newsics.com/ನ್ಯೂಸಿಕ್ಸ್
ಕರ್ನಾಟಕದ ಮಲೆನಾಡು ಮತ್ತು ಕರಾವಳಿಯಲ್ಲಿ ಬೆಳೆಯುವ ಹಲಸಿನ ಹಣ್ಣು ಪೋಷಕಾಂಶಗಳ ಗಣಿಯಾಗಿದೆ. ಹಸಿದವರಿಗೆ ಹಲಸು, ಉಂಡವರಿಗೆ ಮಾವು ಎಂಬ ಗಾದೆ ಇದೆ. ಬೇಸಿಗೆಯಲ್ಲಿ ಈ ಎರಡು ಹಣ್ಣುಗಳು ಹೆಚ್ಚು ಜನಪ್ರಿಯ.
ಕೆಲವರಿಗೆ ಮಾವು ಫೇವರೆಟ್ ಆದರೆ, ಇನ್ನೂ ಕೆಲವರಿಗೆ ಹಲಸಿನ ಹಣ್ಣು, ಅಚ್ಚುಮೆಚ್ಚು. ಹಲಸಿನ ಹಣ್ಣು ತಿನ್ನಲು ಬಹಳ ರುಚಿಕರವಾದ ಹಣ್ಣಾಗಿದೆ. ಹಲಸಿನ ಹಣ್ಣು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ನಾರಿನಂಶದಿಂದ ಕೂಡಿರುವ ಪೌಷ್ಟಿಕ ಹಣ್ಣಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಸಹ ಒಳ್ಳೆಯದು.
ಹಲಸಿನ ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳಲ್ಲಿ ದೋಸೆ ( jackfruit dosa ) ಕೂಡ ಒಂದು.
ಹಲಸಿನ ಹಣ್ಣಿನ ದೋಸೆ ಮಾಡಲು ಬಳಸುವ ಪದಾರ್ಥಗಳು
15 ಬೀಜ ತೆಗೆದ ಹಲಸಿನ ಹಣ್ಣಿನ ತೊಳೆಗಳು
1 ಅಥವಾ ಎರಡು ಕಪ್ ಅಕ್ಕಿ
ಅರ್ಧ ಕಪ್ ತೆಂಗಿನ ತುರಿ
ಅರ್ಧ ಕಪ್ ಬೆಲ್ಲ (ನಿಮಗೆ ಎಷ್ಟು ಬೇಕೋ ಅಷ್ಟೇ ಬೆಲ್ಲ ಹಾಕಿ )
2-3 ಏಲಕ್ಕಿ
ಒಂದು ಚಿಟಿಕೆ ಉಪ್ಪು
ಮಾಡುವುದು ಹೇಗೆ?
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 3 ರಿಂದ 4 ಗಂಟೆಗಳ ಕಾಲ ಸರಿಯಾಗಿ ನೀರು ಹಾಕಿ ನೆನೆಸಿಡಿ. ಆಮೇಲೆ ಅದಕ್ಕೆ ಹಲಸಿನ ಹಣ್ಣಿನ ತೊಳೆಗಳು, ತೆಂಗಿನ ತುರಿ, ಬೆಲ್ಲ, ಏಲಕ್ಕಿ, ಒಂದು ಚಿಟಿಕೆ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಹುದುಗಲು ಇಡಬೇಕಾಗಿಲ್ಲ, ತಕ್ಷಣವೇ ದೋಸೆ ಮಾಡಬಹುದು.
ಕಾವಲಿಯನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ. ಹಿಟ್ಟನ್ನು ತವಾದ ಮೇಲೆ ಹರಡಿ. ತಕ್ಷಣ ಮುಚ್ಚಬೇಕು. ತೆಳ್ಳಗೆ ಅಥವಾ ದಪ್ಪದಾದ ದೋಸೆ ಮಾಡಬಹುದು.
ಸ್ವಲ್ಪ ಗುಲಾಬಿ ಅಥವಾ ಮಣ್ಣಿನ ಬಣ್ಣಕ್ಕೆ ಬಂದಾಗ ದೋಸೆ ತೆಗೆಯಿರಿ, ಸರಿಯಾಗಿ ತಿರುವಿ ಹಾಕಿ ಬೇಯಿಸಬೇಕಾಗುತ್ತದೆ. ಈ ದೋಸೆಗೆ ತುಪ್ಪ ಅಥವಾ ಚಟ್ನಿ ಹಾಕಿ ತಿಂದರೆ ಹೆಚ್ಚು ರುಚಿ.
ಬಂಗಾಳದಲ್ಲಿ ಗೋಹತ್ಯೆ ರಸ್ತೆ ನಮಾಜ್ ಮತ್ತು ಧ್ವನಿವರ್ಧಕಗಳ ಆರ್ಭಟಕ್ಕೆ ಬ್ರೇಕ್