Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Vasthu Tips ಮನೆ ಒರೆಸಲು ಹರಿದ ಬಟ್ಟೆ ಬಳಸುತ್ತೀರಾ?ಎಚ್ಚರ ಹಣ, ಆರೋಗ್ಯ ಎಲ್ಲವೂ ನಷ್ಟ!
ಲೈಫ್‌ಸ್ಟೈಲ್ಪ್ರಮುಖ

Vasthu Tips ಮನೆ ಒರೆಸಲು ಹರಿದ ಬಟ್ಟೆ ಬಳಸುತ್ತೀರಾ?ಎಚ್ಚರ ಹಣ, ಆರೋಗ್ಯ ಎಲ್ಲವೂ ನಷ್ಟ!

Share
2 Min Read
SHARE

newsics.com/ನ್ಯೂಸಿಕ್ಸ್

ಮನೆ ಕಟ್ಟಿಸಬೇಕು, ಅಥವಾ ಖರೀದಿಸಬೇಕು  ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ, ಮನೆ ಖರೀದಿಸಿದ ನಂತರ ಏನಾದರೂ ತೊಂದರೆ ಆದರೆ ವಾಸ್ತು ತಜ್ಞರ ಅಭಿಪ್ರಾಯ ಕೇಳುತ್ತಾರೆ. ಆದರೆ, ಅದಕ್ಕೂ ಮುನ್ನವೇ ವಾಸ್ತುವನ್ನು ನೋಡಿದರೆ ಅಂತಹ ತೊಂದರೆಗಳೇ ಉದ್ಭವಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ಮನೆ ಮತ್ತು ಸುತ್ತಮುತ್ತಲಿನ ಸಕಾರಾತ್ಮಕ ವಾಸ್ತು ಶಕ್ತಿಯು ನೆಲೆಸಲು ಇದು ಒಂದು ಅಮೂಲ್ಯವಾದ ಸ್ಥಳವಾಗಿದೆ. ಧನಾತ್ಮಕ ಶಕ್ತಿಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತವೆ. ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ನಮಗೆ ಸಹಾಯ ಮಾಡುವುದರಿಂದ, ವಾಸ್ತು ಸಲಹೆಗಳು ಬಹಳ ಮುಖ್ಯ.

ವಾಸ್ತುವಿನ ಹಿಂದೆ ಇರುವ ಕಲೆ ಮತ್ತು ವಿಜ್ಞಾನವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮನೆಯೊಳಗೆ ವಾಸಿಸುವ ಜನರ ನಡುವೆ ಸಹಕಾರ ಸಂಬಂಧಗಳನ್ನು ಉತ್ತೇಜಿಸುತ್ತದೆ. ಆದರೆ ದಿನನಿತ್ಯ ನಾವು ಮಾಡುವ ಕೆಲವಂದಿಷ್ಟು ತಪ್ಪಿನಿಂದ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು, ನಾವು ಹಳೆಯ ಬಟ್ಟೆಗಳನ್ನು ಅಥವಾ ಹರಿದು ಹೋದ ಬಟ್ಟೆಗಳನ್ನು ಮನೆ ಒರೆಸುವುದಕ್ಕೆ ಅಥವಾ ಅಡುಗೆ ಮನೆಯಲ್ಲಿ ಏನಾದರೂ ಒರೆಸಲು ಅಥವಾ ಇನ್ನಿತರ ಕೊಳೆಗಳನ್ನು ತೆಗೆಯಲು ನಾವು ಬಳಸುತ್ತೇವೆ. ಆದರೆ, ಇದನ್ನು ಮಾಡುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ, ಮನೆಯ ಶುಚಿಗೆ ಚಂದ್ರ, ಶುಕ್ರ ಮತ್ತು ರವಿ ಈ ಮೂರು ಗ್ರಹಗಳು ಕಾರಕತ್ವವಾಗಿವೆ. ಇವುಗಳಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಪಾತ್ರ ಪ್ರಧಾನವಾಗಿದೆ. ಚಂದ್ರನು ಶಾಂತಿ, ತಾಳ್ಮೆ, ಸಹನೆ ಮತ್ತು ಮನಸ್ಸಿನ ತಂಪುತನಕ್ಕೆ ಅಧಿಪತಿ. ಶುಕ್ರನು ಐಷಾರಾಮಿ ಜೀವನ, ಉತ್ತಮ ಉಡುಗೆ-ತೊಡುಗೆ ಮತ್ತು ಆಹಾರದ ಸುಖಕ್ಕೆ ಕಾರಕನಾಗಿದ್ದಾನೆ. ಮನೆಯನ್ನು ಶುದ್ಧವಾಗಿ ಇಡಲು ಈ ಗ್ರಹಗಳ ಪ್ರಭಾವ ಅತ್ಯಗತ್ಯ.

ಹಳೆಯ, ಕೊಳಕು ಅಥವಾ ಹರಿದ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸಿದಾಗ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಇಂತಹ ಬಟ್ಟೆಗಳ ಬಳಕೆಯಿಂದ ಹೊರಗಿನ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಚಂದ್ರನಿಗೆ ದಕ್ಕೆ ಉಂಟಾದಾಗ ನಮ್ಮ ಭಾವನೆಗಳಿಗೆ ತೊಂದರೆಯಾಗಿ, ಗಂಡ-ಹೆಂಡತಿಯ ಜಗಳ, ಮಕ್ಕಳ ಕಲಹ, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಶುಕ್ರನ ಪ್ರಭಾವ ಕಡಿಮೆಯಾದಾಗ ಮುಖದ ತೇಜಸ್ಸು ಕುಂದಿ, ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

 

ಹರಿದ ಬಟ್ಟೆಗಳನ್ನು ಧರಿಸುವುದು ಅಥವಾ ಅವುಗಳಿಂದ ಮನೆ ಒರೆಸುವುದು ಸಹ ಅಶುಭ. ರಾಹು ಗ್ರಹವು ಹರಿದ ಬಟ್ಟೆಗಳಿಗೆ ಕಾರಕನಾಗಿದ್ದು, ಇದರ ಪ್ರಭಾವದಿಂದ ಆಕಸ್ಮಿಕ ಘಟನೆಗಳು, ಕೋಪ, ಮತ್ತು ತಕ್ಷಣದ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹರಿದ ಬಟ್ಟೆಗಳನ್ನು ಧರಿಸುವುದು ಫ್ಯಾಷನ್ ಆಗಿದ್ದರೂ, ಇದು ಶುಭವೆಂದು ಪರಿಗಣಿಸಲಾಗುವುದಿಲ್ಲ.

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದರಿಂದ ಮನೆಯಲ್ಲಿ ಅಸ್ಥಿರತೆ, ಅಶಾಂತಿ, ಅತಿಯಾದ ನಿದ್ರೆ, ದುಃಖ ಮತ್ತು ಒಂಟಿತನ ಕಾಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತಮ ಕಾಲದಲ್ಲಿ ಮನೆ ಒರೆಸುವುದರಿಂದ ಸೂರ್ಯನ ಪ್ರಭಾವವೂ ಮನೆಯ ಮೇಲೆ ಇರುತ್ತದೆ. ಸೂರ್ಯನು ಆರೋಗ್ಯದ ಕಾರಕನಾಗಿರುವುದರಿಂದ, ಹಳೆಯ ಬಟ್ಟೆಗಳ ಬಳಕೆಯು ಮನೆಯ ಸದಸ್ಯರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ರಾಜಕೀಯ ವ್ಯಕ್ತಿಗಳು, ವ್ಯಾಪಾರಸ್ಥರು, ಇಂಜಿನಿಯರ್‌ಗಳು ಸೇರಿದಂತೆ ಯಾವುದೇ ವೃತ್ತಿಯಲ್ಲಿರುವವರಿಗೂ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಕಂಟಕಗಳು ಎದುರಾಗಬಹುದು.

ಆದ್ದರಿಂದ, ಮನೆಯನ್ನು ಶುಚಿಗೊಳಿಸಲು ಹೊಸ ಬಟ್ಟೆಗಳನ್ನು ಅಥವಾ ಸೂಕ್ತವಾದ ಶುಚಿಗೊಳಿಸುವ ಸಾಧನಗಳನ್ನು ಬಳಸುವುದು ಅತ್ಯಂತ ಶುಭ.

Rain Alert ರಾಜ್ಯದಲ್ಲಿ ಗುಡುಗು ಬಿರುಗಾಳಿ ಸಹಿತ ಮಳೆ

TAGGED:Do you use torn cloths to wipe your house? Be carefulmoney and health!you will lose everything
Share This Article
Facebook Twitter Copy Link Print
Previous Article Governor accepts CM’s resignation ರಾಜ್ಯಪಾಲರಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ
Next Article ASTRO ಇಂದು ಪರಿಘ, ಶಿವ ಯೋಗ: ಈ ಐದು ರಾಶಿಗಳಿಗೆ ಭಾರೀ ಅದೃಷ್ಟ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?