Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Bidadi Township ಬಿಡದಿಯಲ್ಲಿ ಮಿತಿಮೀರಿದ ಒತ್ತುವರಿ ಗಲಾಟೆ; ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು
ಪ್ರಮುಖಕರ್ನಾಟಕ

Bidadi Township ಬಿಡದಿಯಲ್ಲಿ ಮಿತಿಮೀರಿದ ಒತ್ತುವರಿ ಗಲಾಟೆ; ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು

Share
1 Min Read
SHARE

newsics.com | ನ್ಯೂಸಿಕ್ಸ್

ರಾಮನಗರ: ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ನಿರ್ಮಾಣದ ವಿಚಾರದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಯ ಕಿಚ್ಚು ಜೋರಾಗುತ್ತಿದ್ದು, ಸರ್ಕಾರದ ಜಮೀನು ಒತ್ತುವರಿ ನಿರ್ಧಾರದ ವಿರುದ್ಧ ತಿರುಗಿಬಿದ್ದಿರುವ ರೈತರು, ಇದೀಗ ಸರ್ವೆಗೆ ಬಂದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಹೊಡೆದಿದ್ದಾರೆ.

ಬಿಡದಿ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ರೈತರ ತೀವ್ರ ವಿರೋಧದ ನಡುವೆಯೂ ಜೆಎಂಸಿ (JMC) ಸರ್ವೆಗೆ ಮುಂದಾದ ಜಿಬಿಡಿಎ (GBDA) ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ನೀಡಿರುವ ಘಟನೆ ನಡೆದಿದೆ.

ಯಾವುದೇ ಕಾರಣಕ್ಕೂ ಜಮೀನು ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಪಟ್ಟು ಹಿಡಿದಿದ್ದರು. “ಬಲವಂತವಾಗಿ ಸರ್ವೇ ಮಾಡಲು ಮುಂದಾದರೆ ಪೊರಕೆಯಿಂದ ಹೊಡೆಯಬೇಕಾಗುತ್ತದೆ” ಎಂದು ಅಧಿಕಾರಿಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಲು ಮುಂದಾದಾಗ, ಆಕ್ರೋಶಗೊಂಡ ರೈತ ಮಹಿಳೆಯರು ಪೊಲೀಸರ ಸಮ್ಮುಖದಲ್ಲೇ ಅಧಿಕಾರಿಗಳ ಕಾರನ್ನು ಸುತ್ತುವರಿದು ಪೊರಕೆಯಿಂದ ಹೊಡೆದು ರೌದ್ರಾವತಾರ ತಾಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಎಷ್ಟೇ ತಡೆಯಲು ಯತ್ನಿಸಿದರೂ ರೈತರ ಆಕ್ರೋಶದ ಕಟ್ಟೆ ಮುಗಿಸಲು ಸಾಧ್ಯವಾಗಲಿಲ್ಲ.

ಇನ್ನು, ಈ ಘಟನೆ ಬೆನ್ನಲ್ಲೇ ಬಿಡದಿಯ ಮಂಡಲಹಳ್ಳಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀನಿವಾಸ ಗೌಡ ಅವರು ಭೇಟಿ ನೀಡಿ, ಉದ್ರಿಕ್ತ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್ ಹಾಗೂ ಶ್ರೀನಿವಾಸ್ ಅವರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿರುವ ಎಸ್ಪಿ, ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆ ಹಲ್ಲೆ ನಡೆಸಿದರೆ ಪೊಲೀಸರು ಸುಮ್ಮನೆ ಕೂರುವುದಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ” ಎಂದು ಎಸ್ಪಿ ಶ್ರೀನಿವಾಸ ಗೌಡ ರೈತರಿಗೆ ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

 

Pocso Case ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್

TAGGED:#Bidadi township #farmers #ramnagar #jmc survey #newsics
Share This Article
Facebook Twitter Copy Link Print
Previous Article Home Loan ಸ್ವಂತ ಮನೆ ಕನಸು ಕಾಣೋ ಮುನ್ನ ಈ ‘FOIR’ ರೂಲ್ಸ್ ತಿಳಿಯಿರಿ; ಸಂಬಳದ ಅರ್ಧ ಭಾಗ ಇಎಂಐಗೆ ಹೋದ್ರೆ ಲೋನ್ ಸಿಗಲ್ಲ
Next Article Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್

Popular Posts

HD Revanna ಲೈಂಗಿಕ ಕಿರುಕುಳ ಕೇಸ್: ಹೆಚ್.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್

1 Min Read

Tragedy ಮೊಬೈಲ್‌ನಿಂದ ತಲೆಗೆ ಹೊಡೆದ ಪತ್ನಿ: ಚಿಕಿತ್ಸೆ ಪಡೆದು ಮನೆಗೆ ಬಂದ ಗಂಡ ಕೆಲವೇ ಗಂಟೆಗಳಲ್ಲಿ ಸಾ*ವು

1 Min Read

S Janaki ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಜಾನಕಿ ಅಸ್ಥಿ ವಿಸರ್ಜನೆ

2 Min Read

Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Home Loan ಸ್ವಂತ ಮನೆ ಕನಸು ಕಾಣೋ ಮುನ್ನ ಈ ‘FOIR’ ರೂಲ್ಸ್ ತಿಳಿಯಿರಿ; ಸಂಬಳದ ಅರ್ಧ ಭಾಗ ಇಎಂಐಗೆ ಹೋದ್ರೆ ಲೋನ್ ಸಿಗಲ್ಲ

2 Min Read
ಪ್ರಮುಖCrimeಕರ್ನಾಟಕ

Pocso Case ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್

1 Min Read
ಪ್ರಮುಖಕರ್ನಾಟಕ

Road Mishap ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಖಾಸಗಿ ಬಸ್; ಚಾಲಕ ಸೇರಿ ಇಬ್ಬರು ಸಾ*ವು

1 Min Read
ಪ್ರಮುಖCrimeಕರ್ನಾಟಕ

Tragedy ಪ್ರೀತಿಸಿ ಮದುವೆಯಾಗಿದ್ದ ಯುವತಿಯ ದಾರುಣ ಅಂತ್ಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?