newsics.com/ನ್ಯೂಸಿಕ್ಸ್
ಛತ್ತೀಸ್‌ಗಢ ರಾಜ್ಯದ ಕೊರಿಯಾ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ತನ್ನ ಪತ್ನಿಯ ಮೇಲೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ. ತನ್ನ ಮಕ್ಕಳ ಎದುರಲ್ಲೇ ಪತ್ನಿಯನ್ನು ಹಿಂಸೆಗೆ ಒಳಪಡಿಸಿದ್ದಾನೆ.
ಜೂನ್ 14ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪಾಂಡೋಪಾರಾ ಗ್ರಾಮದ ಜಿತೇಂದ್ರ ಘಾಸಿಯಾ ಎಂಬಾತನು 15 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಮಹಿಳೆಯೊಂದಿಗೆ ನಾಲ್ವರು ಮಕ್ಕಳನ್ನು ಹೊಂದಿದ್ದಾನೆ. ಆದರೆ, ಪತ್ನಿಯ ವರ್ತನೆ ಬಗ್ಗೆ ಅನುಮಾನ ಹೊಂದಿದ್ದ ಆತ ಒಂದು ವರ್ಷದ ಹಿಂದೆ ಆಕೆಯನ್ನು ಬಿಟ್ಟು ಹೋಗಿದ್ದನು. ನಂತರ ಆ ಮಹಿಳೆ ತನ್ನ ಪರಿಚಯದ ವ್ಯಕ್ತಿಯೊಬ್ಬರೊಂದಿಗೆ ವಾಸಿಸುತ್ತಿದ್ದಾಳೆ ಎಂಬ ಮಾಹಿತಿ ಇದೆ.
ಈ ಹಿನ್ನೆಲೆಯಲ್ಲಿ ಜೂನ್ 14ರಂದು ಗ್ರಾಮಕ್ಕೆ ಬಂದ ಘಾಸಿಯಾ, ಪತ್ನಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾನೆ. ಮೊದಲಿಗೆ ಮಕ್ಕಳ ಎದುರಲ್ಲೇ ಆಕೆಯ ಕೈ-ಕಾಲುಗಳನ್ನು ಕಟ್ಟಿ ಕೂದಲು ಕತ್ತರಿಸಿದ್ದಾನೆ. ನಂತರ ತನ್ನೊಂದಿಗೆ ತಂದಿದ್ದ ಬ್ಲೇಡ್‌ನಿಂದ ತಲೆ ಬೋಳಿಸಿದ್ದಾನೆ. ಅಷ್ಟೇ ಅಲ್ಲದೆ, ಬಲವಂತವಾಗಿ ಮೂತ್ರ ಕುಡಿಸಿ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದಾನೆ.
ಇದರಿಂದಲೂ ತೃಪ್ತನಾಗದೇ ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಮರುದಿನ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ..
ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