Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > New CM DK ಜೂ‌ನ್ 1ರೊಳಗೆ ಡಿಕೆ ಪ್ರಮಾಣವಚನ: 8 ವರ್ಷ ಅವರೇ ಸಿಎಂ: ಜ್ಯೋತಿಷಿ ದ್ವಾರಕಾನಾಥ್
ಕರ್ನಾಟಕದೇಶಪ್ರಮುಖ

New CM DK ಜೂ‌ನ್ 1ರೊಳಗೆ ಡಿಕೆ ಪ್ರಮಾಣವಚನ: 8 ವರ್ಷ ಅವರೇ ಸಿಎಂ: ಜ್ಯೋತಿಷಿ ದ್ವಾರಕಾನಾಥ್

Share
3 Min Read
SHARE

newsics.com.ನ್ಯೂಸಿಕ್ಸ್

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗೆ ಡಿಕೆಶಿ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ತೆರೆ ಎಳೆದಿದ್ದಾರೆ.

ಡಿಕೆ ಶಿವಕುಮಾರ್ ಸೋಮವಾರದ ಒಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.

ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ದ್ವಾರಕಾನಾಥ್ ನೆನಪಿಸಿಕೊಂಡಿದ್ದಾರೆ. ‘ಅವನು (ಡಿಕೆಶಿ) ನನಗೆ ಕಳೆದ 35 ವರ್ಷಗಳಿಂದ ಪರಿಚಯ. ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ‘ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತೀಯಾ’ ಎಂದು ಭವಿಷ್ಯ ಹೇಳಿದ್ದೆ. ಅವನು ಸದಾ ನನ್ನ ಸಂಪರ್ಕದಲ್ಲೇ ಇದ್ದಾನೆ. ಅವನು ನಮ್ಮ ಮನೆಯ ಮಗನಿದ್ದಂತೆ’ ಎಂದರು.

ಡಿಕೆಶಿಗೆ ಸಿಎಂ ಪಟ್ಟ ಸಿಗುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಶೃಂಗೇರಿಗೆ ತೆರಳಿದ್ದ ರಹಸ್ಯವನ್ನು ಗುರೂಜಿ ಬಿಚ್ಚಿಟ್ಟಿದ್ದಾರೆ.’ಅವನಿಗೆ ಸಿಎಂ ಆಗೋದು ನ್ಯಾಯವಾಗಿ ಇನ್ನೂ ಬೇಗ, ಅಂದರೆ ಹೊಸ ವರ್ಷದ ಒಳಗೇ ಆಗಬೇಕಿತ್ತು. ಆದರೆ ನಿಧಾನವಾಗುತ್ತಿತ್ತು. ಅದಕ್ಕಾಗಿಯೇ ನಾನು ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಹೋಗಿದ್ದೆ. ನಿಧಾನವಾದ ಕಾರಣ ಆ ದೇವರಿಗೇ ಗೊತ್ತು. ಆದರೆ, ನಾನು ಶೃಂಗೇರಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿ ‘ಗುರೂಜಿ, ಕೆಲಸ ಆಗಿದೆ’ ಎಂದು ಸಿಹಿ ಸುದ್ದಿ ನೀಡಿದ. ನಾನು ಈಗ ಬೆಂಗಳೂರಿಗೆ ಹೋಗಿ ಆತನ ಜತೆ ಕುಳಿತು ಮಾತನಾಡುತ್ತೇನೆ. ಸೋಮವಾರದ ಒಳಗೆ ಆತ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾನೆ’ ಎಂದರು.

ಸಿದ್ದು ರಾಜಯೋಗ ಅಂತ್ಯ; ಡಿಕೆಶಿಗೆ ಗುರು ಬಲ:

ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಜಾತಕದ ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ನಡೆಸಿದ ಗುರೂಜಿ, ‘ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಮತ್ತು ಶನಿ ಬಲ ಎರಡೂ ಇಲ್ಲ. ಈ ಕಾಲ ಯಾರನ್ನೂ ಕೇಳಿ ಬರಲ್ಲ, ಆರಂಭವಾಗಿದ್ದು ಎಂದಿಗೂ ಅಂತ್ಯವಾಗಲೇಬೇಕು. ಸಿದ್ದರಾಮಯ್ಯ ಅವರ ಸಿಎಂ ಆಗುವ ‘ರಾಜಯೋಗ’ ಈಗ ಮುಗಿದಿದೆ. ಆದರೆ, ಈ ರಾಜ್ಯಕ್ಕೆ ಅವರ ಮಾರ್ಗದರ್ಶನ ಮತ್ತು ಸೇವೆಯ ಅಗತ್ಯ ಖಂಡಿತಾ ಇದೆ’ ಎಂದಿದ್ದಾರೆ.

