Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಸಿಲಿನ ತಾಪಮಾನಕ್ಕೆ ಒಂದೇ ದಿನದಲ್ಲಿ 21 ಮಂದಿ ದುರ್ಮರಣ!
ಕರ್ನಾಟಕಪ್ರಮುಖ

ಬಿಸಿಲಿನ ತಾಪಮಾನಕ್ಕೆ ಒಂದೇ ದಿನದಲ್ಲಿ 21 ಮಂದಿ ದುರ್ಮರಣ!

Share
2 Min Read
SHARE

newsics.com/ನ್ಯೂಸಿಕ್ಸ್

ಬಿಸಿಲಿಗೆ ಸಿಲುಕಿ ಒಂದೇ ದಿನದಲ್ಲಿ ಬರೋಬ್ಬರಿ 21 ಮಂದಿ ಸಾವನ್ನಪ್ಪಿರುವ ಪ್ರಕರಣಗಳು ಆಂಧ್ರಪ್ರದೇಶದಲ್ಲಿ ವರದಿಯಾಗಿವೆ.

https://www.instagram.com/reel/DYrMG5SRxIn/?igsh=dWRpYmFkaXh6Yndo

ಮೇ 21 ರಂದು (ಗುರುವಾರ) 46 ದಿಗ್ರಿ ಸೆಲ್ಸಿಯಸ್​ ತಾಪಮಾನಕ್ಕೆ ಒಂದೇ ದಿನದಲ್ಲಿ ತೆಲಂಗಾಣ ರಾಜ್ಯಾದ್ಯಂತ ಬಿಸಿಲಿನ ರಣಾರ್ಭಟದಿಂದ 22 ಮಂದಿ ಅಸುನೀಗಿದ್ದರು. ಅದರ ಬೆನ್ನಲ್ಲೇ ಮೇ 22 (ಶುಕ್ರವಾರ) ಆಂಧ್ರ ಪ್ರದೇಶದಲ್ಲೂ ರಣಬಿಸಿಲಿಗೆ 21 ಮಂದಿ ಸಾವನ್ನಪ್ಪಿರುವುದು ತೆಲುಗು ರಾಜ್ಯಗಳಲ್ಲಿ ಆತಂಕ ಹೆಚ್ಚಿಸಿದೆ.

ಆಂಧ್ರದ ವಿಜಯವಾಡ ಜಿಲ್ಲೆಯೊಂದರಲ್ಲೇ 10 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಇಬ್ಬರ ಗುರುತು ಮಾತ್ರ ಪತ್ತೆಯಾಗಿದ್ದು, ಸಾಮಾನ್ಯ ಜನರಾಗಿದ್ದಾರೆ. ಉಳಿದಂತೆ 8 ಜನರು ಅಪರಿಚಿತ ಭಿಕ್ಷುಕರಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ.

ಸೀತಾರಾಮಪುರಂನ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 40 ವರ್ಷ ವಯಸ್ಸಿನ ಅಪರಿಚಿತ ಆ ವ್ಯಕ್ತಿಯನ್ನು ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಅಜೀತ್​ ಸಿಂಗ್​ ನಗರದ ನ್ಯೂ ರಾಜಾರಾಜೇಶ್ವರಿಪೇಟೆಯ ಆಸ್ಪತ್ರೆ ಗೇಟ್​ ತಲುಪುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮತ್ತೊಂದೆಡೆ ಹನುಮಾನಪೇಟೆಯ 50 ವರ್ಷದ ವ್ಯಕ್ತಿ ರಾಘವಯ್ಯಾ ಪಾರ್ಕ್ ಬಳಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ 65 ವರ್ಷದ ವೃದ್ಧ ಬೇಸಂಟ್​ ರಸ್ತೆಯಲ್ಲಿನ ಎಲ್​ಐಸಿ ಕಚೇರಿ ಬಳಿ ಕುಸಿದು ಬಿದ್ದು ಅಸುನೀಗಿದ್ದಾರೆ. ಈ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕಾಳೇಶ್ವರ ರಾವ್​ ಮಾರುಕಟ್ಟೆ ಬಳಿಯ ರಥಮ್​ ಕೇಂದ್ರದಲ್ಲಿದ್ದ ಮೂವರು ಭಿಕ್ಷುಕರು ಮೃತಪಟ್ಟಿದ್ದು ಅವರನ್ನು ಕಸ್ತೂರಿಬಾಯಿಪೇಟೆಯ ದಾವುಲೂರಿ ರಾಮಾರಾವ್​ (57) ಮತ್ತು ಗುಣದಾಲಾ ಗಾಂಧಿ ಬೊಮ್ಮ ಕೇಂದ್ರದ ನಿಮ್ಮಗಡ್ಡಾ ಶರತ್​ ಬಾಬು(45) ಎಂದು ಇವರು ರಸ್ತೆ ಬದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ 108 ಆಂಬ್ಯುಲೆನ್ಸ್​ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಅಷ್ಟರಲ್ಲೇ ಅಸುನೀಗಿರುವ ಬಗ್ಗೆ ವೈದ್ಯರು ಖಚಿತಪಡಿಸಿದರು. ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಶುಕ್ರವಾರದಂದು ಎಲ್ಲೂರು ಜಿಲ್ಲೆಯಲ್ಲಿ ಮೂವರು ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಒಬ್ಬರು ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಳ್ಳು ತಾಲೂಕಿನ ಪೂಲಪಲ್ಲಿ ಎಂಬಲ್ಲಿ ಮೂಲತಃ ಒಡಿಶಾದ ರಾಯಗಡ ಜಿಲ್ಲೆಯ 28 ವರ್ಷದ ಯುವಕ ಮೃತಪಟ್ದಿದ್ದಾರೆ.

