newsics.com/ನ್ಯೂಸಿಕ್ಸ್
ಗುವಾಹಟಿ : ಮದುವೆಗೆ ಕರೆಯದೇ ಇದ್ದರೂ ಬಂದು ಊಟ ಮಾಡಿದ್ದ ಮಾನಸಿಕ ಅಸ್ವಸ್ಥ ಹೋಗುವಾಗ ವಧುವಿಗೆ 10 ರೂ. ಉಡುಗೊರೆ ಕೊಟ್ಟು ಹೋಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲಿ ಸೇರಿದ್ದ ಅತಿಥಿಗಳೊಂದಿಗೆ ಅತ್ಯಂತ ಶಾಂತವಾಗಿ ಕುಳಿತು ಅವರು ಊಟ ಮಾಡಿದ್ದರು. ಆ ವ್ಯಕ್ತಿಯ ಮುಗ್ಧತೆಯನ್ನು ಕಂಡು ಅಲ್ಲಿದ್ದ ಯಾರೊಬ್ಬರೂ ಆತನನ್ನು ಪ್ರಶ್ನಿಸಲಿಲ್ಲ ಅಥವಾ ಹೊರಗೆ ಹಾಕಲಿಲ್ಲ.
ಆದರೆ, ಊಟ ಮುಗಿಸಿ ಅಲ್ಲಿಂದ ಹೊರಡುವ ಮುನ್ನ ಆ ವ್ಯಕ್ತಿ ಮಾಡಿದ ಕೆಲಸ ಎಲ್ಲರ ಹೃದಯ ಮುಟ್ಟುವಂತಿತ್ತು. ಆತ ತನ್ನ ಹರಿದ ಜೇಬಿನಿಂದ ಅತ್ಯಂತ ಜಾಗರೂಕತೆಯಿಂದ ಹತ್ತು ರೂಪಾಯಿಯ ಮುದ್ದೆಯಾಗಿದ್ದ ನೋಟನ್ನು ಹೊರಗೆ ತೆಗೆದು, ಅಲ್ಲಿಯೇ ಇದ್ದ ನವವಧುವಿನ ಕೈಯಲ್ಲಿ ಅತ್ಯಂತ ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕೊಟ್ಟು ಹೋಗಿದ್ದಾರೆ.
ಅವರ ಈ ನಿಸ್ವಾರ್ಥ ನಡೆ ಮತ್ತು ಮುಗ್ಧ ಪ್ರೀತಿಯನ್ನು ಕಂಡು ವಧು ಸೇರಿದಂತೆ ಮದುವೆ ಮನೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳು ಆನಂದಬಾಷ್ಪದಿಂದ ತುಂಬಿ ಬಂದವು.
https://www.instagram.com/reel/DY3uD-RtrjP/?igsh=NWx3ZG55eDB6emNr
ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ : ಸಿದ್ದರಾಮಯ್ಯ