Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Home Loan ಸ್ವಂತ ಮನೆ ಕನಸು ಕಾಣೋ ಮುನ್ನ ಈ ‘FOIR’ ರೂಲ್ಸ್ ತಿಳಿಯಿರಿ; ಸಂಬಳದ ಅರ್ಧ ಭಾಗ ಇಎಂಐಗೆ ಹೋದ್ರೆ ಲೋನ್ ಸಿಗಲ್ಲ
ಪ್ರಮುಖಲೈಫ್‌ಸ್ಟೈಲ್

Home Loan ಸ್ವಂತ ಮನೆ ಕನಸು ಕಾಣೋ ಮುನ್ನ ಈ ‘FOIR’ ರೂಲ್ಸ್ ತಿಳಿಯಿರಿ; ಸಂಬಳದ ಅರ್ಧ ಭಾಗ ಇಎಂಐಗೆ ಹೋದ್ರೆ ಲೋನ್ ಸಿಗಲ್ಲ

Share
2 Min Read
SHARE

newsics.com | ನ್ಯೂಸಿಕ್ಸ್

Contents
50 ಲಕ್ಷ ರೂ. ಗೃಹ ಸಾಲಕ್ಕೆ ಇಎಂಐ ಲೆಕ್ಕಾಚಾರ ಇಲ್ಲಿದೆಲೋನ್ ಸಿಗಲು ನಿಮ್ಮ ಸಂಬಳ ಎಷ್ಟಿರಬೇಕು?ಸಾಲ ಪಡೆಯುವ ಮುನ್ನ ಇರಲಿ ಎಚ್ಚರ

ಬೆಂಗಳೂರು: ನೀವು ಸ್ವಂತ ಮನೆ ಅಥವಾ ಫ್ಲಾಟ್ ಖರೀದಿಸಲು 50 ಲಕ್ಷ ರೂಪಾಯಿ ಗೃಹ ಸಾಲ (Home Loan) ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಮಾಸಿಕ ಸಂಬಳ ಎಷ್ಟು ಇರಬೇಕು ಮತ್ತು ಬ್ಯಾಂಕ್‌ಗಳು ಸಾಲ ಮಂಜೂರು ಮಾಡುವ ಮುನ್ನ ನಿಮ್ಮ ಆದಾಯದಲ್ಲಿ ಏನನ್ನು ಲೆಕ್ಕ ಹಾಕುತ್ತವೆ ಎಂಬ ಸಂಪೂರ್ಣ ಹಣಕಾಸಿನ ಸೂತ್ರ ಇಲ್ಲಿದೆ.

ಬ್ಯಾಂಕ್‌ಗಳು ಸಾಲ ನೀಡುವ ಮುನ್ನ ಮುಖ್ಯವಾಗಿ ಗ್ರಾಹಕರ ಮರುಪಾವತಿ ಸಾಮರ್ಥ್ಯವನ್ನು ಅಳೆಯಲು FOIR (Fixed Obligation-to-Income Ratio) ಅಂದರೆ ‘ಸ್ಥಿರ ಆದಾಯದ ಅನುಪಾತ’ ಎಂಬ ಕಠಿಣ ನಿಯಮವನ್ನು ಅನ್ವಯಿಸುತ್ತವೆ. ಈ ನಿಯಮದ ಪ್ರಕಾರ, ನಿಮ್ಮ ಒಟ್ಟು ಇಎಂಐಗಳು (ಹೋಮ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ) ನಿಮ್ಮ ಒಟ್ಟು ಆದಾಯದ ಶೇಕಡಾ 50 ಕ್ಕಿಂತ ಹೆಚ್ಚಿರಬಾರದು. ನಿಮ್ಮ ಜೀವನೋಪಾಯದ ಖರ್ಚುಗಳಿಗೆ ಸಂಬಳದ ಅರ್ಧದಷ್ಟು ಭಾಗ ಉಳಿಯಲೇಬೇಕು ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ.

50 ಲಕ್ಷ ರೂ. ಗೃಹ ಸಾಲಕ್ಕೆ ಇಎಂಐ ಲೆಕ್ಕಾಚಾರ ಇಲ್ಲಿದೆ

ಬಡ್ಡಿ ದರ ಹಾಗೂ ಸಾಲದ ಅವಧಿಯ ಆಧಾರದ ಮೇಲೆ ನೀವು ಮಾಸಿಕ ಪಾವತಿಸಬೇಕಾದ ಅಂದಾಜು ಇಎಂಐ ಮೊತ್ತ ಹೀಗಿರಲಿದೆ.

1. 30 ವರ್ಷಗಳ ಸಾಲದ ಅವಧಿಗೆ

  • ಶೇ. 8 ರ ಬಡ್ಡಿದರ ಇದ್ದರೆ: ಮಾಸಿಕ ಇಎಂಐ ಅಂದಾಜು ₹36,688
  • ಶೇ. 9 ರ ಬಡ್ಡಿದರ ಇದ್ದರೆ: ಮಾಸಿಕ ಇಎಂಐ ಅಂದಾಜು ₹40,231

2. 35 ವರ್ಷಗಳ ದೀರ್ಘಾವಧಿಗೆ

  • ಶೇ. 8 ರ ಬಡ್ಡಿದರ ಇದ್ದರೆ: ಮಾಸಿಕ ಇಎಂಐ ಅಂದಾಜು ₹35,514
  • ಶೇ. 9 ರ ಬಡ್ಡಿದರ ಇದ್ದರೆ: ಮಾಸಿಕ ಇಎಂಐ ಅಂದಾಜು ₹39,200

ಲೋನ್ ಸಿಗಲು ನಿಮ್ಮ ಸಂಬಳ ಎಷ್ಟಿರಬೇಕು?

