newsics.com | ನ್ಯೂಸಿಕ್ಸ್
ಬೆಂಗಳೂರು: ಕೆಎಂಎಫ್ ನಂದಿನಿ ಹಾಲು ಚೆನ್ನಾಗಿಲ್ಲ ಅಂದರೆ ನೀವು ಕುಡಿಬೇಡಿ. ಆದರೆ, ವಿಷಪೂರಿತ ಎಂದು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೀರಾ? ಎಂದು ವೈದ್ಯೆಯೊಬ್ಬರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂದಿದೆ. ಜತೆಗೆ ಅವರ ವಿರುದ್ಧದ ಪೊಲೀಸ್ ಎಫ್‌ಐಆರ್ ರದ್ದು ಮಾಡಲು ನಿರಾಕರಿಸಿದೆ.
ನಂದಿನಿ ಹಾಲು ವಿಷಪೂರಿತವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ ಮಾಡಿ ಹೇಳಿದ್ದ ವೈದ್ಯೆ ಡಾ.ಶರಣ್ಯ ಎಂಬುವರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೆಲ ತಿಂಗಳ ಹಿಂದೆ ಎಫ್‌ಐಆರ್ ದಾಖಲಾಗಿತ್ತು. ಆ ಪ್ರಕರಣಕ್ಕೆ ತಡೆ ಕೋರಿ ವೈದ್ಯೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಸೋಮವಾರ ವಿಚಾರಣೆ ಆರಂಭದಲ್ಲಿ ಹೈಕೋರ್ಟ್ ಪೀಠವು, ” ನೀವು ಹೇಗೆ ನಂದಿನಿ ಹಾಲು ವಿಷಪೂರಿತವಾಗಿದೆ ಎಂದು ಹೇಳುತ್ತೀರಾ? ಹಾಗೆ ಹೇಳಿ ಜನರನಲ್ಲಿ ಆತಂಕ ಮೂಡಿಸಿದ್ದೀರಿ. ನೀವು ಹಾಲು ಪರೀಕ್ಷೆ ಮಾಡಿ, ದೃಢೀಕರಣ ಮಾಡಿದ್ದೀರಾ? ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದೀರಾ?” ಎಂದು ಸಾಲು ಸಾಲು ಪ್ರಶ್ನೆಯನ್ನು ವೈದ್ಯೆಗೆ ಕೇಳಿತು.
ಹೈಕೋರ್ಟ್‌ನಿಂದ ತರಾಟೆ
ಇನ್‌ಸ್ಟಾಗ್ರಾಂ ಇರುವುದು ಇಂತಹ ಕೆಲಸ ಮಾಡುವುದಕ್ಕಾಗಿಯೇ? ಹಾಲು ಚೆನ್ನಾಗಿಲ್ಲ ಅಂದ್ರೆ ನೀವು ಕುಡಿಬೇಡಿ. ಇಂತಹ ಕೆಲಸ ಏಕೆ ಮಾಡ್ತೀರಾ? ಎಂದು ನ್ಯಾಯಮೂರ್ತಿಗಳ ಪೀಠವು ತರಾಟೆಗೆ ತೆಗದುಕೊಂಡಿತು.
ಸರ್ಕಾರಕ್ಕೆ ನೋಟಿಸ್ ಜಾರಿ
ವೈದ್ಯ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿದ ಪೀಠ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಪೋರ್ನ್ ವಿಡಿಯೋ ವ್ಯಸನ: 9 ತಿಂಗಳ ಮಗು ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ!