Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 28-06-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 28-06-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Share
5 Min Read
SHARE

newsics.com | ನ್ಯೂಸಿಕ್ಸ್

ಶುಭೋದಯ

ಇಂದಿನ ಪಂಚಾಂಗ | ರಾಶಿ ಭವಿಷ್ಯ

28-06-2026, ಭಾನುವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಮಾಸ ಶುಕ್ಲಪಕ್ಷದ ಚತುರ್ದಶಿ.

* ಹುಣ್ಣಿಮೆ ಆರಂಭ

—–

ಶುಭ ಸಮಯ: ಮಧ್ಯಾಹ್ನ 3:15 ರಿಂದ ಸಂಜೆ 5:03

ಅಶುಭ ಸಮಯ: ಸಂಜೆ 5:06 ರಿಂದ 5:58

ರಾಹು ಕಾಲ 17:12 – 18:48

ಯಮಗಂಡ ಕಾಲ 12:23 – 13:59

ಗುಳಿಕ ಕಾಲ 15:36 – 17:12

————

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಜ್ಯೇಷ್ಠ, ಯೋಗ : ಶುಭ, ಕರಣ : ಗರಜ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:12 – 18:48, ಯಮಗಂಡ ಕಾಲ 12:23 – 13:59, ಗುಳಿಕ ಕಾಲ 15:36 – 17:12

===========

ಇಂದಿನ ರಾಶಿ ಭವಿಷ್ಯ

ಮೇಷ

ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಚಿತ್ರಣವಿರಲಿ. ಇಲ್ಲವಾದರೆ ನೀವು ಮಾಡಲು ಹೊರಟ ಕೆಲಸವು ಅಪೂರ್ಣವಾಗುವುದು ಅಥವಾ ಆಗದೇಯೂ ಹೋಗಬಹುದು. ಗೌಪ್ಯವಾದ ಮಾತುಗಳು ಗೊತ್ತಿಲ್ಲದಂತೆ ಪ್ರಕಟವಾಗಲಿದೆ‌. ತಂತ್ರಜ್ಞಾನವು ನಿಮ್ಮ ಉಪಯೋಗಕ್ಕೆ ಬರಲಿದೆ. ಬೇಕಾದಷ್ಟು ಸಮಯವು ನಿಮ್ಮ ಪಾಲಿಗೆ ಇರಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಿಮ್ಮಲ್ಲಿರಲಿ.

ವೃಷಭ

ಸಿಟ್ಟಿನ ಮಾತನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾಗುವುದು. ನೀವು ಇಂದು ಶತ್ರುಗಳನ್ನು ಹೆಡೆಮುರಿ ಕಟ್ಟುತ್ತೇನೆ ಎಂಬ ಮನಃಸ್ಥಿತಿಯನ್ನು ಬಿಟ್ಟು ಶಾಂತರಾಗಿ. ನಿಮಗೆ ಕಾಲವು ಬರಲಿದೆ. ಆತುರದಿಂದ ಏನನ್ನಾದರೂ ಮಾಡಲು ಹೋದೀರಿ. ಕಬ್ಬಿಣದ ಕಡಲೆಯನ್ನೂ ನುಂಗಲೂ ಉಗುಳಲೂ ಆಗದು. ಅದು ನಿಮಗೆ ಬಳಕೆ ಬರಲಿದೆ. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಮಿಥುನ

ಆಪ್ತರ ಜತೆ ವಿವಾದ ಆಗಲಿದೆ. ನಾನು ಮಾಡಿದ್ದೇ ಸರಿ ಎಂಬ ಹುಂಬುತನ ಇರಲಿದೆ. ಮುಖವನ್ನೇ ನೋಡದ ವ್ಯಕ್ತಿಯೋರ್ವ ನಿಮಗೆ ಹೂಡಿಕೆಯನ್ನು ಮಾಡಲು ಹೇಳಿ ಅದರ ವಿಧಾನವನ್ನು ತಿಳಿಸಿ ಹಣವನ್ನು ಪಡೆಯಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೋಲಾಗಬಹುದು. ಛಲದಿಂದ ಸಾಧಿಸುವ ಬಗ್ಗೆ ಗಮನವಿರಲಿ. ಹಿರಿಯರ ಎದುರು ವಿನಯದಿಂದ ಮಾತನಾಡಿ. ಸಾಧ್ಯವಾದರೆ ಅವರ ಸೇವೆ ಮಾಡಿ. ಮಾತಿಗೆ ತಪ್ಪಿ ನಡೆಯುವಿರಿ ಎಂಬ ಮಾತು ಕೇಳಬಹುದು.

