newsics.com| ನ್ಯೂಸಿಕ್ಸ್
ಅತ್ಯಂತ ಎತ್ತರದ ಗೋಪುರ ನ್ಯೂಯಾರ್ಕ್‌ನ ಪ್ರಸಿದ್ಧ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ನ 103ನೇ ಮಹಡಿಯ ರಹಸ್ಯ ದಾರಿಯ ಮೂಲಕ ಹತ್ತಿದ ಜೋಡಿಯೊಂದು 1500 ಅಡಿ ಏತ್ತರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದೆ.
ಇವಾನ್ ಕುಜ್ನೆಟ್ಸೊವ್ (32), ಏಂಜೆಲಿನಾ ನಿಕೋಲಾವ್ (33) ಅವರು ಯಾವುದೇ ಸುರಕ್ಷತಾ ಹಗ್ಗಗಳನ್ನು ಕೂಡ ಕಟ್ಟಿಕೊಳ್ಳದೆ, ಎತ್ತರದ ಬಿಲ್ಡಿಂಗ್ ಹತ್ತೋದರಲ್ಲಿ ಈ ಜೋಡಿ ಫೇಮಸ್ ಆಗಿದೆ. ಈ ಟವರ್ ಮೇಲೆ ಹತ್ತಿ ಕಟ್ಟಡದ ತುದಿಯಲ್ಲಿ ನಿಂತು, “ಯಾವಾಗ ಪ್ರೀತಿಯ ಶಕ್ತಿಯು ಅಧಿಕಾರದ ಮೇಲಿನ ಪ್ರೀತಿಯನ್ನು ಸೋಲಿಸುತ್ತದೆಯೋ, ಆಗ ಜಗತ್ತಿಗೆ ಶಾಂತಿ ಸಿಗುತ್ತದೆ” ಎಂಬ ಜಿಮಿ ಹೆಂಡ್ರಿಕ್ಸ್ ಅವರ ಪ್ರಸಿದ್ಧ ಸಾಲುಗಳಿದ್ದ ಬ್ಯಾನರ್ ಪ್ರದರ್ಶನ ಮಾಡಿದ್ದಾರೆ.
ಕಟ್ಟಡ ಹತ್ತಿದವರಲ್ಲಿ ಒಬ್ಬರಾದ 33 ವರ್ಷದ ಏಂಜೆಲಾ ನಿಕೊಲೌ, ಈ ಸಾಹಸದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಗರದ ಹಿನ್ನೆಲೆಯಲ್ಲಿ ತಮ್ಮ ಎಂಗೇಜ್ಮೆಂಟ್ ಉಂಗುರದ ಫೋಟೋವನ್ನು ಅವರು ಹೈಲೈಟ್ ಮಾಡಿದ್ದಾರೆ. ಅವರ ಪ್ರೊಫೈಲ್‌ನಲ್ಲಿ, ಅವರು ಮತ್ತು ಅವರ 32 ವರ್ಷದ ಕ್ಲೈಂಬಿಂಗ್ ಪಾರ್ಟ್ನರ್ ಇವಾನ್ ಕುಜ್ನೆತ್ಸೊವ್ ಹಲವು ಗಗನಚುಂಬಿ ಕಟ್ಟಡಗಳ ಮೇಲೆ ನಿಂತು ಪೋಸ್ ನೀಡಿರುವ ಫೋಟೋಗಳಿವೆ.
ಅವರ ಪೇಜ್‌ನಲ್ಲಿರುವ ಒಂದು ಪಿನ್ ಮಾಡಿದ ಪೋಸ್ಟ್, 2024ರ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ “ಸ್ಕೈವಾಕರ್ಸ್: ಎ ಲವ್ ಸ್ಟೋರಿ” ಬಗ್ಗೆ ಹೇಳುತ್ತದೆ. ಈ ಡಾಕ್ಯುಮೆಂಟರಿಯಲ್ಲಿ ನೆಟ್‌ಫ್ಲಿಕ್ಸ್ ಈ ಜೋಡಿಯನ್ನು “ಡೇರ್‌ಡೆವಿಲ್ ಇನ್‌ಫ್ಲುಯೆನ್ಸರ್‌ಗಳು” ಎಂದು ಬಣ್ಣಿಸಿದೆ. “ಈ ಜೋಡಿ ತಮ್ಮ ಪ್ರೀತಿ, ಸ್ವಾತಂತ್ರ್ಯ ಮತ್ತು ಜೀವವನ್ನು ಪಣಕ್ಕಿಟ್ಟು ಬೃಹತ್ ಗಗನಚುಂಬಿ ಕಟ್ಟಡವನ್ನು ಹತ್ತುತ್ತಾರೆ” ಎಂದು ವಿವರಿಸಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಲು ನೆಟ್‌ಫ್ಲಿಕ್ಸ್ ನಿರಾಕರಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳಬಹುದಾದ, ಅಕ್ರಮವಾಗಿ ಕಟ್ಟಡ ಹತ್ತಿದ ಈ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಮೇಲೆ ಅತಿಕ್ರಮಣ, ಸಾರ್ವಜನಿಕ ಆಸ್ತಿಗೆ ಹಾನಿ, ಶಾಂತಿ ಭಂಗ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಂದಹಾಗೆ ಬಿಹಾರದಲ್ಲಿ ಕೂಡ ಜೋಡಿಯೊಂದು ಟವರ್ ಹತ್ತಿ ಪ್ರಪೋಸ್ ಮಾಡಬೇಕು ಎಂದುಕೊಂಡಿತ್ತು. ಅಷ್ಟರಲ್ಲೇ ಪೊಲೀಸ್ ಬಂಧನಕ್ಕೆ ಒಳಗಾಗಿದ್ದಾರೆ.