ಈಗ ಡಿಕೆಶಿಗೆ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಗೋಚಾರ ಫಲದ ಪ್ರಕಾರ ಗುರು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಡಿಕೆಶಿಗೆ ಭಾರೀ ರಾಜಯೋಗ ತರಲಿದೆ. ನನ್ನ ಲೆಕ್ಕಾಚಾರದ ಪ್ರಕಾರ ಮುಂದಿನ ಎಂಟು ವರ್ಷ ಈ ರಾಜ್ಯದಲ್ಲಿ ಅವನನ್ನು ಅಲ್ಲಾಡಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದ್ದಾರೆ.

ಮುಂದಿನ ಆಡಳಿತದ ಬಗ್ಗೆ ಮಾತನಾಡಿದ ಗುರೂಜಿ, “ಡಿಕೆಶಿ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಪಕ್ಷವನ್ನು ಕೂಡ ಮುನ್ನಡೆಸಬೇಕಿದೆ. ಅದನ್ನು ನಿಭಾಯಿಸುವ ಶಕ್ತಿಯನ್ನು ದೇವರು ಕೊಡಲಿ. ಆತ ತುಂಬಾ ಬುದ್ಧಿವಂತ ಮತ್ತು ಜಾಣ. ಕೆಲವೊಮ್ಮೆ ಉದ್ವೇಗ (Aggressive) ಇರುತ್ತದೆಯಾದರೂ ಆತನಿಗೆ ಸಹನೆ ಇದೆ, ಎಲ್ಲವನ್ನೂ ಸಂಭಾಳಿಸುತ್ತಾನೆ. ಹೆಗಲ ಮೇಲೆ ಕೈ ಹಾಕಿ ಯಾರನ್ನು ಬೇಕಾದರೂ ಮಾತನಾಡಿಸುವ ಗುಣ ಆತನಲ್ಲಿದೆ. ಆತ ಇವರ ಕಡೆಯವರು ಅವರ ಕಡೆಯವರು ಅಂತ ಯಾರನ್ನೂ ಬ್ರಾಂಡ್ ಮಾಡಲ್ಲ. ಯಾಕಂದ್ರೆ ಶಿವಕುಮಾರ್ ಅನ್ನೋದೇ ಒಂದು ಬ್ರಾಂಡ್ ಎಂದು ಹೇಳಿದರು.

ಡಿಕೆಶಿ ಮುಖ್ಯಮಂತ್ರಿಯಾದ ಮೇಲೆ ಬೆಂಗಳೂರಿನ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕು. ಇಡೀ ರಾಜ್ಯದ ದೊಡ್ಡ ಚಿತ್ರಣ ಆತನ ಕಣ್ಣಮುಂದಿದೆ. ಸಿದ್ದರಾಮಯ್ಯ ಅವರ ಸಹಪಾಠಿಗಳನ್ನು (ಆಪ್ತರನ್ನು) ಕೂಡ ಜತೆಯಲ್ಲೇ ಕರೆದುಕೊಂಡು ಹೋಗಿ ಒಂದು ಅತ್ಯುತ್ತಮ ಸರ್ಕಾರವನ್ನು ಆತ ನೀಡಲಿದ್ದಾನೆ. ಆತನ ಕಾಲದಲ್ಲಿ ಕನ್ನಡ ನಾಡು ಮತ್ತಷ್ಟು ಅಭಿವೃದ್ಧಿಯಾಗಲಿದ್ದು, ನನ್ನ ಪ್ರಾರ್ಥನೆ ಸದಾ ಆತನ ಪರವಾಗಿರುತ್ತದೆ” ಎಂದು ಆಶೀರ್ವದಿಸಿದರು.

 

ಡಿಕೆಶಿಗೆ ಸಾಡೇ ಸಾತಿ ಶನಿ ಕಾಟ! ಮಾತಾಡಿದ್ರೆ ಪಟ್ಟ ಕೈತಪ್ಪುವ ಸಾಧ್ಯತೆ: ನೊಣವಿನಕೆರೆ ಅಜ್ಜಯ್ಯ ಭವಿಷ್ಯ

TAGGED:DK to take oath by June 1: He will be CM for 8 years: Astrologer Dwarkanath's prediction
Share This Article
Facebook Twitter Copy Link Print
Previous Article Bharat Bhagya Vidhata First Look Poster ಕಂಗನಾ ರಣಾವತ್ ನಟನೆಯ ಭಾರತ್ ಭಾಗ್ಯ ವಿಧಾತಾ ಸಿನಿಮಾದ ಫಸ್ಟ್ ಲುಕ್ ರಿಲೀಸ್
Next Article Meta Subscriptions Plan ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಫೇಸ್‌ಬುಕ್‌ಗೆ ಬರಲಿದೆ ಹೊಸ ಚಂದಾದಾರಿಕೆ ಯೋಜನೆಗಳು!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?