Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Water Bottle Incident ನೀರಿನ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಮಹಿಳೆ ಸ್ಥಿತಿ ಗಂಭೀರ: ಜ್ಯುವೆಲ್ಲರಿ ಶಾಪ್‌ನಲ್ಲಾದ ಘೋರ ದುರಂತದ ವಿಡಿಯೋ ನೋಡಿ
ಪ್ರಮುಖದೇಶ

Water Bottle Incident ನೀರಿನ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಮಹಿಳೆ ಸ್ಥಿತಿ ಗಂಭೀರ: ಜ್ಯುವೆಲ್ಲರಿ ಶಾಪ್‌ನಲ್ಲಾದ ಘೋರ ದುರಂತದ ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಆಭರಣ ಮಳಿಗೆಯಲ್ಲಿ ನಡೆದಿದ್ದೇನು?ಲಾಕ್ ಆಗಿದ್ದ ಬಾಟಲಿಯಲ್ಲಿ ಕೆಮಿಕಲ್ ಬಂದಿದ್ದು ಹೇಗೆ?ಉದ್ದೇಶಪೂರ್ವಕ ಸಂಚು? ತನಿಖೆಯಲ್ಲಿ ಮೂಡಿದ ಅನುಮಾನ

ಉತ್ತರ ಪ್ರದೇಶ: ಸೀಲ್ ಮಾಡಲಾಗಿದ್ದ ನೀರಿನ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಹಾಪರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ನಡೆದಿದೆ. ಸದ್ಯ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಾಧಿತ ಮಹಿಳೆಯನ್ನು ರಿಯಾ ಎಂದು ಗುರುತಿಸಲಾಗಿದೆ.

ಆಭರಣ ಮಳಿಗೆಯಲ್ಲಿ ನಡೆದಿದ್ದೇನು?

ರಿಯಾ ಅವರು ಒಡವೆಗಳನ್ನು ಖರೀದಿಸುವ ಉದ್ದೇಶದಿಂದ ಅರ್ಜುನ್ ನಗರದ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ತೀವ್ರ ಬಾಯಾರಿಕೆಯಾದ ಕಾರಣ ಕುಡಿಯಲು ನೀರು ಕೇಳಿದ್ದಾರೆ. ಆಭರಣ ಮಳಿಗೆಯ ನೌಕರರು ತಕ್ಷಣವೇ ಪಕ್ಕದಲ್ಲಿದ್ದ ಸ್ವೀಟ್ ಸ್ಟಾಲ್‌ನಿಂದ ತಂಪಾಗಿದ್ದ, ಸೀಲ್ ಆಗಿದ್ದ ನೀರಿನ ಬಾಟಲಿಯೊಂದನ್ನು ತಂದುಕೊಟ್ಟಿದ್ದಾರೆ.

ಆದರೆ, ರಿಯಾ ಅವರು ಬಾಟಲಿಯ ಸೀಲ್ ಮುರಿದು ಒಂದು ಗುಟುಕು ಗಂಟಲಿಗಿಳಿಸುತ್ತಿದ್ದಂತೆ ಹೊಟ್ಟೆ ಮತ್ತು ಗಂಟಲಿನಲ್ಲಿ ತೀವ್ರವಾದ ಉರಿ ಉಂಟಾಗಿದೆ. ಬಾಟಲಿಯಲ್ಲಿದ್ದ ದ್ರವ ಮಾರಕವಾಗಿದೆ ಎಂಬುದು ತಿಳಿಯುತ್ತಿದ್ದಂತೆ ಅವರು ಅಂಗಡಿಯಿಂದ ಹೊರಗೆ ಓಡಿಬಂದು ದ್ರವವನ್ನು ಉಗುಳಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಸುಸಜ್ಜಿತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಲಾಕ್ ಆಗಿದ್ದ ಬಾಟಲಿಯಲ್ಲಿ ಕೆಮಿಕಲ್ ಬಂದಿದ್ದು ಹೇಗೆ?

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜ್ಯುವೆಲ್ಲರಿ ಮತ್ತು ಸಿಹಿತಿಂಡಿ ಅಂಗಡಿಯ ಮಾಲೀಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. “ನಾವು ತಂದಿದ್ದ ನೀರಿನ ಬಾಟಲಿಗಳ ಹೊಸ ಪ್ಯಾಕ್‌ನಿಂದಲೇ ಇದನ್ನು ತೆಗೆದುಕೊಡಲಾಗಿತ್ತು. ಅದರ ಮುಚ್ಚಳ ಲಾಕ್ ಆಗಿತ್ತು ಮತ್ತು ನೋಡಲು ಸಾಮಾನ್ಯ ನೀರಿನ ಬಾಟಲಿಯಂತೆಯೇ ಇತ್ತು. ಅದರಲ್ಲಿ ಆಸಿಡ್ ಇರಬಹುದು ಎಂಬ ಸಣ್ಣ ಶಂಕೆ ಕೂಡ ನಮಗಿರಲಿಲ್ಲ” ಎಂದು ಸ್ವೀಟ್ ಸ್ಟಾಲ್ ಮಾಲೀಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಉದ್ದೇಶಪೂರ್ವಕ ಸಂಚು? ತನಿಖೆಯಲ್ಲಿ ಮೂಡಿದ ಅನುಮಾನ

