newsics.com/ನ್ಯೂಸಿಕ್ಸ್
ರಾಕಿಂಗ್ ಸ್ಟಾರ್ ಯಶ್ ಇದೀಗ ಆನ್ಲೈನ್ ಗೇಮಿಂಗ್ ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.
ಸುಮಾರು 26 ಕೋಟಿಗೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿರುವ ಬಿಜಿಎಂಐ ಗೇಮ್ನ ಹೊಸ 4.4 ಅಪ್ಡೇಟ್ನ ಭಾಗವಾಗಿ ಈ ಸಹಯೋಗ ಮಾಡಲಾಗಿದೆ. ಇದಕ್ಕೆ ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಎಂಬ ಹೆಸರನ್ನಿಡಲಾಗಿದೆ.
ಈ ಗೇಮ್ನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಯಶ್ ಧ್ವನಿ ಕೇಳಬಹುದು. ‘ಟಾಕ್ಸಿಕ್’ ಸಿನಿಮಾದಲ್ಲಿ ಬಳಸಲಾದ ಆಯುಧಗಳ ಮೂಲಕ ಫೈಟ್ ಮಾಡಬಹುದು. ಈ ಗೇಮ್ನಲ್ಲಿ ಯಶ್ ಹೇರ್ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಅಳವಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಯಶ್, ಜೆನ್ ಜೀಗಳಿಗೆ ಅಧಿಕೃತತೆ, ಕತ್ತಿಯಲುಗಿನ ನಡೆಯಂಥಾ ರೋಚಕತೆ, ವಿಶಿಷ್ಟ ಕಥಾಹಂದರಗಳು ಇಷ್ಟ. ಆ ವೈಬ್ ಟಾಕ್ಸಿಕ್ನಲ್ಲಿದೆ. ನನ್ನ ಧ್ವನಿ ಮತ್ತು ಟಾಕ್ಸಿಕ್ನ ಎನರ್ಜಿ ಈ ಗೇಮ್ಗಳಲ್ಲಿದೆ.
ಯುವ ಸಮುದಾಯಕ್ಕೆ ಅದ್ಭುತ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕುತೂಹಲವಿದೆ ಎಂದರು.
https://www.newsics.com/2026/05/28/travel-mandatory-for-bihar-government-employees/