ಕರ್ಕಾಟಕ

ಒಂದೇ ರೀತಿಯ ಕೆಲಸದಿಂದ ನೀವು ಬೇಸರಗೊಂಡು ಬೇರೆ ಕ್ರಮದಲ್ಲಿ ಬೇರೆ ಕೆಲಸವನ್ನು ಮಾಡಲು ಆಲೋಚಿಸುವಿರಿ. ಆಕಸ್ಮಿಕ ಲಾಭದಿಂದ ಸಂತೋಷ. ಹೊಸತನ್ನು ಕಲಿಯುವ ಉತ್ಸುಕತೆಯೂ ನಿಮ್ಮಲ್ಲಿ ಇರಲಿದೆ. ದುರಭ್ಯಾಸದಿಂದ ಅಪಕೀರ್ತಿ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವಿಂದು ಮನೆಯನ್ನು ಬಿಡಬೇಕಾಗಿಬರಬಹುದು. ಅಕಸ್ಮಾತ್ ದೂರ ಪ್ರಯಾಣವು ಅನಿವಾರ್ಯವಾದೀತು. ಸರಿಯಾದ ಸಿದ್ಧತೆಯ ಜೊತೆ ಹೋಗಿ. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ.

ಸಿಂಹ

ನಿಮ್ಮ ಹಿತೈಷಿಗಳ ಸಹಕಾರದಿಂದ ನಿಮ್ಮ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯ. ಯಾವುದನ್ನೂ ತಾಳ್ಮೆಯಿಂದ ಕೇಳುವ ಸ್ಥಿತಿ ಇರದೇ ಉದ್ವೇಗದ ಮಾತುಗಳನ್ನಾಡುವಿರಿ. ಒಂದಿಲ್ಲೊಂದು ಆರೋಪದಿಂದ ನೀವು ಬೇಸತ್ತು ಹೋಗಬಹುದು. ಮನಸ್ಸಿಗೆ ಒದು ಬಹಳ ಕಿರಿಕಿರಿಯ ವಿಚಾತವಾಗಿ ಪರಿಣಮಿಸುವುದು. ಆಪ್ತರೇ ನಿಮ್ಮನ್ನು ಕೆಡಗಲು ಸಂಚನ್ನು ರೂಪಿಸಬಹುದು. ಒಂಟಿತನದ ಆಲೋಚನೆಯು ಪೂರ್ಣವಾಗದು.

ಕನ್ಯಾ

ಯಾವುದೋ ಬಲವಾದ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕೈ ಮೀರಿದ ಸ್ಥಿತಿಯನ್ನು ನಿಮ್ಮ ನಿಯಂತ್ರಣಕ್ಕೆ ತರಲಾಗದು. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಸರಿಯಾದ ಅಭ್ಯಾಸವಿಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಸೋಲವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಸುಖವು ಇರಲಿದೆ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಮಕ್ಕಳ‌ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು.

ತುಲಾ

ಎದುರಾದ ಸಂಕಟಕ್ಕೆ ಹಳೆಯ ಮಿತ್ರನ ಸ್ಮರಣೆ ಮಾಡುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸಿದರೂ ಅದು ಅಕಾಲದಲ್ಲಿ ಪ್ರಕಟವಾಗುವುದು. ಸಾಲವನ್ನು ಹಿಂದಿರುಗಿಸಲು ಕಷ್ಟವಾಗಬಹುದು. ನಿಮ್ಮಿಂದಾದ ಕೆಲಸವನ್ನು ನೀವೇ ಹೊಗಳಿಕೊಳ್ಳಬೇಡಿ. ಖಂಡಿಸಿ ನಿಷ್ಠುರವಾಗುವ ಸಾಧ್ಯತೆ ಇದೆ. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ.

