newsics.com| ನ್ಯೂಸಿಕ್ಸ್
ಮಂಗಳವಾರದ ಭಾರಿ ಇಳಿಕೆಯ ಬೆನ್ನಲ್ಲೇ, ಬುಧವಾರವೂ ಚಿನ್ನದ ಬೆಲೆಯಲ್ಲಿ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಇಂದು 24 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು 1,260 ರೂಪಾಯಿ ಇಳಿಕೆಯಾಗಿದೆ. ಈ ಭಾರಿ ಕುಸಿತದ ನಂತರ ಇಂದು ಬೆಂಗಳೂರಿನಲ್ಲಿ ಒಂದು ಗ್ರಾಮ್ 24 ಕ್ಯಾರೆಟ್ ಚಿನ್ನದ ದರ 14,078 ರೂಪಾಯಿ ಆಗಿದೆ. ನಿನ್ನೆ (ಜೂನ್ 30) ಒಂದು ಗ್ರಾಮ್‌ಗೆ ಇದ್ದ 14,193 ರೂಪಾಯಿ ದಾಖಲೆಯ ದರಕ್ಕೆ ಹೋಲಿಸಿದರೆ ಇಂದು ಭಾರಿ ಕುಸಿತ ಕಂಡುಬಂದಿದೆ.
22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ
22 ಕ್ಯಾರೆಟ್‌ನ 10 ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲೂ ಬರೋಬ್ಬರಿ 1,150 ರೂಪಾಯಿ ಇಳಿಕೆ ಕಂಡುಬಂದಿದೆ. ಇದರೊಂದಿಗೆ ಇಂದು ಮಾರುಕಟ್ಟೆಯಲ್ಲಿ ಒಂದು ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆ 12,905 ರೂಪಾಯಿಗಳಿಗೆ ಬಂದು ತಲುಪಿದೆ.
ಒಂದೆಡೆ ಚಿನ್ನದ ಬೆಲೆಯಲ್ಲಿ ಸತತ ಕುಸಿತ ಕಂಡುಬಂದು ಗ್ರಾಹಕರು ಹರ್ಷಗೊಂಡಿದ್ದರೆ, ಮತ್ತೊಂದೆಡೆ ಬೆಳ್ಳಿ ಬೆಲೆ ಮಾತ್ರ ಗಗನಕ್ಕೇರಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 5,000 ರೂಪಾಯಿ ಏರಿಕೆಯಾಗಿದೆ. ಈ ದಿಢೀರ್ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ಇಂದು ಒಂದು ಕೆಜಿ ಬೆಳ್ಳಿಯ ದರ 2,40,000 ರೂಪಾಯಿಗಳ ಗಡಿಗೆ ತಲುಪಿದೆ.
Google Job 9 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸ್ವಂತ ಉದ್ಯಮ ಆರಂಭಿಸಿದ ಗೂಗಲ್ ಉದ್ಯೋಗಿ