Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > Iran ಮಾಜಿ ಸುಪ್ರೀಂ ಲೀಡರ್ ಖಮೇನಿ ಮಹಾ ಅಂತ್ಯಕ್ರಿಯೆ : 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಇರಾನ್ ನಾಗರಿಕರು!
ಪ್ರಮುಖವಿದೇಶ

Iran ಮಾಜಿ ಸುಪ್ರೀಂ ಲೀಡರ್ ಖಮೇನಿ ಮಹಾ ಅಂತ್ಯಕ್ರಿಯೆ : 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಇರಾನ್ ನಾಗರಿಕರು!

Share
2 Min Read
SHARE

newsics.com| ನ್ಯೂಸಿಕ್ಸ್

ಇರಾನ್ ದೇಶದ ಮಾಜಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರ ಮತ್ತು ಶನಿವಾರದಂದು ಭಾರಿ ಜನಸ್ತೋಮ ಜಮಾಯಿಸಿದೆ.

ಇಸ್ಲಾಮಿಕ್ ಗಣರಾಜ್ಯದ ರಾಷ್ಟ್ರಧ್ವಜದಿಂದ ಹೊದಿಸಲ್ಪಟ್ಟಿದ್ದ ಖಮೇನಿ ಅವರ ಶವಪೆಟ್ಟಿಗೆಯ ಮೇಲೆ ಅವರ ಸಾಂಪ್ರದಾಯಿಕ ಕಪ್ಪು ಪಾಗಾವನ್ನು ಇರಿಸಲಾಗಿತ್ತು.

ಅತ್ಯಂತ ಕರುಣಾಜನಕ ಸಂಗತಿಯೆಂದರೆ, ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಸಾರಿದಾಗ ನಡೆದ ವೈಮಾನಿಕ ದಾಳಿಯಲ್ಲಿ ಖಮೇನಿ ಅವರೊಂದಿಗೆ ಮೃತಪಟ್ಟಿದ್ದ ಅವರ ಕುಟುಂಬಸ್ಥರ ಶವಪೆಟ್ಟಿಗೆಗಳನ್ನೂ ಅವರ ಪಕ್ಕದಲ್ಲೇ ಇಡಲಾಗಿತ್ತು. ಇದರಲ್ಲಿ ಅವರ 14 ತಿಂಗಳ ಪುಟ್ಟ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೊಲ್ಪಾಯೆಗಾನಿ ಅವರ ಚಿಕ್ಕ ಶವಪೆಟ್ಟಿಗೆಯೂ ಸೇರಿತ್ತು. ಪುಟ್ಟ ಮಗುವಿನ ಶವಪೆಟ್ಟಿಗೆಗೆ ರಾಷ್ಟ್ರಧ್ವಜವನ್ನು ಹೊದಿಸಿ, ಪಕ್ಕದಲ್ಲೇ ಆಕೆಯ ಸುಂದರ ಭಾವಚಿತ್ರವನ್ನು ಇರಿಸಲಾಗಿದ್ದು, ಇದನ್ನು ಕಂಡು ಇಡೀ ದೇಶವೇ ಕಣ್ಣೀರು ಸುರಿಸಿದೆ.

​ಖಮೇನಿ ಅವರ ಪಾರ್ಥಿವ ಶರೀರವು ಶುಕ್ರವಾರವಷ್ಟೇ ಟೆಹ್ರಾನ್ ತಲುಪಿದ್ದು, ಇರಾನ್ ಮತ್ತು ನೆರೆಯ ಇರಾಕ್‌ನ ವಿವಿಧ ನಗರಗಳಲ್ಲಿ ಆರು ದಿನಗಳ ಕಾಲ ಸಾರ್ವಜನಿಕ ಅಂತಿಮ ದರ್ಶನ ಹಾಗೂ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಶುಕ್ರವಾರ ಸಂಜೆಯಿಂದಲೇ ಟೆಹ್ರಾನ್‌ನ ‘ಗ್ರಾಂಡ್ ಮೊಸಲ್ಲಾ’ ಧಾರ್ಮಿಕ ಸಂಕೀರ್ಣದ ಹೊರಗೆ ಲಕ್ಷಾಂತರ ಬೆಂಬಲಿಗರು ಕಾಯುತ್ತಿದ್ದರು. ಇಂದು ಮುಂಜಾನೆ ಸಾರ್ವಜನಿಕರಿಗಾಗಿ ಈ ಸಂಕೀರ್ಣದ ಬಾಗಿಲುಗಳನ್ನು ತೆರೆಯುತ್ತಿದ್ದಂತೆ ಇಡೀ ವಿಶಾಲ ಮೈದಾನವು ಶೋಕಾಕುಲರಿಂದ ತುಂಬಿಹೋಯಿತು.

ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿ ವರದಿಯ ಪ್ರಕಾರ, ಜಮಾಯಿಸಿದ್ದ ಜನರು ಇರಾನ್ ಸಂಸ್ಕೃತಿಯಲ್ಲಿ ‘ಪ್ರತಿಕಾರ’ದ ಸಂಕೇತವಾಗಿರುವ ಕೆಂಪು ಬ್ಯಾನರ್‌ಗಳನ್ನು ಹಿಡಿದು ಆಕ್ರೋಶ ಹೊರಹಾಕುತ್ತಿದ್ದರು. ಅಲ್ಲದೆ “ಅಮೆರಿಕಕ್ಕೆ ದಿಕ್ಕಾರ” ಮತ್ತು “ಪ್ರತಿಕಾರ, ಪ್ರತಿಕಾರವೇ ನಮ್ಮ ಧ್ಯೇಯ” ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗುತ್ತಿದ್ದರು.