ಕಾಕಿನಾಡ ಜಿಲ್ಲೆಯಲ್ಲೂ ಮೂವರು ಸಾವು: ಸರಪವರಂ ಪಂಚಾಯತ್​ ನ ಗುತ್ತಿಗೆ ಕಾರ್ಮಿಕ ಗುರ್ರಂ ಅಪ್ಪಣ್ಣ (37), ಗೊಲ್ಲಪ್ರೋಲು ತಾಲೂಕಿನ ಚೆಂದುರ್ತಿಯ ಪಿಲ್ಲಿ ರಮಣ (55), ಮತ್ತು ಪಿಠಾಪುರದ ಕೆ.ಅಪ್ಪಾರಾವ್ (40) ಬಿಸಿಲಿನ ಹೊಡೆತಕ್ಕೆ ಸಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಲ್ನಾಡು ಜಿಲ್ಲೆಯ ನರಸರಾಯಪೇಟೆ ಪಟ್ಟಣದಲ್ಲಿ ಬಿಸಿಲ ತಾಪಕ್ಕೆ ಇಬ್ಬರು ಅಪರಿಚಿತರು ಸಾವನ್ನಪ್ಪಿದ್ದಾರೆ. ಪಟ್ಟಣದ ಚಿತ್ರಾಲಯ ಕೇಂದ್ರದ ವಿಜೇತ ಸಿನಿಮಾ ಮಂದಿರದ ಬಳಿ ಮಾರುಕಟ್ಟೆ ಕೇಂದ್ರದಲ್ಲಿ ಅಪರಿಚಿತ ವೃದ್ಧ (60) ಮತ್ತು 25 -30 ವರ್ಷ ವಯಸ್ಸಿನ ಯುವಕ ಬಿಸಿಲಿನ ತೀವ್ರತೆಗೆ ಸಿಲುಕಿ ಅಸುನೀಗಿದ್ದಾರೆ.

ವಿನುಕೊಂಡ ಕ್ಷೇತ್ರದಲ್ಲಿ ವೃದ್ಧ ವೆಲಿನೇನಿ ನರಸಿಂಹ ರಾವ್ (69) ಬಿಸಿಲಿನ ಹೊಡೆತದಿಂದ ಮೃತಪಟ್ಟಿದ್ದಾರೆ. ಅನಕಪಲ್ಲಿ ಜಿಲ್ಲೆಯ ಚೋಡವರಂ ತಾಲೂಕಿನ ಗೋವಾಡದಲ್ಲಿ ಅಟ್ಟಾ ಲಕ್ಷ್ಮಿ ಎಂಬ ಮಹಿಳೆ ಬಿಸಿಲಿನ ಪ್ರತಾಪಕ್ಕೆ ಬಲಿಯಾಗಿದ್ದಾರೆ.

ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ

 

TAGGED:21 people die in a single day due to hot weather!
Share This Article
Facebook Twitter Copy Link Print
Previous Article ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ
Next Article ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಬಾಕ್ಸಿಂಗ್ ಕೋಚ್ ವಿರುದ್ಧ ಪೋಕ್ಸೋ ಕೇಸ್ ದಾಖಲು

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ಕರ್ನಾಟಕ

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?