Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ
ಪ್ರಮುಖಕರ್ನಾಟಕ

Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ

Share
1 Min Read
SHARE

ಬೆಂಗಳೂರು: ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ವೇದಿಕೆಯಾದ ‘ಸ್ವಿಗ್ಗಿ’ (Swiggy) ಇ ಕಾಮರ್ಸ್ ಆಯಪ್ ವಿರೋಧಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ತೀವ್ರ ಆಕ್ರೋಶ ಹೊರಹಾಕಿದೆ. ಹೋಟೆಲ್ ಉದ್ಯಮಿಗಳ ಬೆವರು ಹರಿದು ಗಳಿಸಿದ ಹಣವನ್ನು ಸ್ವಿಗ್ಗಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಸಂಘಟನೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಈ ಅನ್ಯಾಯವನ್ನು ತಡೆಯಬೇಕೆಂದು ಒತ್ತಾಯಿಸಿದೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದಿದ್ದರೆ, ರಾಜಧಾನಿಯಲ್ಲಿ ಸ್ವಿಗ್ಗಿ ಸೇವೆಗಳನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

 

ಸ್ವಿಗ್ಗಿ ಆಪ್‌ನ ಆಡಳಿತ ವೈಖರಿಯಿಂದಾಗಿ ನಗರದ ಹೋಟೆಲ್‌ಗಳು ದಿನನಿತ್ಯ ಭಾರೀ ಆರ್ಥಿಕ ನಷ್ಟ ಎದುರಿಸುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಚರ್ಚಿಸಲು ಮತ್ತು ಮುಂದಿನ ಕಾನೂನು ಹಾಗೂ ಹೋರಾಟದ ಹಾದಿಯ ಬಗ್ಗೆ ನಿರ್ಧರಿಸಲು ಮಂಗಳವಾರ (ಜು.28) ಹೋಟೆಲ್ ಮಾಲೀಕರ ಸಂಘದ ತುರ್ತು ಸಭೆ ಕರೆಯಲಾಗಿದೆ.

ಹೋಟೆಲ್ ಉದ್ಯಮಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು

  • ಮುನ್ಸೂಚನೆ ಇಲ್ಲದ ರಿಯಾಯಿತಿಗಳು: ಹೋಟೆಲ್ ಮಾಲೀಕರ ಪೂರ್ವಾನುಮತಿ ಅಥವಾ ಮಾಹಿತಿಯಿಲ್ಲದೆ ಸ್ವಿಗ್ಗಿ ಆಪ್‌ನಲ್ಲಿ ಗ್ರಾಹಕರಿಗೆ ವಿವಿಧ ಆಫರ್‌ಗಳನ್ನು ಘೋಷಿಸಲಾಗುತ್ತದೆ. ಉದಾಹರಣೆಗೆ, ಒಂದು ವಸ್ತುವಿನ ಮೇಲೆ ಮತ್ತೊಂದು ಉಚಿತ (BOGO) ಎಂದಾಗ, ಸ್ವಿಗ್ಗಿ ಕೇವಲ ಒಂದು ವಸ್ತುವಿನ ಹಣ ಮಾತ್ರ ಹೋಟೆಲ್‌ಗೆ ನೀಡುತ್ತಿದ್ದು, ಉಚಿತವಾಗಿ ಹೋದ ವಸ್ತುವಿನ ನಷ್ಟವನ್ನು ಹೋಟೆಲ್ ಮಾಲೀಕರೆ ಭರಿಸಬೇಕಾಗಿದೆ.
  • ರದ್ದಾದ ಆರ್ಡರ್‌ಗಳಿಂದ ನಷ್ಟ: ಗ್ರಾಹಕರು ಆಹಾರ ಆರ್ಡರ್ ಮಾಡಿ, ಹೋಟೆಲ್‌ನಲ್ಲಿ ಅದೆಲ್ಲವೂ ತಯಾರಾಗಿ ಡೆಲಿವರಿ ಸಿಬ್ಬಂದಿಯ ಕೈಸೇರಿದ ನಂತರವೂ ಕೆಲವು ಆರ್ಡರ್‌ಗಳು ರದ್ದಾಗುತ್ತವೆ. ಹೀಗೆ ರದ್ದಾದ ಆಹಾರ ಹೋಟೆಲ್‌ಗೆ ವಾಪಸ್ ಬಾರದೆ ನಷ್ಟವಾಗುತ್ತಿದೆ.
  • ಕಮಿಷನ್ ಕಡಿತ ಹಾಗೂ ವಿಳಂಬ ಪಾವತಿ: ಹೋಟೆಲ್‌ಗಳು ಅತ್ಯುತ್ತಮ ಗುಣಮಟ್ಟದ ಆಹಾರ ಒದಗಿಸಿದರೂ, ಅದಕ್ಕೆ ತಕ್ಕ ಹಣವು ನಿಗದಿತ ಸಮಯಕ್ಕೆ ಖಾತೆಗೆ ಜಮೆ ಆಗುತ್ತಿಲ್ಲ. ಜತೆಗೆ ಬಿಲ್ ಮೊತ್ತದಲ್ಲಿ ಅತಿಯಾದ ಕಮಿಷನ್ ಕಡಿತ ಮಾಡಿಕೊಳ್ಳಲಾಗುತ್ತಿದೆ.

ಬೆಂಗಳೂರಿನ ಹೋಟೆಲ್ ಮಾಲೀಕರು, ಮಂಗಳವಾರ ನಡೆಯಲಿರುವ ಸಭೆಯಲ್ಲಿ ಸ್ವಿಗ್ಗಿ ವಿರುದ್ಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಬೆಂಗಳೂರಿನಾದ್ಯಂತ ಸ್ವಿಗ್ಗಿ ಸೇವೆಗಳಿಗೆ ಸಂಪೂರ್ಣ ಬ್ರೇಕ್ ಬೀಳುವ ಸಾಧ್ಯತೆಯಿದೆ.

Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು

TAGGED:#Swiggy #Hotel #Food #news #newsics
Share This Article
Facebook Twitter Copy Link Print
Previous Article Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು
Next Article Spice Price Hike ಗಗನಕ್ಕೇರಿದ ಮಸಾಲೆ ಪದಾರ್ಥಗಳ ಬೆಲೆ, ಕಂಗಾಲಾದ ಜನಸಾಮಾನ್ಯರು

Popular Posts

Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

2 Min Read

Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ

2 Min Read

Spice Price Hike ಗಗನಕ್ಕೇರಿದ ಮಸಾಲೆ ಪದಾರ್ಥಗಳ ಬೆಲೆ, ಕಂಗಾಲಾದ ಜನಸಾಮಾನ್ಯರು

2 Min Read

Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ

1 Min Read

You Might Also Like

ಪ್ರಮುಖCrimeದೇಶ

Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು

2 Min Read
ಪ್ರಮುಖCrimeದೇಶ

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

1 Min Read
ಕರ್ನಾಟಕ

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read
ಕರ್ನಾಟಕದೇಶ

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?