Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Ram Mandir Case ರಾಮನ ಕಾಣಿಕೆ ಹಣದಲ್ಲೇ ಲವರ್‌ಗೆ ಐಫೋನ್, ಅಣ್ಣನ ಮದುವೆ: ಅಯೋಧ್ಯೆ ಹುಂಡಿ ಕಳ್ಳನ ಸೀಕ್ರೆಟ್ ಕೇಳಿ ಪೊಲೀಸರೇ ಶಾಕ್
ಪ್ರಮುಖCrimeದೇಶ

Ram Mandir Case ರಾಮನ ಕಾಣಿಕೆ ಹಣದಲ್ಲೇ ಲವರ್‌ಗೆ ಐಫೋನ್, ಅಣ್ಣನ ಮದುವೆ: ಅಯೋಧ್ಯೆ ಹುಂಡಿ ಕಳ್ಳನ ಸೀಕ್ರೆಟ್ ಕೇಳಿ ಪೊಲೀಸರೇ ಶಾಕ್

Share
2 Min Read
SHARE

newsics.com | ನ್ಯೂಸಿಕ್ಸ್

ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಹುಂಡಿ ಹಣಕ್ಕೆ ಕನ್ನ ಹಾಕಿದ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಮಂದಿರದ ಕಾಣಿಕೆ ಹಣವನ್ನು ದೋಚಿ ಸಿಕ್ಕಿಬಿದ್ದಿರುವ ಎಂಟು ಮಂದಿ ಬ್ಯಾಂಕ್ ಸಿಬ್ಬಂದಿ ಪೈಕಿ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ, ತಾನು ಕದ್ದ ಹಣವನ್ನು ಎಲ್ಲೆಲ್ಲಿಗೆ ಇನ್ವೆಸ್ಟ್ ಮಾಡಿದ್ದಾನೆ ಎಂಬ ಕಟು ಸತ್ಯವನ್ನು ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಭಕ್ತರು ಶ್ರದ್ಧೆಯಿಂದ ಸಮರ್ಪಿಸಿದ ಹಣದಲ್ಲಿ ಈತ ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಕೊಡಿಸಿ, ಮೋಜು-ಮಸ್ತಿ ಮಾಡಿರುವುದು ಪತ್ತೆಯಾಗಿದೆ.

ಒಬ್ಬನೇ ದೋಚಿದ್ದ 20 ಲಕ್ಷ ರೂಪಾಯಿ

ಮಂದಿರದ ದೇಣಿಗೆ ಹಣ ಎಣಿಸುವ ಸಿಬ್ಬಂದಿಯೇ ಈ ಕಳ್ಳತನದ ಜಾಲದಲ್ಲಿದ್ದರು. ಆ ಪೈಕಿ ಅವಿನಾಶ್ ಶುಕ್ಲಾ ಒಬ್ಬನೇ ಅತಿ ಹೆಚ್ಚು ಅಂದರೆ ಸರಿಸುಮಾರು 20 ಲಕ್ಷ ರೂಪಾಯಿ ಹಣವನ್ನು ಮಂದಿರದ ಆವರಣದಿಂದ ಯಾರಿಗೂ ತಿಳಿಯದಂತೆ ಸಾಗಿಸಿದ್ದನು. ಇದರಲ್ಲಿ 19 ಲಕ್ಷ ರೂಪಾಯಿಯನ್ನು ಕೇವಲ ತನ್ನ ವೈಯಕ್ತಿಕ ಐಷಾರಾಮಿ ಜೀವನ ಹಾಗೂ ಕುಟುಂಬದ ಸುಖಭೋಗಗಳಿಗಾಗಿ ಇಷ್ಟಬಂದಂತೆ ಖರ್ಚು ಮಾಡಿ ಮುಗಿಸಿದ್ದಾನೆ.

ಪೊಲೀಸರು ನಡೆಸಿದ ತೀವ್ರ ವಿಚಾರಣೆಯಲ್ಲಿ ಆರೋಪಿ ಅವಿನಾಶ್ ಕದ್ದ ಹಣ ಖರ್ಚು ಮಾಡಿದನ್ನು ಬಿಚ್ಚಿಟ್ಟಿದ್ದಾನೆ.

