆಕ್ಲ್ ಲೈನ್ ಇರುವ ಉಡುಪಿನಲ್ಲಿ ಅವರು ಕಾಣಿಸಿಕೊಂಡಂತೆ ವಿಡಿಯೋ ತೋರಿಸಲಾಗಿತ್ತು.
ಇಂಟರ್ನೆಟ್‌ನಲ್ಲಿವೈರಲ್ ಆಗುತ್ತಿರುವ ಕ್ಲಿಪ್‌ನ್ನು ಪರಿಣಿತರು ಪರಿಶೀಲಿಸಿದಾಗ, ಅದು AI ಜನರೇಟೆಡ್ ವಿಡಿಯೋ ಎಂದು ಸ್ಪಷ್ಟವಾಗಿದೆ . ಮಾಧುರಿ ದೀಕ್ಷಿತ್ ಅವರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನಿಜವಾದ ಫೋಟೋ ಹಾಗೂ ಉಡುಪಿನೊಂದಿಗೆ ಹೋಲಿಕೆ ಮಾಡಿದಾಗ ಹಲವಾರು ವ್ಯತ್ಯಾಸಗಳು ತಿಳಿದುಬರುತ್ತವೆ.
https://www.instagram.com/p/DY6UQnfAQ19/?igsh=MnYzdWdtcmQwcGhl
https://www.instagram.com/p/DY6UQnfAQ19/?igsh=MnYzdWdtcmQwcGhl