​ನಿಗದಿತ ವೇಳಾಪಟ್ಟಿಯ ಪ್ರಕಾರ, ಆಯತೊಲ್ಲಾ ಅಲಿ ಖಮೇನಿ ಅವರ ಶವಪೆಟ್ಟಿಗೆಯನ್ನು ಸೋಮವಾರದವರೆಗೆ ಟೆಹ್ರಾನ್‌ನಲ್ಲೇ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಮತ್ತು ಅಂದು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ಸಾಗಲಿದೆ. ತದನಂತರ ಮಂಗಳವಾರ ಇರಾನ್‌ನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ‘ಕೋಮ್’ ನಗರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಬುಧವಾರ ನೆರೆಯ ಇರಾಕ್ ದೇಶದ ಪವಿತ್ರ ನಗರಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಅಂತಿಮವಾಗಿ ಗುರುವಾರದಂದು ಈಶಾನ್ಯ ಇರಾನ್‌ನಲ್ಲಿರುವ ಖಮೇನಿ ಅವರ ಸ್ವಂತ ನಗರವಾದ ‘ಮಶ್ಹಾದ್’ನಲ್ಲಿ ಅವರ ಭೌತಿಕ ಶರೀರದ ದಫನ ಕಾರ್ಯ ನೆರವೇರಲಿದೆ.

Lokayukta| ನೆಂಟರಿಗೆ, ಆಪ್ತರಿಗೆ 30 ಬಾರ್‌ ಲೈಸೆನ್ಸ್ ಕೊಟ್ಟಿದ್ದ ಜಾರಕಿಹೊಳಿ ಭಾವ – ಇ.ಡಿ ಬಳಿಕ ಲೋಕಾಯುಕ್ತರಿಂದ ಶಾಕ್

Share This Article
Facebook Twitter Copy Link Print
Previous Article SHOCKING : ಮಹಿಳೆಯನ್ನು ಬೆತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಕುಟುಂಬ ಸದಸ್ಯರು
Next Article SHOCKING| ಪತಿಯನ್ನು ಕೊಂದು ಮನೆಯೊಳಗಿನ ಬಾತ್‌ರೂಂ ನೆಲದಡಿ ಹೂತ ಪತ್ನಿ – 45 ದಿನಗಳ ಬಳಿಕ ಪ್ರಕರಣ ಬೆಳಕಿಗೆ

Popular Posts

Mass loss of life ಜ್ಯುವೆಲರಿ ಮಳಿಗೆ ಮಾಲೀಕನಿಗೆ ಆರ್ಥಿಕ ಸಂಕಷ್ಟ: ಮೂವರ ಸಾಮೂಹಿಕ ಆತ್ಮ*ಹ*ತ್ಯೆ

2 Min Read

SHOCKING| ಪತಿಯನ್ನು ಕೊಂದು ಮನೆಯೊಳಗಿನ ಬಾತ್‌ರೂಂ ನೆಲದಡಿ ಹೂತ ಪತ್ನಿ – 45 ದಿನಗಳ ಬಳಿಕ ಪ್ರಕರಣ ಬೆಳಕಿಗೆ

2 Min Read

Iran ಮಾಜಿ ಸುಪ್ರೀಂ ಲೀಡರ್ ಖಮೇನಿ ಮಹಾ ಅಂತ್ಯಕ್ರಿಯೆ : 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಇರಾನ್ ನಾಗರಿಕರು!

2 Min Read

SHOCKING : ಮಹಿಳೆಯನ್ನು ಬೆತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಕುಟುಂಬ ಸದಸ್ಯರು

1 Min Read

You Might Also Like

ದೇಶಪ್ರಮುಖವಿದೇಶವೈರಲ್

Empire Proposal: 1500 ಅಡಿ ಎತ್ತರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಅರೆಸ್ಟ್

1 Min Read
ಪ್ರಮುಖಕರ್ನಾಟಕವಿದೇಶ

Tibet: ಟಿಬೆಟಿಯನ್ನರ ಅಸ್ತಿತ್ವಕ್ಕೆ ಕಂಟಕವಾದ ಚೀನಾದ ಹೊಸ ಕಾನೂನು: 10 ಲಕ್ಷ ಮಕ್ಕಳ ಭವಿಷ್ಯಕ್ಕೆ ಧಕ್ಕೆ

2 Min Read
ಪ್ರಮುಖವಿದೇಶ

Tragedy: ಭೀಕರ ಚಂಡಮಾರುತಕ್ಕೆ ಪ್ರವಾಸಿಗರ ಬೋಟ್ ಉರುಳಿ ಮೂವರು ಸಾ*ವು, ತುರ್ತು ಪರಿಸ್ಥಿತಿ ಘೋಷಣೆ!

2 Min Read
ದೇಶಪ್ರಮುಖ

Tamilnadu| ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಡಿಎಂಕೆ ಶಾಸಕ ರಾಧಾಕೃಷ್ಣನ್ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?