ತನ್ನ ಗರ್ಲ್‌ಫ್ರೆಂಡ್‌ಗೆ ಅತ್ಯಂತ ದುಬಾರಿ ಮುಖಬೆಲೆಯ ಐಫೋನ್ (iPhone) ಗಿಫ್ಟ್ ನೀಡಿದ್ದಲ್ಲದೆ, ಆಕೆಯ ಬ್ಯಾಂಕ್ ಅಕೌಂಟ್‌ಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ಹಣವನ್ನು ಟ್ರಾನ್ಸ್‌ಫರ್ ಮಾಡಿದ್ದಾನೆ. ಇನ್ನು ಕದ್ದ ತಕ್ಷಣವೇ ತನ್ನ ಸಹೋದರನ ಮದುವೆ ಕಾರ್ಯಕ್ರಮಕ್ಕಾಗಿ ಸುಮಾರು 6 ಲಕ್ಷ ರೂಪಾಯಿ ಹಣವನ್ನು ಅನಾವಶ್ಯಕವಾಗಿ ಖರ್ಚುಮಾಡಿದ್ದಾನೆ. ಉಳಿದ ಹಣದಲ್ಲಿ ಮತ್ತೊಬ್ಬ ಸಹೋದರನಿಗೆ ಬರೋಬ್ಬರಿ 5 ರಿಂದ 6 ಲಕ್ಷ ರೂಪಾಯಿ ಕ್ಯಾಶ್ ನೀಡಿದ್ದಾನೆ.

ಸದ್ಯ ಪೊಲೀಸರು ಈ ಇಡೀ ಗ್ಯಾಂಗ್‌ನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು, ಅವರ ಆರ್ಥಿಕ ವಹಿವಾಟುಗಳ ಮೇಲೆ ಕಣ್ಣಿಟ್ಟಿದ್ದಾರೆ. ಆರೋಪಿಗಳು ಕಳ್ಳತನದ ಹಣದಿಂದ ಇತ್ತೀಚೆಗೆ ಮಾಡಿರುವ ಆಸ್ತಿಪಾಸ್ತಿಗಳ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಕೋರ್ಟ್‌ಗೆ ಬಲಿಷ್ಠವಾದ ದೋಷಾರೋಪಣೆ ಪಟ್ಟಿಯನ್ನು (Charge Sheet) ಸಲ್ಲಿಸಲು ಮತ್ತು ಹಣದ ವರ್ಗಾವಣೆಯ ನಿಖರ ಪುರಾವೆಗಳನ್ನು ಕಲೆಹಾಕಲು ತನಿಖಾ ತಂಡ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ. ಭಕ್ತರ ನಂಬಿಕೆಗೆ ದ್ರೋಹ ಬಗೆದ ಈ ಸಿಬ್ಬಂದಿಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Crime Case ತಹಶೀಲ್ದಾರ್ ನಿವಾಸದಲ್ಲೇ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್

TAGGED:#Ayodhya #Ram mandir #robbery #Uttar Pradesh #money scam #investigation
Share This Article
Facebook Twitter Copy Link Print
Previous Article Crime Case ತಹಶೀಲ್ದಾರ್ ನಿವಾಸದಲ್ಲೇ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್
Next Article Jammu Kashmir ಭದ್ರತಾ ಪಡೆಗಳ ಎನ್‌ಕೌಂಟರ್: ಲಷ್ಕರ್ ಟಾಪ್ ಕಮಾಂಡರ್ ಝಕೀರ್ ಗನಾಯಿ ಹ*ತ್ಯೆ

Popular Posts

Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!

2 Min Read

Child dies ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು

1 Min Read

Strange first night ಇಲ್ಲಿನ ಫಸ್ಟ್ ನೈಟ್‌ನಲ್ಲಿ ಹುಡುಗಿಯ ತಾಯಿಯೂ ಇರ್ತಾಳೆ!

3 Min Read

Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

2 Min Read

You Might Also Like

ದೇಶಪ್ರಮುಖವೈರಲ್

groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

2 Min Read
ದೇಶಪ್ರಮುಖವಿದೇಶ

Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ

2 Min Read
ಪ್ರಮುಖCrimeಕರ್ನಾಟಕ

Road Mishap ಯಮನ ದವಡೆಯಿಂದ ಪಾರಾದ ವಿದ್ಯಾರ್ಥಿನಿ: ಲಾರಿ ಅಡಿಗೆ ಸಿಲುಕಿದ್ರೂ ವಿದ್ಯಾರ್ಥಿನಿ ಬಚಾವ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?