newsics.com | ನ್ಯೂಸಿಕ್ಸ್
ಪ್ರಪಂಚದಲ್ಲಿ ಮೋಸ ಮಾಡುವವರಿಗಿಂತ ಮೋಸ ಹೋಗುವವರೇ ಹೆಚ್ಚು ಎಂಬ ಮಾತಿದೆ. ಹಾಗಾದರೆ, ಯಾವ ಸ್ವಭಾವದ ಜನರು ಅತ್ಯಂತ ಸುಲಭವಾಗಿ ವಂಚಕರ ಬಲೆಗೆ ಬೀಳುತ್ತಾರೆ ಎಂಬ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ. ಕೆಲವೊಂದು ನಿರ್ದಿಷ್ಟ ಅಭ್ಯಾಸ ಹಾಗೂ ದೌರ್ಬಲ್ಯಗಳನ್ನು ಹೊಂದಿರುವ ವ್ಯಕ್ತಿಗಳು ಕುತಂತ್ರಿಗಳ ಸ್ವಾರ್ಥಕ್ಕೆ ಬೇಗನೆ ಬಲಿಯಾಗುತ್ತಾರೆ. ನಿಮ್ಮ ಜೀವನದಲ್ಲೂ ಇಂತಹ ಗುಣಗಳಿದ್ದರೆ ತಕ್ಷಣ ಬದಲಿಸಿಕೊಳ್ಳುವುದು ಬುದ್ಧಿವಂತಿಕೆ.
ಚಾಣಕ್ಯರ ನೀತಿಯ ಪ್ರಕಾರ ಸುಲಭವಾಗಿ ಮೋಸ ಹೋಗುವ ವ್ಯಕ್ತಿಗಳ ಲಕ್ಷಣಗಳು ಹೀಗಿವೆ.
- ಅತಿಯಾದ ಮುಗ್ಧತೆ: ಮುಗ್ಧ ಮನಸ್ಸಿನ ಜನರನ್ನು ವಂಚಿಸುವುದು ಬಹಳ ಸುಲಭ. ಕುತಂತ್ರಿಗಳು ಇಂತಹವರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಮುಗ್ಧರು ಎಲ್ಲರೂ ತಮ್ಮಂತೆಯೇ ಪ್ರಾಮಾಣಿಕರೆಂದು ಭಾವಿಸಿ ಮೋಸಹೋಗುತ್ತಾರೆ.
- ಕುರುಡು ನಂಬಿಕೆ: ಯಾರೇ ಸಿಹಿ ಮಾತುಗಳನ್ನಾಡಿದರೂ ಅವರನ್ನು ಯೋಚಿಸದೆ ಕುರುಡಾಗಿ ನಂಬುವವರು ಬೇಗನೆ ಬಲೆಗೆ ಬೀಳುತ್ತಾರೆ. ಈ ಅತಿಯಾದ ನಂಬಿಕೆಯೇ ಮುಂದೆ ದೊಡ್ಡ ನೋವಿಗೆ ಕಾರಣವಾಗುತ್ತದೆ.
- ಭಾವನಾತ್ಮಕ ಸ್ವಭಾವ: ಪ್ರಾಯೋಗಿಕವಾಗಿ ಯೋಚಿಸದೆ ಪ್ರತಿಯೊಂದಕ್ಕೂ ಭಾವನಾತ್ಮಕವಾಗಿ ಸ್ಪಂದಿಸುವವರನ್ನು ಮೋಸಗಾರರು ‘ಎಮೋಷನಲ್ ಬ್ಲ್ಯಾಕ್‌ಮೇಲ್’ ಮಾಡಿ ಸುಲಭವಾಗಿ ವಂಚಿಸುತ್ತಾರೆ.
- ಸುಳ್ಳು ಹೊಗಳಿಕೆಗೆ ಮರುಳಾಗುವುದು: ವಂಚಕರು ಸುಳ್ಳು ಹೊಗಳಿಕೆ ಮಾತಿನಿಂದಲೇ ಜನರನ್ನು ಮರಳು ಮಾಡುತ್ತಾರೆ. ಈ ಕಪಟ ಸ್ತುತಿಗೆ ಮರುಳಾಗಿ ಹಿಗ್ಗುವವರು ಸುಲಭವಾಗಿ ಮೋಸ ಹೋಗುತ್ತಾರೆ.
- ಇತರರ ಮೇಲೆ ಅವಲಂಬನೆ: ಪ್ರತಿಯೊಂದು ನಿರ್ಧಾರಕ್ಕೂ ಇವರನ್ನು ಅಥವಾ ಇತರರನ್ನು ಸಂಪೂರ್ಣವಾಗಿ ಅವಲಂಬಿಸುವವರು ಬೇರೆಯವರ ಕೈಗೊಂಬೆಯಾಗುತ್ತಾರೆ. ಸ್ವಾವಲಂಬನೆ ಇಲ್ಲದಿರುವುದು ವಂಚನೆಗೆ ದಾರಿ ಮಾಡಿಕೊಡುತ್ತದೆ.