ವೃಶ್ಚಿಕ

ಪರರ ಕಲಹದಲ್ಲಿ ಮಧ್ಯಸ್ತಿಕೆ ವಹಿಸುವುದು ಇಷ್ಟವಾಗುವುದು. ನಿಮ್ಮ ಹಿಂದಿನ‌ ಜೀವನವನ್ನು ನೆನೆದು, ಈಗಿನ ಸಮೃದ್ಧಿಯನ್ನು ಕಂಡು ಬಹಳ ಆನಂದವಾಗುವುದು. ಯಾರದೋ ಕಾರಣಕ್ಕೆ ನೀವು ತಲೆತಗ್ಗಿಸಬೇಕಾಗಬಹುದು. ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ಸ್ವಲ್ಪ ಆಲೋಚಿಸಿ. ಪರರನ್ನು ನಿಂದಿಸುವ ದುರಭ್ಯಾಸದಿಂದ ದೂರವಿರುವುದು ಒಳ್ಳೆಯದು. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು.

ಧನುಸ್ಸು

ಅಧಿಕ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಇಂದಿನ ಕೆಲಸವನ್ನು ಮಾಡಬೇಕಾಗುತ್ತದೆ. ಮಕ್ಕಳಿಗೆ ಆಸಕ್ತಿಯಿರುವ ಕಲಿಕೆಗೆ ಉತ್ತೇಜನ ನೀಡುವಿರಿ, ಸಾಧಕ ಬಾಧಕಗಳ ಪರಿಚಯ ಮಾಡಿಕೊಟ್ಟರೆ ಒಳ್ಳೆಯದು. ಉದ್ಯೋಗದಲ್ಲಿ ಭಡ್ತಿಗಾಗಿ ಬಹಳ ಶ್ರಮವಹಿಸುವಿರಿ. ನಿಮ್ಮಲ್ಲಿ ಹಣವನ್ನು ಕೇಳಿ ಯಾರಾದರೂ ಬರಬಹುದು, ಇಲ್ಲವೆನ್ನದೇ ಎಷ್ಟೋ ಒಂದಿಷ್ಟನ್ನು ಇದಂ‌ ನ ಮಮ ಎಂಬ ಭಾವದಿಂದ ಕೊಡಿ. ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಂಭವವು ಬರಬಹುದು.

ಮಕರ

ಹಸಿದವರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಮಕ್ಕಳ ವಿಷಯಕ್ಕೆ ಖರ್ಚು ಮಾಡುವ ಸ್ಥಿತಿ ಬರಲಿದೆ. ಯಾತ್ರಾ ಸ್ಥಳಗಳಲ್ಲಿ ನಿಮ್ಮ ಹಾಗೂ ನಿಮ್ಮ ವಸ್ತುಗಳ ಸುರಕ್ಷತೆಗೆ ಗಮನ ಬೇಕು. ದೈನಂದಿನ ಕೆಲಸಗಳು ನಿಶ್ಚಿಂತೆಯಿಂದ ನಡೆಯುವುವು.‌ ಕುಟಂಬದ ಜೊತೆ ನೀವು ಇನ್ನಷ್ಟು ಆಪ್ತರಾಗುವಿರಿ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು.‌ ಕಲಾವಿದರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವರು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು.

ಕುಂಭ

ವಾಹನ ಸವಾರಿಯು ಈ ದಿನ ನಿಮಗೆ ಬೇಡವೆನಿಸವುದು. ನಿಮ್ಮನ್ನು ತರತರದ ಮಾತುಗಳಿಂದ ನಿಮ್ಮ ಉತ್ತೇಜಿಸಬಹುದು. ಇನ್ನೊಬ್ಬರಿಗಾಗಿ ಸುಳ್ಳು ಹೇಳಬೇಕಾದ ಸ್ಥಿತಿ ಬರುವುದು. ಅದು ಸರಿ ಎನಿಸಿ ನೀವು ಮಾಡಿ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಲೋಹದ ವ್ಯಾಪಾರಕ್ಕೆ ಬಂಡವಾಳ ಹಾಕುವಿರಿ. ಆಪ್ತಮಿತ್ರರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅಪರಿಚಿತರ ಜೊತೆ ಅನುಚಿತ ವರ್ತನೆ ಬೇಡ. ನಂಬಿಕೆಯು ಹುಸಿಯಾಗುವುದು. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ.