ಹಣಕಾಸು ತಜ್ಞರ ಪ್ರಕಾರ, ನಿಮ್ಮ ಒಟ್ಟು ಇಎಂಐಗಳು (ಹೋಮ್ ಲೋನ್, ಕ್ರೆಡಿಟ್ ಕಾರ್ಡ್, ಕಾರ್ ಲೋನ್ ಇತ್ಯಾದಿ ಎಲ್ಲವೂ ಸೇರಿ) ಸಂಬಳದ ಶೇ. 50 ದಾಟುವಂತಿಲ್ಲ.

  • ಉದಾಹರಣೆಗೆ, ನೀವು ಶೇ. 8ರ ಬಡ್ಡಿದರದಲ್ಲಿ 35 ವರ್ಷಗಳ ಅವಧಿಗೆ 50 ಲಕ್ಷ ರೂ. ಸಾಲ ಪಡೆದರೆ, ನಿಮ್ಮ ಇಎಂಐ ₹35,514 ಇರಲಿದ್ದು, ಇದನ್ನು ಪಡೆಯಲು ನಿಮ್ಮ ಕನಿಷ್ಠ ಮಾಸಿಕ ಸಂಬಳ ₹70,000 ಇರಬೇಕು.
  • ಅದೇ ರೀತಿ, ಶೇ. 9ರ ಬಡ್ಡಿದರದಲ್ಲಿ 30 ವರ್ಷಗಳ ಅವಧಿಗೆ ಸಾಲ ಪಡೆಯಬೇಕೆಂದರೆ ನಿಮ್ಮ ಕನಿಷ್ಠ ಸಂಬಳ ₹81,000 ಇರಬೇಕಾಗುತ್ತದೆ.

ಸಾಲ ಪಡೆಯುವ ಮುನ್ನ ಇರಲಿ ಎಚ್ಚರ

  • ಜಾಹೀರಾತುಗಳಿಗೆ ಮರುಳಾಗಬೇಡಿ: ಬ್ಯಾಂಕುಗಳು ಶೇ. 7 ಅಥವಾ ಶೇ. 8 ರ ಆರಂಭಿಕ ಬಡ್ಡಿದರ ಎಂದು ಪ್ರಚಾರ ಮಾಡಿದರೂ, ಅದು ಎಲ್ಲರಿಗೂ ಸಿಗುವುದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ (CIBIL), ವಯಸ್ಸು ಮತ್ತು ಕೆಲಸದ ಸ್ಥಿರತೆ ಆಧರಿಸಿ ಬಡ್ಡಿದರ ನಿರ್ಧಾರವಾಗುತ್ತದೆ.
  • ಕ್ರೆಡಿಟ್ ಹಿಸ್ಟರಿ ಮುಖ್ಯ: ಸಾಲ ಮರುಪಾವತಿ ಸಾಮರ್ಥ್ಯ ಉತ್ತಮವಾಗಿದ್ದರೆ ಮಾತ್ರ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಇಲ್ಲದಿದ್ದರೆ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ ಅಥವಾ ಸಾಲದ ಮೊತ್ತವನ್ನು ಕಡಿತಗೊಳಿಸುತ್ತವೆ.

Pocso Case ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್

TAGGED:#Home loan #salary #eligibility #EMI #newsics
Share This Article
Facebook Twitter Copy Link Print
Previous Article Pocso Case ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್
Next Article Bidadi Township ಬಿಡದಿಯಲ್ಲಿ ಮಿತಿಮೀರಿದ ಒತ್ತುವರಿ ಗಲಾಟೆ; ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು

Popular Posts

Tragedy ಮೊಬೈಲ್‌ನಿಂದ ತಲೆಗೆ ಹೊಡೆದ ಪತ್ನಿ: ಚಿಕಿತ್ಸೆ ಪಡೆದು ಮನೆಗೆ ಬಂದ ಗಂಡ ಕೆಲವೇ ಗಂಟೆಗಳಲ್ಲಿ ಸಾ*ವು

1 Min Read

S Janaki ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಜಾನಕಿ ಅಸ್ಥಿ ವಿಸರ್ಜನೆ

2 Min Read

Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್

2 Min Read

Bidadi Township ಬಿಡದಿಯಲ್ಲಿ ಮಿತಿಮೀರಿದ ಒತ್ತುವರಿ ಗಲಾಟೆ; ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು

1 Min Read

You Might Also Like

ಪ್ರಮುಖCrimeಕರ್ನಾಟಕ

Pocso Case ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್

1 Min Read
ಪ್ರಮುಖಕರ್ನಾಟಕ

Road Mishap ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಖಾಸಗಿ ಬಸ್; ಚಾಲಕ ಸೇರಿ ಇಬ್ಬರು ಸಾ*ವು

1 Min Read
ಪ್ರಮುಖCrimeಕರ್ನಾಟಕ

Tragedy ಪ್ರೀತಿಸಿ ಮದುವೆಯಾಗಿದ್ದ ಯುವತಿಯ ದಾರುಣ ಅಂತ್ಯ

1 Min Read
ಪ್ರಮುಖCrimeದೇಶ

Ram Mandir ರಾಮಮಂದಿರ ದೇಣಿಗೆ ದುರುಪಯೋಗ ವಿವಾದ: ತನಿಖಾ ವರದಿ ಸಲ್ಲಿಸಲು SITಗೆ ಸುಪ್ರೀಂ ಕೋರ್ಟ್ ಕಡಕ್ ಆದೇಶ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?