newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರೇಮಾ ಅವರಿಗೆ ನಿವಾಸದ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಿಎಂ ಭೇಟಿಯಾಗದ ಹಿನ್ನೆಲೆಯಲ್ಲಿ ನಟಿ ಅಲ್ಲಿಂದಲೇ ಹಿಂತಿರುಗಬೇಕಾಯಿತು. ಈ ಇಡೀ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೃಷ್ಣಾ ಕಚೇರಿಗೆ ಹೋಗುವಂತೆ ಭದ್ರತಾ ಸಿಬ್ಬಂದಿ ಸಲಹೆ
ವೈಯಕ್ತಿಕ ಅಜೆಂಡಾದೊಂದಿಗೆ ಸಿಎಂ ಡಿಕೆಶಿ ಅವರ ಮನೆಗೆ ಬಂದಿದ್ದ ನಟಿಗೆ ಅಲ್ಲಿನ ಸೆಕ್ಯೂರಿಟಿ ತಪಾಸಣೆ ವೇಳೆ ನಿರಾಸೆ ಎದುರಾಗಿದೆ. ಗೇಟ್‌ನಲ್ಲಿದ್ದ ಪೊಲೀಸರು ಗಣ್ಯರ ಭೇಟಿಯ ನಿಯಮಾವಳಿಗಳನ್ನು ಉಲ್ಲೇಖಿಸಿ, ಮನೆಯೊಳಗೆ ಪ್ರವೇಶಿಸಲು ಬಿಟ್ಟಿಲ್ಲ. ಬದಲಿಗೆ ಮುಖ್ಯಮಂತ್ರಿಗಳ ಅಧಿಕೃತ ಭೇಟಿಗಾಗಿ ಸಾರ್ವಜನಿಕರನ್ನು ಭೇಟಿಯಾಗುವ ಗೃಹ ಕಚೇರಿ ‘ಕೃಷ್ಣಾ’ಗೆ ತೆರಳುವಂತೆ ನಟಿ ಪ್ರೇಮಾ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಖ್ಯಾತ ನಟಿ ಪ್ರೇಮಾ ಅವರು ಸಡನ್ ಆಗಿ ಸಿಎಂ ಭೇಟಿಗೆ ಮುಂದಾಗಿದ್ದು ಯಾಕೆ? ಚಿತ್ರರಂಗದ ಯಾವುದಾದರೂ ಮಹತ್ವದ ವಿಷಯವೇ ಅಥವಾ ಅವರ ಸ್ವಂತ ಕೆಲಸವೇ ಎಂಬುದು ಇನ್ನು ರಹಸ್ಯವಾಗಿಯೇ ಉಳಿದಿದೆ. ಇತ್ತೀಚಿನ ಈ ಬೆಳವಣಿಗೆಯ ಬಗ್ಗೆ ನಟಿ ಪ್ರೇಮಾ ಅವರಾಗಲಿ ಅಥವಾ ಮುಖ್ಯಮಂತ್ರಿಯವರ ಕಾರ್ಯಾಲಯವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್