ಮೀನ

ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ಮನೆಗೆ ಅಗತ್ಯವಿರುವ ಯಂತ್ರೋಪಕರಣವನ್ನು ಖರೀದಿಸುವಿರಿ. ಆರ್ಥಿಕ ಲಿಖಿತ ರೂಪದಲ್ಲಿ ಸ್ಪಷ್ಟವಾಗಿರಲಿ. ಸರ್ಕಾರಿ ಕೆಲಸವು ಪ್ರಗತಿಯಲ್ಲಿ ಇರಲಿದೆ. ಸಂಗಾತಿಯು ಇಂದು ನಿಮ್ಮ ಮಾತನ್ನು ಅನುಸರಿಸುವಳು. ಹೆಚ್ಚಿನ ಸಂಪಾದನೆಗೆ ಅನ್ಯ ಮಾರ್ಗವನ್ನು ಹಿಡಿದುಕೊಳ್ಳಬೇಕಾಗುವುದು. ಪ್ರತಿಯೊಂದು ಕ್ಷಣವನ್ನೂ ಆನಂದಿಸುವಿರಿ. ಸಜ್ಜನರ ಸಹವಾಸ ನಿಮಗೆ ಸಿಕ್ಕಿ ಮಾರ್ಗದರ್ಶನವೂ ಆಗಲಿದೆ.

 

 

 

 

TAGGED:#almanac #zodiac #prediction #28-06-2026 #sunday #horoscope #planetary #positions #news #newsics
Share This Article
Facebook Twitter Copy Link Print
Previous Article High court order| ಖಾತೆಯಲ್ಲಿ ಕನಿಷ್ಠ ಠೇವಣಿ ಕಾಯ್ದಿರಿಸದ ಗ್ರಾಹಕರಿಗೆ ಬ್ಯಾಂಕ್​ ವಿಧಿಸುವ ದಂಡಕ್ಕೆ ಜಿಎಸ್​ಟಿ ಅನ್ವಯವಾಗುವುದಿಲ್ಲ :​ ಹೈಕೋರ್ಟ್
Next Article Polio Day ಐದು ವರ್ಷದೊಳಗಿನ ಮಕ್ಕಳಿಗೆ ಇಂದು ತಪ್ಪದೆ ಪೋಲಿಯೊ‌ ಲಸಿಕೆ ಹಾಕಿಸಿ

Popular Posts

Polio Day ಐದು ವರ್ಷದೊಳಗಿನ ಮಕ್ಕಳಿಗೆ ಇಂದು ತಪ್ಪದೆ ಪೋಲಿಯೊ‌ ಲಸಿಕೆ ಹಾಕಿಸಿ

1 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 28-06-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

High court order| ಖಾತೆಯಲ್ಲಿ ಕನಿಷ್ಠ ಠೇವಣಿ ಕಾಯ್ದಿರಿಸದ ಗ್ರಾಹಕರಿಗೆ ಬ್ಯಾಂಕ್​ ವಿಧಿಸುವ ದಂಡಕ್ಕೆ ಜಿಎಸ್​ಟಿ ಅನ್ವಯವಾಗುವುದಿಲ್ಲ :​ ಹೈಕೋರ್ಟ್

2 Min Read

Adventure trip SSLC ಬಾಲಕಿ ಜತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿ ಮಾಡಿದ್ದೇನು?

3 Min Read

You Might Also Like

ದೇಶಪ್ರಮುಖವೈರಲ್

Danger swimming pool ಡ್ಯಾನ್ಸ್ ಮಾಡುತ್ತಾ ರೆಸಾರ್ಟ್ ಈಜುಕೊಳಕ್ಕೆ ಧುಮುಕಿದ ಯುವಕ ಮೃತಪಟ್ಟಿದ್ದು ಹೇಗೆ? ವಿಡಿಯೋ ನೋಡಿ

1 Min Read
ಪ್ರಮುಖದೇಶ

Ayodhya scam ಅಯೋಧ್ಯೆ ದೇಣಿಗೆ ಹಣ ಲೂಟಿಗೆ ಚಂಪತ್‌ರಾಯ್, ಮಿಶ್ರಾ ಸಹಕಾರ! ಎಸ್ಐಟಿ ವರದಿ ಹೇಳ್ತಿರೋದೇನು?

2 Min Read
ಕರ್ನಾಟಕಪ್ರಮುಖ

Linganamakki Dam ಲಿಂಗನಮಕ್ಕಿ ಜಲಾಶಯದಲ್ಲಿ ನೀರಿಲ್ಲ: ವಿದ್ಯುತ್ ಉತ್ಪಾದನೆ ಸ್ಥಗಿತ

1 Min Read
filmಕರ್ನಾಟಕಪ್ರಮುಖ

Kichcha Sudeep: 6.5 ಕೋಟಿ ರೂ. ಬೆಲೆಯ ಕ್ಯಾರವನ್ ಖರೀದಿಸಿದ ಕಿಚ್ಚ ಸುದೀಪ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?