ಸೀಲ್ ಆಗಿದ್ದ ಕುಡಿಯುವ ನೀರಿನ ಬಾಟಲಿಯೊಳಗೆ ಆಸಿಡ್ ಸೇರಿದ್ದು ಹೇಗೆ ಎಂಬುದು ಈಗ ಪೊಲೀಸರಿಗೆ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಇದು ವಾಟರ್ ಪ್ಲಾಂಟ್‌ನ (ಉತ್ಪಾದನಾ ಘಟಕ) ದೊಡ್ಡ ನಿರ್ಲಕ್ಷ್ಯವೇ ಅಥವಾ ಸಾಗಾಣಿಕೆ ವೇಳೆ ನಡೆದ ಅದಲು-ಬದಲೇ? ಇಲ್ಲವೇ ರಿಯಾ ಅವರನ್ನೇ ಗುರಿಯಾಗಿಸಿಕೊಂಡು ಯಾರಾದರೂ ಮಾಡಿರುವ ಹಳೇ ದ್ವೇಷದ ಸಂಚೇ? ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಜ್ಯುವೆಲ್ಲರಿ ಶಾಪ್‌ನ ಸಿಸಿಟಿವಿ ದೃಶ್ಯಗಳನ್ನು ಜಪ್ತಿ ಮಾಡಿರುವ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಕಾಯುತ್ತಿದ್ದಾರೆ. ಆ ವರದಿ ಬಂದ ನಂತರವೇ ಈ ರಹಸ್ಯ ಬಯಲಾಗಬೇಕಿದೆ.

 

#BREAKING – Accused of forcing a young woman to drink acid in Hapur, Uttar Pradesh. When she asked for water, the shopkeeper gave her a bottle of acid. Acid was found in the Bisleri bottle. The young woman is in critical condition after drinking acid. The acid drinking incident… pic.twitter.com/Yl1Tu4blUZ

— NEWS WALA (@NEWSWALApy) July 11, 2026

 

Sandalwood ಡಿಕೆಶಿ ಭೇಟಿಯಾಗಲು ಬಂದ ನಟಿ ಪ್ರೇಮಾಗೆ ನಿರಾಸೆ; ಗೇಟ್‌ನಲ್ಲೇ ತಡೆದ ಸೆಕ್ಯೂರಿಟಿ

TAGGED:#Uttar pradesh #acid #Jewellery Shop #Women #hospitalized #Newsics
Share This Article
Facebook Twitter Copy Link Print
Previous Article Sandalwood ಡಿಕೆಶಿ ಭೇಟಿಯಾಗಲು ಬಂದ ನಟಿ ಪ್ರೇಮಾಗೆ ನಿರಾಸೆ; ಗೇಟ್‌ನಲ್ಲೇ ತಡೆದ ಸೆಕ್ಯೂರಿಟಿ
Next Article DK Shivakumar ಹೆಣ್ಣು ಆನೆ ದಾನ ಮಾಡಿ: ಕೇರಳ ಸರ್ಕಾರಕ್ಕೆ ಪತ್ರ ಬರೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Popular Posts

Viral Video ಮನೆಯಲ್ಲಿ ಮದುವೆ ಕಿರಿಕಿರಿ: ಮದುವೆ ಒತ್ತಡಕ್ಕೆ ತಲೆ ಪೂರ್ತಿ ಬೋಳಿಸಿಕೊಂಡ ಯುವತಿ-ವಿಡಿಯೋ ನೋಡಿ

1 Min Read

DK Shivakumar ಹೆಣ್ಣು ಆನೆ ದಾನ ಮಾಡಿ: ಕೇರಳ ಸರ್ಕಾರಕ್ಕೆ ಪತ್ರ ಬರೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

2 Min Read

Water Bottle Incident ನೀರಿನ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಮಹಿಳೆ ಸ್ಥಿತಿ ಗಂಭೀರ: ಜ್ಯುವೆಲ್ಲರಿ ಶಾಪ್‌ನಲ್ಲಾದ ಘೋರ ದುರಂತದ ವಿಡಿಯೋ ನೋಡಿ

2 Min Read

Sandalwood ಡಿಕೆಶಿ ಭೇಟಿಯಾಗಲು ಬಂದ ನಟಿ ಪ್ರೇಮಾಗೆ ನಿರಾಸೆ; ಗೇಟ್‌ನಲ್ಲೇ ತಡೆದ ಸೆಕ್ಯೂರಿಟಿ

1 Min Read

You Might Also Like

ಪ್ರಮುಖಮನರಂಜನೆವಿದೇಶ

Hollywood ‘ಜುರಾಸಿಕ್ ಪಾರ್ಕ್’ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ

1 Min Read
ಪ್ರಮುಖಕರ್ನಾಟಕ

HD Revanna ಲೈಂಗಿಕ ಕಿರುಕುಳ ಕೇಸ್: ಹೆಚ್.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್

1 Min Read
ಪ್ರಮುಖCrimeದೇಶ

Tragedy ಮೊಬೈಲ್‌ನಿಂದ ತಲೆಗೆ ಹೊಡೆದ ಪತ್ನಿ: ಚಿಕಿತ್ಸೆ ಪಡೆದು ಮನೆಗೆ ಬಂದ ಗಂಡ ಕೆಲವೇ ಗಂಟೆಗಳಲ್ಲಿ ಸಾ*ವು

1 Min Read
ಕರ್ನಾಟಕದೇಶಪ್ರಮುಖಮನರಂಜನೆ

S Janaki ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಜಾನಕಿ ಅಸ್ಥಿ ವಿಸರ್ಜನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?