Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ
ಪ್ರಮುಖCrimeದೇಶ

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

Share
1 Min Read
SHARE

newsics.com | ನ್ಯೂಸಿಕ್ಸ್

ವಾರಣಾಸಿ: ತರಗತಿಯಲ್ಲಿ ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ಪ್ಲೇ ಸ್ಕೂಲ್ ಶಿಕ್ಷಕಿಯೊಬ್ಬಳು, 5 ವರ್ಷದ ಕಂದಮ್ಮನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟು ವಿಕೃತ ಕ್ರೌರ್ಯ ಮೆರೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೆಳಕಿಗೆ ಬಂದಿದೆ.

ವಾರಣಾಸಿಯ ಆಕಥಾ ಪ್ರದೇಶದಲ್ಲಿರುವ ‘ಸೆರೆನ್ ಸೋನಿ ಪ್ಲೇ ಸ್ಕೂಲ್’ನಲ್ಲಿ ಜುಲೈ 24 ರಂದು ಈ ಭೀಕರ ಕೃತ್ಯ ನಡೆದಿದೆ. ಬಾಲಕನು ತರಗತಿಯಲ್ಲಿ ಶೌಚಾಲಯಕ್ಕೆ ತೆರಳಲು ಶಿಕ್ಷಕಿಯಲ್ಲಿ ಅನುಮತಿ ಕೋರಿದ್ದನು. ಆದರೆ ಶಿಕ್ಷಕಿ ಅನುಮತಿ ನಿರಾಕರಿಸಿದ ಕಾರಣ, ಮಗು ಭಯದಿಂದ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದೆ.

ಇದರಿಂದ ತೀವ್ರ ಆಕ್ರೋಶಗೊಂಡ ಶಿಕ್ಷಕಿ, ಮಗುವನ್ನು ಪ್ರತ್ಯೇಕ ಕೋಣೆಗೆ ಎಳೆದುಕೊಂಡು ಹೋಗಿ ಗ್ಯಾಸ್ ಸ್ಟೌವ್‌ನಲ್ಲಿ ಚಾಕುವನ್ನು ಕಾಯಿಸಿ ಬಾಲಕನ ಖಾಸಗಿ ಭಾಗಕ್ಕೆ ಸುಟ್ಟಿದ್ದಾಳೆ. ಅಲ್ಲದೆ, ಈ ವಿಚಾರವನ್ನು ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ದೈಹಿಕ ಹಲ್ಲೆ ಕೂಡ ನಡೆಸಿದ್ದಾಳೆ.

ಮನೆಗೆ ಮರಳಿದ ಮಗು ನೋವಿನಿಂದ ಅಳುತ್ತಾ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ಪೋಷಕರಿಗೆ ವಿವರಿಸಿದೆ. ತಕ್ಷಣ ಆತಂಕಗೊಂಡ ಪೋಷಕರು ಶಾಲೆಯ ಪ್ರಾಂಶುಪಾಲೆ ಹೇಮಲತಾ ಸಿಂಗ್ ಅವರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲೆ ನ್ಯಾಯ ಒದಗಿಸುವ ಬದಲು ಪೋಷಕರಿಗೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ.

ನೊಂದ ಪೋಷಕರು ಕೂಡಲೇ ಲಾಲ್‌ಪುರ್-ಪಾಂಡೇಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಸಿಂಗ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

 

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

TAGGED:#Uttar pradesh #Play home #Children #news #newsics
Share This Article
Facebook Twitter Copy Link Print
Previous Article Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ
Next Article Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು

Popular Posts

Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ

1 Min Read

Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು

2 Min Read

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

1 Min Read

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read

You Might Also Like

ಕರ್ನಾಟಕದೇಶ

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read
ದೇಶ

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read
ಪ್ರಮುಖಮನರಂಜನೆ

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read
ದೇಶವಿದೇಶ

PM on Foreign Policy ಒಂದೇ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು: ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕ ಅಭಿಯಾನಕ್ಕೆ ವೇಗ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?